Thursday, July 23, 2009

ಅಲ್ಲಿ ಶ್ರಾವಣವಂತೆ

ಅಲ್ಲಿ ಶ್ರಾವಣವಂತೆ
ಬಿಡಗೊಡದೆ ಸುರಿವ ಮಳೆ
ಹನಿ ಹನಿಯಲ್ಲೂ ಹೊಳೆಯುತಿರುವುದು ನನ್ನ ನೆನಪೇ ?
ಶ್ರಾವಣದ ಮುಸ್ಸಂಜೆ
ಮಬ್ಬುಗತ್ತಲು ಕವಿಯೆ
ದೇವರೊಳದಲಿ ದೀಪ ಬೆಳಗುವಾ ವೇಳೆ
ಕುಣಿವ ನೆರಳಲಿ ಹುಡುಕಿದ್ದು ನನ್ನ ಚಿತ್ರವನೇ?
ಚಂದ್ರನಿಲ್ಲದ ಇರುಳು
ಶ್ರಾವಣದ ಮಳೆಸುರಿದು ತುಂಬಿದಂಗಳದಲ್ಲಿ
ಜಿರ ಜಿರನೆ ಹನಿ ಬೀಳುವಾಗ ನೀ
ಆಲಿಸಿದ್ದು ನನ್ನ ಗೆಜ್ಜೆಯ ಸದ್ದೇ ?

ಇಲ್ಲಿ ಶ್ರಾವಣವಿಲ್ಲ
ಹೊರಗೆ ಹನಿವ ಮಳೆಯೇನಿಲ್ಲ.
ಹೊಳೆವ ಹನಿಗಳಿಗೆ ಬೊಗಸೆಯೊಡ್ಡಿ
ದೇವರೊಳಗಣ ದೀಪದಲೇ ಹಣತೆ ಬೆಳಗುತ್ತಾ
ಮೋಡಕವಿದ ಬಾನಿನಲ್ಲಡಗಿದ ಚಂದಿರನ
ಹುಡುಕುವೆನೆಂದು ಒದ್ದೆಯಂಗಳದಲ್ಲಿ ಹೆಜ್ಜೆ ಹಾಕುವಾಗ
ನನ್ನ ಗೆಜ್ಜೆ ಸದ್ದಿಗೆ ನೀನು ನಕ್ಕಿದ್ದೆಲ್ಲ
ನೆನಪಮಾಲಿಕೆಯಲಿ ಮುತ್ತಂತೆ ನೇಯುತ್ತಾ
ಕಪ್ಪುಗೂಡಿದ ಸಂಜೆ ಕಿಟಕಿಯಾಚೆ ನೋಟ ನೆಟ್ಟು
ಯಾರದೋ ಬರುವನ್ನು ಕಾಯುವಾಗ
ಮನದಲ್ಲಿ ಮಾತ್ರ ಅದೇಕೋ ಮಳೆ ಸುರಿವ ಸದ್ದು.

10 comments:

sunaath said...

ಗೀತೆ ಭಾವಪೂರ್ಣವಾಗಿದೆ.

Unknown said...

ವಾವ್! ತುಂಬ ಸುಂದರವಾಗಿದೆ.

Niveditha said...

Tumbaa channaagide.. Specially these lines..

ದೇವರೊಳದಲಿ ದೀಪ ಬೆಳಗುವಾ ವೇಳೆ
ಕುಣಿವ ನೆರಳಲಿ ಹುಡುಕಿದ್ದು ನನ್ನ ಚಿತ್ರವನೇ?

ಸುಪ್ತದೀಪ್ತಿ said...

ಊರು ಬಿಟ್ಟು, ದೇಶ ಬಿಟ್ಟು ಮೆಚ್ಚಿದ ಜೀವದೊಡನೆ ಬಂದವಳೇ, ಮೆತ್ತಿದ ಪ್ರೀತಿಯೊಳಗೆ ಕಾಡುವ ನೆನಪುಗಳನ್ನು ನೆನೆಸಿಕೊಂಡ ರೀತಿ ಇಷ್ಟವಾಯ್ತು ಹುಡುಗೀ. ಶ್ರಾವಣ ಮನದೊಳಗೇ, ಹಬ್ಬಗಳನೆಲ್ಲ ಸಾಲುಸಾಲಾಗಿ ತರುತ್ತಿರಲಿ.

ಅನಿಕೇತನ ಸುನಿಲ್ said...

ಶ್ಯಮಾಜಿ....
ತುಂಬಾ ದಿನಗಳ ನಂತರ ಲೇಖನಿ ಹಿಡಿದಿದ್ದೀರಿ ಅನ್ನೋದೇ ನಂಗೆ ತುಂಬಾ ಖುಷಿ..:-)
ತುಂಬಾ ಚೆಂದದ ಪದ್ಯ.....ಭಾವಗಳನ್ನ ಶ್ರಾವಣದ ಮಳೆ ಹನಿಯಷ್ಟೇ ತಿಳಿಯಾಗಿ ಸ್ಪುರಿಸಿದ್ದೀರಿ...
ಅಭಿನಂದನೆಗಳು :-)
ದಯವಿಟ್ಟು ಬರಿತಾ ಇರಿ....
ಅನಿಕೇತನ ಸುನಿಲ್.

ದಿನಕರ ಮೊಗೇರ said...

male heege suriyutta irali... nimma baravanigeya male kooda...

ಶ್ಯಾಮಾ said...

pratikriyisida ellarigoo dhanyavaadagaLu

Shyama

ಜಲನಯನ said...

ಶ್ಯಾಮಾ, ಶ್ರಾವಣ ಇರುವೆಡೆ..ಇಲ್ಲದೆಡೆಗಳ ..ವಿಹಂಗಮನೋಟದಂತೆ ಮೂಡಿವೆ ಭಾವನೆಗಳನ್ನು ಮೈಗೂಡಿಸಿಕೊಂಡ ಪದ-ಸರ.....ಅಭಿನಂಅದನೆಗಳು.

P.P said...
This comment has been removed by the author.
P.P said...

ನಿಮ್ಮ ನೆನಪಿನಂಗಳದಲ್ಲಿ ಅಲೆದಾಡಲು ನನಗೆ ಅನುಮತಿ ಇದೆಯಾ?