
ಏನೇನಿರಲಿಲ್ಲ ನನ್ನ ಪುಟ್ಟದೊಂದು ಲೋಕದಲ್ಲಿ
ಆದರೂ ಅದು ಮತ್ತಿನ್ನೇನನ್ನು ಹುಡುಕಲೆಂದು ಹೊರಟು ಬಿಟ್ಟೆನೋ ಗೊತ್ತಿಲ್ಲ ನನ್ನ ಆ ಪುಟ್ಟ ಲೋಕದಿಂದ ನಾನು ....
ಮೊದ ಮೊದಲು ಅಲ್ಲಿಂದ ಹೊರ ಬಂದಾಗ ಎಲ್ಲ ಬಹು ಸುಂದರವಾಗೇ ಕಾಣುತ್ತಿತ್ತು ..
ಹೊಸ ಲೋಕವೇ ಬಹು ಚೆಂದ ಅನ್ನಿಸುತ್ತಿತ್ತು..
ಕಂಡು ಕೇಳರಿಯದ ಆ ಹೊಸ ಲೋಕವೇ ನನ್ನದೆಂಬಂತೆ ನಾ ನಡೆಯತೊಡಗಿದ್ದೆ, ಗೊತ್ತಿಲ್ಲದಿದ್ದರೂ ಗೊತ್ತು ಗುರಿಗಳು ...
ನನ್ನ ಆ ಪುಟ್ಟ ಲೋಕವನ್ನು ಮರೆತೇಬಿಟ್ಟಿದ್ದೆ
ಒಂದೊಂದು ಹೆಜ್ಜೆಯಲ್ಲೂ ಗೆಲುವ ಕಂಡಾಗ..
ಎಲ್ಲ ಸಾಧಿಸಿಬಿಟ್ಟೆನೆಂದು ನಗುತ್ತಿದ್ದೆ..
ಈ ಹಾದಿಯಲ್ಲಿ ಸಾಗಿಬರುವಾಗ ಎಷ್ಟೋ ಸಲ ಮುಗ್ಗರಿಸಿದ್ದೇನೆ,
ಎಷ್ಟೋ ಸಲ ಎಡವಿ ಬಿದ್ದಿದ್ದೇನೆ,
ಆದರೂ ಏನೆಲ್ಲ ಕಲಿತಿದ್ದೇನೆ ...
ಏನೆಲ್ಲ ಪಡೆದುಕೊಂಡೆನೋ ಅಷ್ಟೇ ಕಳೆದುಕೊಂಡಿದ್ದೇನೆ ..
ಇನ್ನೆಷ್ಟೋ ದೂರ ಸಾಗಿದಾಗ ಒಂದೊಂದೇ ಅರಿವಾಗತೊಡಗಿತು,
ನನ್ನ ಆ ಪುಟ್ಟ ಲೋಕದಲ್ಲಿದ್ದ ಚಿಕ್ಕ ಚಿಕ್ಕ ಖುಶಿಗಳು, ಆ ಸಂತೃಪ್ತಿ ಇಲ್ಲಿಲ್ಲವೆಂದು
ಹೊಸ ಲೋಕ ಬೇಸರ ತರಿಸಿತ್ತು,
ಇಷ್ಟು ದೂರ ಸಾಗಿ ಬಂದ ಮೇಲೆ..
ಇವತ್ತೇಕೋ ಹಳೆ ನೆನಪುಗಳ ಗಾಳಿ ರೋಯ್ಯನೆ ಬೀಸುತ್ತಿದೆ
ಆ ನೆನಪಿನ ಗಾಳಿಯ ರಭಸವೆಷ್ಟಿದೆಯೆಂದರೆ ಮುಂದೆ ಹೆಜ್ಜೆ ಕಿತ್ತು ಮುಂದಿಡಲು ಆಗುತ್ತಿಲ್ಲ
ಒಮ್ಮೆಲೇ ಯೋಚಿಸುತ್ತೇನೆ ಮರಳಿ ಹೋಗಿ ಬಿಡಲೇ ನನ್ನ ಆ ಪುಟ್ಟ ಲೋಕಕ್ಕೆ ಮತ್ತೊಮ್ಮೆ
ಸೇರಿಕೊಂಡು ಬಿಡಲೇ ಆ ಬೆಚ್ಚನೆಯ ಗೂಡನ್ನು ಇನ್ನೊಮ್ಮೆ,
ಹೇಗೂ ನಡೆದು ಬಂದ ದಾರಿಯಲ್ಲಿ ಹೆಜ್ಜೆ ಗುರುತುಗಳಿವೆಯಲ್ಲ
ದಾರಿ ಹುಡುಕುವುದೇನೋ ಕಷ್ಟವಿಲ್ಲ
ಹೆಜ್ಜೆ ಗುರುತುಗಳ ಜಾಡಿನಲ್ಲೇ ನಡೆಯಬಹುದಲ್ಲ,
ಹಿಂತಿರುಗಿ ನೋಡಿದರೆ ಏನಿದೆ ಅಲ್ಲಿ ,
ಆ ಉಸುಕಿನ ನೆಲದಲ್ಲಿ,
ನೂರು ನೂರಾರು ಗುರುತಿಸಲಾಗದ ಹೆಜ್ಜೆಗಳು,
ಅಲೆಗಳ ಒಡಲಿನಲ್ಲಿ ಅಳಿಸಿಹೋದ ಇನ್ನೆಷ್ಟೋ ಹೆಜ್ಜೆಗಳು
ನನ್ನದೇ ಹೆಜ್ಜೆ ಗುರುತು ನನಗೆ ಕಾಣುತ್ತಿಲ್ಲ...
ಮರಳುವುದಾದರೂ ಹೇಗೆ ನಾನು ನನ್ನ ಆ ಪುಟ್ಟ ಲೋಕಕ್ಕೆ?
ನನ್ನಾಸೆಯನ್ನು ಅಂಗಯ್ಯಲ್ಲಿಟ್ಟು ಸುಮ್ಮನೇ ಗಾಳಿಗೆ ಊದಿಬಿಟ್ಟೆ...
9 comments:
ಮರಳುವುದಾದರೂ ಹೇಗೆ?
ಇಲ್ಲಾ ಶ್ಯಾಮಾ ನಾವು ಮರಳಲಾಗದ ಹಂತ ತಲುಪಿದ್ದೇವೆ.
ನಾವು ಆ ನಮ್ಮ ಪುಟ್ಟ ಪ್ರಪಂಚದಲ್ಲೇ ಇರೋಕೆ ಸದ್ಯಾನೆ ಇಲ್ಲಾ. ಒಮ್ಮೆ ನಾವು ಪ್ರಯತ್ನ ಪಟ್ಟು ಇದ್ದರು ಈ ಸಮಾಜ ನಮ್ಮನ್ನು ನಮ್ಮ ಪುಟ್ಟ ಪ್ರಪಂಚದಲ್ಲಿ ಇರಲು ಬಿಡಲಾರದು.
ನಾವು ಪುಟ್ಟ ಪ್ರಪಂಚದಲ್ಲಿಯೇ ಇದ್ದರೆ ನಿಂತ ನೀರಿನಂತಾಗುತ್ತೆವೆ. ನಮ್ಮ ಜೀವನ ಹರಿಯುವ ನದಿಯಾಗ ಬೇಕು. ಅದರಲ್ಲಿ ಏರಿಳಿತ ಇರಲೇ ಬೇಕು ಅದೇ ಜೀವನ.
ಮತ್ತೆ ನಿನ್ನ ಕವನದಲ್ಲಿ ನೋವು ಹತಾಷೆ ತುಂಬಿದ್ದೆ. ನಂಗೋಸ್ಕರ ಒಂದು ಹ್ಯಾಪಿ ಎಂಡಿಗ್ ಇರೋ ಕವಿತೆ ಬರಿಯೆ.
wordings ತುಂಬಾ ಚನ್ನಾಗಿ ಇದ್ದು ಯಾವಾಗಿನಂತೆ.
ಹ್ಮ್.. 'ಚಿತ್ರಕವನ' ಚನಾಗಿದ್ದು. :)
ಏನು ಮಾಡಲಿ ಹತಾಶೆ ನೋವು ತುಂಬಿದೆ ಇದರಲ್ಲಿ.. ಆದರೆ ಈ ಸಾರಿ ಕೊಡಲು ಕಾರಣ ಇದೆ. ಮೊನ್ನೆ ಆಅ ಚಿತ್ರವನ್ನು ನೋಡಿದಾಗ ಯಾವಾಗಲೋ ನಾನು ಬರೆದಿದ್ದ ಹಿಂದಿಯ ಶಾಯರಿಯ ಸಾಲುಗಳು ನೆನಪಾದವು.. "kyaa kuch nahi thaa meri ek choti si duniyaa me.. naa jaane kya dundane nikal chali..."
ಮುಂದಿನ ಸಾಲುಗಳು ಎಷ್ಟು ಯೋಚಿಸಿದರೂ ನೆನಪಾಗಲಿಲ್ಲ.. ಯಾವಾಗ ಎಲ್ಲಿ ಬರೆದಿಟ್ಟಿದ್ದೆನೋ ಗೊತ್ತಿಲ್ಲ.. ಅದಕ್ಕೆ ಹೀಗೆ ಬರೆಯೋಣ ಅನ್ನಿಸಿತು ...ಈ ಕವನ ಮೂಡಿ ಬಂತು
thanx for the comments :)
ಮತ್ತೆ ವಿಷಾದರಾಗಕ್ಕೆ ಹೋದ್ಯಾ? ಎಂತ ಆಯ್ತು? ಯಾರು ಕೈ ಕೊಟ್ರು?:-)
enu agilla.. yaroo kai kottilla :)
eno haage baryona annistu barade
ಮುಂದಿನ ವಿಷಾದ ಕವಿತೆ ಬರ್ಲಿ:-))
ಹೇ, ನಿನ್ನ ಕವನನ ನಂಗೆ ನನ್ನ ೨ ಫ್ರೆಂಡ್ಸ್ ಕಳಿಸಿದ್ದ. ಯಾರು ಬರೆದಿಕ್ಕು ಅಂತ ಯೋಚ್ನೆ ಮಾಡಿದಿ. ಆಕಸ್ಮಿಕವಾಗಿ ನಿನ್ನ ಬ್ಲಾಗ್ ನೋಡಿದಾಗ ಗೊತ್ತಾತು ಇದು ನಿಂದು ಅಂತ...
ತುಂಬಾ ಚೆನ್ನಾಗಿದ್ದು.
ಥ್ಯಾಂಕ್ಸ್ ಯಜ್ಞೇಶ್... :)
Post a Comment