Sunday, April 29, 2007

ಕನಸಿನ ಗೋಪುರ..

ಕಟ್ಟಬೇಡ ನೀ ಎಂದೂ ನಿನ್ನ
ಕನಸಿನ ಗೋಪುರವ
ಸಾಗರದ ತೀರದಲ್ಲಿ
ಏಕೆಂದರೆ ಸಾಗರದ ಅಲೆಗಳಿಗೆ ಇನ್ನಿಲ್ಲ
ಇಷ್ಟು ಸಹ ಕರುಣೆ
ನೀ ಕಟ್ಟಿ ಶೃಂರಿಸಿದ ಗೋಪುರವ
ತನ್ನ ಓಡಲೊ ಗೆ ಒಂದಾಗಿಸುವುದು
ಕ್ಷಣ ಮಾತ್ರದಲ್ಲೆಲ್ಲ

ಬೇಡ ಬಾ ನೀನು
ಸಾಗರ ತೀರದ ಆಸೆಯ ಬಿಟ್ಟು
ಮರಳ ಗೋಪುರ ನಿಲ್ಲುವುದಿಲ್ಲ
ಬಂದುಬಿಡು ನೀನು
ಟ್ಟೋ ನಾವು ನಮ್ಮೂರ
ಚಂದದ ಕೆರೆಯಂಚಿನಲ್ಲಿ
ಮಣ್ಣಿನಾ ಗೋಪುರವ
ಶೃಂರಿಸೋಣ ಕನಸುಗಳ
ಬಣ್ಣ ಬಣ್ಣದ ಚಿತ್ತಾರಗಳಿಂದ
ಏಕೆಂದರೆ ಯಾವ ಅಲೆಗಳ
ಭಯವೂ ಇಲ್ಲಿಲ್ಲ....

Tuesday, April 24, 2007

ಸುಮ್ನೇ ಒಂದಿಷ್ಟು

ಅಷ್ಟಿಷ್ಟು ಹೊತ್ತು ಅಲೆಗಳ ಅಬ್ಬರವಿಲ್ಲದ ಶಾಂತ ಸಾಗರ...
ಮತ್ತೆ ಅದೆಷ್ಟೋ ಹೊತ್ತು ಬರೀ ಅಲೆಗಳ ಅಬ್ಬರ,
ದಂಡೆಗೆ ಪಿಸುಮಾತ ಹೇಳಿ ಓಡಿ ಹೋಗುವ ಲೆಕ್ಕವಿಲ್ಲದಷ್ಟು ಅಲೆಗಳು..
ಅಂಥ ಅದೆಷ್ಟೋ ಅಲೆಗಳು ಬಂದು ಹೋದರೂ
ಅಳಿಸಿಹೋಗದ ಅದೆಷ್ಟೋ ಹೆಜ್ಜೆ ಗುರುತುಗಳು...
ಇದೆಂಥ ಸಾಗರ ತೀರಾ?
ಅಲ್ಲ ಅದು ಸಾಗರ ತೀರವಲ್ಲ!! ಅದು ನನ್ನ ಮನಸ್ಸು!!
_________ ***___________

ನನ್ನದು ಕಲ್ಲು ಹೃದಯವೆಂದು ನೀ ಹೇಳಿದೆಯಲ್ಲ
ಅದು ಹಾಗಲ್ಲವೋ ಹುಡುಗಾ..
ಪ್ರೀತಿಯೆಂಬುದು ನನ್ನ ಮನಸ್ಸಿನಲ್ಲಿ ಇನ್ನೂ ಮೊಗ್ಗಾಗಿದ್ದಾಗ
ಅದೆಲ್ಲಿ ನಲುಗಿ ಹೋಗುವುದೋ ಎಂದು ನಾ ರಕ್ಷಿಸುತ್ತಿದ್ದ ಪರಿ ಅದು
ಅಷ್ಟೂ ಅರಿಯದ ನೀನು ನನ್ನ
ಪ್ರೀತಿಯ ಮೊಗ್ಗು ಅರಳಿ ಹೂವಾಗುವ ಮುನ್ನವೇ
ಚಿವುಟಿಹಾಕಿದೆಯಲ್ಲೋ ಹುಡುಗಾ....

_________ ***___________

ಅಲ್ಲಿ ಅವಳು ಇರಲಿಲ್ಲ
ಅಲ್ಲಿ ಅವನೂ ಇರಲಿಲ್ಲ....
ಆದರೆ ಅಲ್ಲಿ ಅವಳ ಕಣ್ಣಿಂದ
ಜಾರಿ ಬಿದ್ದ ಹನಿ ಯೊಂದಿತ್ತು....
ಅವನು ಬಿಟ್ಟು ಹೋದ ಅದೆಷ್ಟೋ ನೆನಪುಗಳ ಪರಿಮಳವಿತ್ತು.....

Thursday, April 12, 2007

ಕೆಂಪು ಅಂಗಿ ಗೊಂಬೆ.....


ಅವತ್ತೊಂದು ದಿನ office ನಿಂದ PG ಗೆ ಹೋದಾಗ ಬಾಗಿಲು ನೂಕಿ ಒಳ ಹೋಗುತ್ತಿದ್ದಂತೆಯೇ ದೀಕ್ಷಾ ನನ್ನ ಎದುರಿಗೆ ಓಡೋಡಿ ಬಂದು ನಿಂತಿದ್ದಳು. ದೀಕ್ಷಾ 3 ವರ್ಷದ ಪುಟಾಣಿ. ಬೆಳಗಿಂದ ಸಂಜೆಯವರೆಗೆ ಅಲ್ಲೇ ಆಡಿಕೊಂಡಿದ್ದು ಅವರಮ್ಮ office ಇಂದ ಬಂದಮೇಲೆ ಮನೆಗೆ ಹೋಗುವುದು ಅವಳ ದಿನಚರಿ.
ನನ್ನೆದುರಿಗೆ ಡಿ ಬಂದು ನಿಂತವಳೇ ಅಂದಳು "ಶ್ಯಾಮಕ್ಕ ನೋಡಿಲ್ಲಿ ನನ್ನ ಪಾಪು..." ಅವಳ ಕಯ್ಯಲ್ಲಿ ಮಗುವಿನಂತೆಯೇ ಕಾಣುವ ಒಂದು ಗೊಂಬೆ ಇತ್ತು... "ಹೌ ಲ್ವೇ ಯಾರೇ ಕೊಡ್ಸಿದ್ದು ಯಾವಾಗ್ಲೇ ತಂದೆ" ಅಂತೆಲ್ಲ ಪ್ರಶ್ನೆ ಹಾಕಿ ಅವಳನ್ನು ಮಾತಾಡಿಸುತ್ತಾ ಒಳ ನಡೆದೆ. ಅವಳ ಸಂಭ್ರಮ ಹೇಳತೀರದು. ಗೊಂಬೆಗೆ ಏನೆಲ್ಲ ಉಪಚಾರ ಮಾಡುತ್ತಿದ್ದಳು. 2 ದಿನ ಇದೆ ಮುಂದುವರೆದಿತ್ತು. 3 ನೇ ರಾತ್ರಿ ಊಟಕ್ಕೆ ಕೆಳಗೆ ಹೋದಾಗ ಅವಳ ಅಜ್ಜಿ ಹೇಳುತ್ತಿದ್ದರು
ದೀಕ್ಷಾ ಅವಳ ಗೊಂಬೆನಾ ಇಲ್ಲೇ ಮರೆತು ಬಿಟ್ಟು ಹೋಗಿದ್ದಾಳೆ ಅವಳಮ್ಮನ ಕೈಲಿ phone ಮಾಡಿಸಿಕೊಂಡು phone ಅಲ್ಲಿ ಒಂದೇ ಸಮ ಜೋರಾಗಿ ಅಳುತ್ತಿದ್ದಳಂತೆ. "ನನ್ನ ಪಾಪುಗೆ ಏನಾದ್ರೂ ಆಗಿಬಿಟ್ರೆ. ಅದ್ಕೆ ಇವತ್ತು ರಾತ್ರಿ ಅದನ್ನ ಶ್ಯಾಮಕ್ಕನ ಹತ್ರ ಮಲಗಿಸು ಅಜ್ಜಿ " ಅಂತ ಅಂದ್ಲಂತೆ.... ಅವಳ ಮಾತಿಗೆ ನಗಬೇಕೋ ಅಥವಾ ಅವಳ ಮುಗ್ಧತೆಗೆ ಮರುಕ ಪಡಬೆಕೋ ಗೊತ್ತಾಗಲಿಲ್ಲ. ಮರುದಿನ office ನಿಂದ ಬರುವಷ್ಟರಲ್ಲಿ ತನ್ನ ಗೊಂಬೆಯೊಂದಿಗೆ ನಿಂತಿದ್ದಳು ಬಾಗಿಲ ಬಳಿ. " ಏನೇ ಸಿಕ್ತೇನೆ ನಿನ್ನ ಪಾಪು. ರಾತ್ರಿ ಎಲ್ಲ ನನ್ನ ಪಕ್ಕಾ ಮಲಗಿಸಿಕೊಂಡಿದ್ದೆ ಬಾರಿ ಅಳುತ್ತಿತ್ತು ರಾತ್ರಿ ಇಡೀ. ಏನ್ ಪಾಪುನೋ ನಿಂದು " ಅಂದೆ ... ನಾನು ಹೇಳಿದ್ದನ್ನು ನಂಬಿದವಂತೆ ಪಿಳಿ ಪಿಳಿ ಕಣ್ಣು ಬಿಡುತ್ತಾ ನನ್ನೇ ನೋಡಿದಳು. ಕೊಡೆ ಇಲ್ಲಿ ಒಂದು ಸಲ ಪಾಪುನಾ ಅಂದ್ರೆ ಕೊಡಲ್ಲಾ ಅಂತ ಡಿ ಹೋದ್ಲು... ಮೂಲೆಯಲ್ಲೆಲ್ಲೋ ಕೂತು ಆಡುತ್ತಿದ್ದ ಅವಳನ್ನೇ
ನೋಡುತ್ತಾ ಅಲ್ಲೇ ಕುಳಿತೆ... ಒಂದು ಕ್ಷಣ ಅವಳನ್ನು ನೋಡುತ್ತಿದ್ದೇನಾ ಅಥವಾ ನನ್ನೇ ನಾನು ನೋಡುತ್ತಿದ್ದೇನಾ ಗೊತ್ತಾಗಲಿಲ್ಲ. ಹೌದು ಗೊಂಬೆಯೊನೆ ಆಡುತ್ತಿದ್ದ ಅವಳನ್ನು ನೋಡುತ್ತಾ ನಾನು ನನ್ನ ನೆನಪಿನಂಗಳದಲ್ಲಿ ನಿಂತಿದ್ದೆ.

ನಾನು ಚಿಕ್ಕವಳಿದ್ದಾಗ ನನಗೆ ಗೊಂಬೆಗಳೆಂದರೆ ಅದೇನೋ ವ್ಯಾಮೋಹ. ವ್ಯಾಮೋಹಕ್ಕಿಂತ ಹೆಚ್ಚಾಗಿ ಹುಚ್ಚು ವ್ಯಾಮೋಹ ಅಂತಲೆ ಅನ್ನಬಹುದೇನೋ. ಎಷ್ಟು ಗೊಂಬೆ ಇದ್ದರೂ ಮತ್ತೆ ಮತ್ತೆ ಹೊಸ ಗೊಂಬೆ ಬೇಕೆಂದು ಹಟ ಮಾಡುತ್ತಿದ್ದೆ. ನನ್ನ ಹತ್ತಿರ ಗೊಂಬೆಗಳಿಂತುಂಬಿದ ಒಂದು ಚೀಲವೇ ಇತ್ತು. ಮತ್ತೊಂದು ವಿಚಿತ್ರ ಅಂದರೆ ಯಾವುದಾದರೂ ಗೊಂಬೆ ಕೈಯೋ ಕಾಲೋ ಮುರಿದು ಹಾಳಾದರೆ ನಾನು ಅದನ್ನು ಎಸೆಯುತ್ತಿರಲಿಲ್ಲ. ನನಗೆ ಅಂತ ಗೊಂಬೆ ಗಳ ಮೇಲೆ ಅದೇನೋ ಕರುಣೆ. ಪಾಪ ಕಾಲಿಲ್ಲ್ಲ ಕೈ ಇಲ್ಲ ಅಂತ ಮತ್ತೂ ಅಕ್ಕರೆಯಿಂದ ಅವುಗಳ ಜೊತೆ ಆಡಿಕೊಳ್ಳುತ್ತಿದ್ದೆ.
ನನ್ನ ಈ ರೀತಿ ವರ್ತನೆಯಿಂದ ಮನೆಯಲ್ಲೆಲ್ಲರ ನಗುವಿಗೆ ಆಹಾರ ಬೇರೆ ಆಗಿದ್ದೆ.

ಒಂದ್ಸರಿ ನಮ್ಮೂರಲ್ಲಿ ಜಾತ್ರೆ ಇತ್ತು. ಜಾತ್ರೆ ಅಂದ್ರೆ ಕೇಳ್‌ಬೇಕ ಮತ್ತೂ ಗೊಂಬೆಗಳನ್ನ ತಗೋಬಹುದು ಅಂತ ನಂಗೆ ಖುಷಿಯೋ ಖುಷಿ. ಅವತ್ತು ಊರಿಂದ ಮಾವ ಬೇರೆ ಬಂದಿದ್ದರು ನಮ್ಮನ್ನು ಜಾತ್ರೆ ಸುತ್ತಿಸೋಕೆ. ನಾನು ಅಕ್ಕ ಇಬ್ರು ಮಾವನ ಜೊತೆ ಜಾತ್ರೆ ಸುತ್ತೋಕೆ ಹೋಗಿದ್ವಿ. ಏನು ಬೆಕ್ರೆ ಅಂತ ಕೇಳಿದ್ದಕ್ಕೆ ನನ್ ಹತ್ರ ಉತ್ತರ ರೆಡಿ ಇತ್ತು " ಗೊಂಬೆ" ಅಂತ ಸರಿ ನಿಂಗೆ ಯಾವ್ದೂ ಬೇಕೋ ತಗೋ ಕೋಡಸ್ತೀನಿ ಅಂದ ಮಾವ. ಅಲ್ಲೊಂದು ಅಂಗಡಿ ಮುಂದೆ ಹೋಗುವಾಗ ಒಂದು ಗೊಂಬೆ ನಂಗಿಷ್ಟವಾಗಿಬಿಡ್ತು. ಕೆಂಪನೆಯ ಮೊಣಕಾಲಿನವರೆಗೆ ಇದ್ದ ವೆಲ್ವೆಟ್ ಅಂಗಿ ತೊಟ್ಟಿದ್ದ ಗೊಂಬೆಗೆ ಬಂಗಾರ ಬಣ್ಣದ ಕೂದಲು ಇತ್ತು. ಕೀ ಕೊಟ್ಟರೆ ಅಂತ ಡ್ರಮ್ ಬಾರಿಸುತ್ತಿತ್ತು ಗೊಂಬೆ. ನಾನು ಅದ್ನೆ ಕೊಂಡುಕೊಳ್ಳಬೇಕೆಂದು ನಿರ್ಧರಿಸಿಬಿಟ್ಟಿದ್ದೆ. ಮಾನೂ ಏನೂ ಇಲ್ಲ ಎನ್ನಲಿಲ್ಲ ಸರಿ ತಗೋ ಅಂತ ಕೊಡಸಿದರು. ನಂಗಂತೂ ಯಾವಾಗ ಮನೆಗೆ ಹೋಗಿ ಅದರೊಂದಿಗೆ ಆಡುತ್ತೇನೋ ಅಂತ ಯೋಚನೆ. ಅಂತೂ ಜಾತ್ರೆಯಲ್ಲೆಲ್ಲ ಅಡ್ದಾಡಿ
ಮನೆಗೆ ಬಂದಾಗ ಎಂಟು ಗಂಟೆ ಮೇಲಾಗಿತ್ತು...

ಬಂದವಳೇ ಅಪ್ಪಯ್ಯನಿಗೆ ಗೊಂಬೆ ತೋರಿಸಿದೆ. ಅವತ್ತೇಕೋ ಅಪ್ಪಯ್ಯ ಮೂಡ್ ಸರಿ ಇರ್ಲಿಲ್ಲ ಅಂತ ಕಾಣುತ್ತದೆ. " ಏನಿದು ಇಂಥ ಕೀಲಿ ಗೀಲಿ ತಿರುಗಿಸೋ ಗೊಂಬೆ ಯಾಕೆ ಬೇಕಿತ್ತು 2 ದಿನದಲ್ಲಿ ಹಾಳು ಮಾಡ್‌ಕೊಳ್ಳದಿದ್ರೆ ಕೇಳು ನೀನು " ಅಂತ ಬಯ್ದೇ ಬಿಟ್ಟರು. ಇಲ್ಲ ಇಲ್ಲ ನಾನೇನು ಹಾಳು ಮಾಡ್‌ಕೊಲ್ಲ ಅಂತ ಅಂದು ನನ್ನ ಪಾಡಿಗೆ ನಾನು ಕೀ ತಿರುಗಿಸುತ್ತಾ ಆಡಲು ಶುರುಮಾಡಿದೆ. ಎಲ್ಲರೂ ಊಟಕ್ಕೆ ಎದ್ದರೂ ನಾನು ಮಾತ್ರ ಆಡುತಲೇ ಇದ್ದೇ. ಅಮ್ಮ 4-6 ಸಲ ಕರೆದರೂ ಇರು ಬಂದೆ ಅಂತಂದೇನೇ ಹೊರತು ಎದ್ದು ಹೋಗಲಿಲ್ಲ. ಆಡುತ್ತಲೇ ಕುಳಿತಿದ್ದೆ. ಮತ್ತೊಮ್ಮೆ ಕೀ ತಿರುಗಿಸಿದೆ ಅರೆ ಸಲ ಗೊಂಬೆ ಅಲ್ಲಾ ಲೇ ಇಲ್ಲ ಮತ್ತೆ ಮತ್ತೆ ತಿರುಗಿಸಿದೆ ಊಹೂಂ. ಗೊಂಬೆ ಅಲ್ಲಾಲಿಲ್ಲಾ. ಹೊಟ್ಟೆಯಲ್ಲೆಲ್ಲಾ ಒಂಥರ ಆಯ್ತು. ಹಾಳಾಗಿಬಿಡತಾ ಗೊಂಬೆ. ಈಗಷ್ಟೇ ಬಯ್ಸಿಕೊಂಡಿದ್ದೇನಲ್ಲ. ಈಗ ಗೊತ್ತಾದ್ರೇ ಇನ್ನೆಷ್ಟು ಯ್ಯಬಹುದು. ನೆನೆಸಿಕೊಂಡಂತೆ ಇನ್ನೂ ಭಯ ಆಯ್ತು. ಸುಮ್ನೇ ಎದ್ದು ಒಳಗೆ ಹೋದೆ. ನನ್ನ ಮುಖ ನೋಡಿ ಎಲ್ಲರೂ ಏನೇ ಏನಾಯ್ತು ಅಂದರು. ಭಯ ಮಿಶ್ರಿತ ಧ್ವನಿಯಲ್ಲಿ "ಅದೂ ಅದೂ ಗೊಂಬೆ ಕೀ ಕೊಟ್ರೂ ಯಾಕೋ ಏನು ಮಾಡ್ತಾನೇ ಇಲ್ಲ" ಅಂದೇ. ಅದೆಲ್ಲಿತ್ತೋ ಸಿಟ್ಟು ಅಪ್ಪಯ್ಯನಿ ಗೆ
ಅದ್ಕೆ ಹೇಳಿದ್ದು ನಿಂಗೆ ಏನು ಸರಿ ಇಟ್ಕೋಳಕ್ಕೆ ಬರಲ್ಲ ಅಂತ ಚೆನ್ನಾಗಿ ಬಯ್ದು ಬಿಟ್ಟರು. ಒಂದು ಹೊಡೆತವೂ ಬಿತ್ತೋ ಏನೋ ಸರಿ ನೆನಪಿಲ್ಲ. ಜೋರಾಗಿ ಅಳುತ್ತಿದ್ದೆ. ಎಲ್ಲ ನೋಡುತ್ತಿರುವಂತೆಯೇ ಅಮ್ಮಂಗೆ ಏನನ್ನಿಸಿತೋ ನನ್ನ ಕೈಯಲ್ಲಿದ್ದ ಗೊಂಬೇನಾ ಕಿತ್ತುಕೊಂಡು ಒಳನಡೆದು ಬಿಟ್ಟಳು. ಅವತ್ತು ರಾತ್ರಿಯೆಲ್ಲ ಬಿಕ್ಕುತ್ತಲೇ ಮಲಗಿದ್ದೆ.

ಮರುದಿನ
ಬೆಳಗ್ಗೆ ಗೊಂಬೇನಾ ಕೊಡು ಅಮ್ಮ ಅಂದೇ. ಅಮ್ಮ "ನಿನ್ನೆ ಬಯ್ಸಿಕೊಂಡಿದ್ದು ಸಾಲದ ಗೊಂಬೆ ಏಲ್ಹೋಯ್ತೋ ನಂಗೊತ್ತಿಲ್ಲ. ಹೋಗು ಸುಮ್ನೇ" ಅಂದು ಬಿಟ್ಲು. ಎಷ್ಟು ಬೇಜಾರಾಯ್ತು. ಎಷ್ಟು ಇಷ್ಟ ಪಟ್ಟು ಕೊಂಡಿದ್ದೆ ಅದನ್ನ. ಕೆಂಪನೆಯ ವೆಲ್ವೆಟ್ ಅಂಗಿ, ಬಂಗಾರ ಬಣ್ಣದ ಕೂದಲು ಕಣ್ಣೆದುರಿಗೆ ಬಂದ ಹಾಗಾಯಿತು. ದಿನಾಲೂ ಕೇಳುತ್ತಿದ್ದೆ ಅಮ್ಮನ್ನ " ಅಮ್ಮ ಒಂದು ಸರಿ ಕೊಡು ಗೊಂಬೇನ ನಾನು ಇನ್ನೇನು ಮಾಡೋಲ್ಲ ಒಮ್ಮೆ ನೋಡಿ ಮತ್ತೆ ಅಲ್ಲೇ ಟ್ಟು ಬಿಡ್ತೀನಿ." ಏನಂದ್ರೂ ಅಮ್ಮ ನಂಗೊತ್ತಿಲ್ಲ ಅಂತಾನೆ ಹೇಳ್ತಿದ್ಲು. ಅಮ್ಮ ಮನೇಲಿ ಇಲ್ದೇ ಇದ್ದಾಗ ಅಥವಾ ಸ್ನಾನಕ್ಕೆ ಹೋದಾಗ ನಾನು ಅಕ್ಕ ಇಬ್ರೂ ಮನೆ ತುಂಬಾ ಹುಡುಕ್ತಿದ್ವಿ ಎಲ್ಲಿ ಇಟ್ಟಿರಬಹುದು ಅದನ್ನ ಅಂತ. ಆದ್ರೂ ಕಡೆಗೂ ಸಿಕ್ಕಲೇ ಇಲ್ಲ. ನನ್ನ ಕೆಂಪು ಅಂಗಿ ಗೊಂಬೆಯ ಚಿತ್ರ ಕೇವಲ ನನ್ನ ಕಣ್ಣಲ್ಲಿನ ಕನಸಾಗಿ ಬಿಡ್ತು.

ಈಗಲೂ ಮನೆಗೆ ಹೋದಾಗ ಒಮ್ಮೊಮ್ಮೆ ಅಮ್ಮನನ್ನು ಕೇಳುತ್ತೇನೆ " ಅಮ್ಮ ಈಗ್ಲಾದ್ರೂ ಹೇಳೆ ಎಲ್ಲಿ ಹೋಯ್ತು ಅದು ಅಂತ .ಅಮ್ಮ "ಇವಳಿಗೆ ಗೊಂಬೆ ಹುಚ್ಚು ಇನ್ನೂ ಹೋಗಿಲ್ಲ" ಅಂತ ಕ್ಕು ಡೆದುಬಿಡುತ್ತಾಳೆ. ಯಾಕೋ ಗೊತ್ತಿಲ್ಲ. ಇಷ್ಟೆಲ್ಲಾ ಆದರೂ ಬಹುಶಹ ನನ್ನ ಮಕ್ಕಳ ಕಾಲಕ್ಕಾದರೂ ಅಮ್ಮ ಮೊಮ್ಮಕ್ಕಳೆಂಬ ಪ್ರೀತಿಯಿಂದ ಗೊಂಬೆಯನ್ನು ಅವರಿಗೆ ಅಂತ ಹೊರ ತೆಗೆದ್ರೂ ತೆಗೆಯಬಹುದೇನೋ ಅಂತ ಒಂದು ಹುಚ್ಚು ಆಸೆ ಮನಸಲ್ಲಿ ಆಗಾಗ ಬರುವುದೂ ಇದೆ. ಅದೆಷ್ಟೊತ್ತು ಹೀಗೆ ನೆನಪಿನಂಗಳದಲ್ಲಿ ನಿಂತಿದ್ದೆನೋ ಏನೋ ದೀಕ್ಷಾ ನನ್ನನ್ನು ಕರೆಯುತಿದ್ದಳು. ನೆನಪಿನಂಗಳದಿಂದ ಈಚೆ ಬಂದೆ. ಅವಳು ಅನ್ನುತ್ತಿದ್ದಳು "ನೋಡು ನನ್ನ ಪಾಪು ನಿನ್ನ ಹತ್ರ ಹೋಗ್ತೀನಿ ಅಂತ ಅನ್ನುತ್ತಿದೆ" ಅವತ್ತ ನೋಡಿದೆ. ಕೈಯಲ್ಲಿ ತಿನ್ನಲು ಏನೋ ಹಿಡಿದು ತಂದಿದ್ದಳು ಅದಕ್ಕೆ ಅವಳಿಗೆ ಗೊಂಬೆ ಹಿಡಿದುಕೊಳ್ಳಲು ಕಷ್ಟವಾಗ್ತಿತ್ತು. ಅದಕ್ಕೆ ನಾಟಕ ಅಂತ ನಂಗೆ ಗೊತ್ತಾಗಿ ನಗು ಬಂತು. ಕೊಡು ಇಲ್ಲಿ ಅಂತ ಗೊಂಬೇನ ಕೈಗೆತ್ತಿಕೊಂಡು ಅವಳಂತೆಯೇ ಸೊಂಟದ ಮೇಲೆ ಇಟ್ಟುಕೊಂಡು ಅವಳ ಕೆನ್ನೆ ತಟ್ಟಿದೆ. ಅವಳ ನಗುವಿನಲ್ಲಿ ಕರಗಿಹೊದೆ.