Sunday, April 1, 2007

ಹೀಗೇಕೆ?...

ಸುಳಿವು ಕೊಡದೇ ಸುರಿಯಲಾರಂಭಿಸಿದ
ಮಳೆಯಲ್ಲಿ ಒ ದ್ದೆಯಾದೇವೆಂದು ಯಾವುದೋ
ಸೂರಿನಡಿಯಲ್ಲಿ ನಿಂತು ಅತ್ತಿತ್ತ
ನೋಡುತ್ತಿರುವಾಗ ಮಗುವೊಂದು ಕಂಡಿತ್ತು
ಮಳೆಯ ನೀರಲ್ಲಿ ಕುಣಿಯುತ್ತಾ
ಆಡುತ್ತಾ ನಲಿಯುತ್ತಿದ್ದ ಆ
ಮಗುವಿನ ಬೊಗಸೆಯಲ್ಲಿ
ತುಂಬಿದ್ದ ಸಂತಸ ನಮಗ್ಯಾಕಿಲ್ಲ.

ಅದೇನೋ ಯೋಚಿಸುತ್ತಿರುವಾಗ
ಏನೋ ನೆನಪಾದಾಂತಾಗಿ
ನಗುವೊಂದು ಚಿಮ್ಮಿರಲು
ಪ್ರಶ್ನೆಯೊಂದು ಬಂತು ಬಾಣದಂತೆ
'ಇದೇನಿದು ಸುಮ್ಮನೇ ನಗುವುದೆಂದರೇನು?'
ಬಣದ ಚಿಟ್ಟೆಯ ಕಂಡು ಚಪ್ಪಾಳೆ ತಟ್ಟಿ
ನಗುವುದಲ್ಲ ಮಗು, ನಿದ್ದೆಗಣ್ಣಲ್ಲಿ
ಅತ್ತಿತ್ತ ಹೊರಳಾಡಿ ಹೂ ನಗೆ
ಸೂಸುವ ಆ ಮಗುವಿಗೆ ಇರುವ
ಸ್ವಾತಂತ್ರ್ಯ ನಮಗ್ಯಾಕಿಲ್ಲ?

ಮನಸ್ಸೆಲ್ಲ ಭಾರ ವಾಗಿ ಕಣ್ಣಲ್ಲಿ
ನೀರು ಹರಿದಿತ್ತು
ತಕ್ಷಣ ತೂರಿಬಂದ ನೂರಾರು
ಪ್ರಶ್ನೆಗಳೊಂದಕ್ಕೂ ಉತ್ತರ
ನನ್ನಲ್ಲಿರಲಿಲ್ಲ.
ಕಾರಣವಿಲ್ಲದೇ ಮಗುವು
ಅಳುತ್ತಿರುವಾಗ ಪ್ರೀತಿ
ತೋರಿಸಿ ಮುದ್ದುಗ ರೆವರಲ್ಲ
ಮಗುವಿಗೆ ಸಿಕ್ಕುವ ಆ ಪ್ರೀತಿ ನಮಗ್ಯಾಕಿಲ್ಲ?

ಮನದಲ್ಲಿದ್ದವು ಮಾತುಗಳು ನೂರಾರು
ಕೇಳಲಾರೆವಂದರು ಕೆಲವರು
ಅರ್ಥವಾಗಲಿಲ್ಲವೆಂದರು ಹಲವರು
ಅರ್ಥವೇ ಇಲ್ಲ ಈ ಮಾತುಗಳಿಗೆ ಎಂದರು
ಇನ್ನೂ ಕೆಲವರು..
ಮಗುವೊಂದು ಮುದ್ದು ಮಾತು
ಗಳನ್ನಾಡುತ್ತಿರುವುದ ಕೇಳಿ
ಆನಂದಿಸುತ್ತಿದ್ದರು ಅಲ್ಲಿ ಎಲ್ಲ

ಕೊನೆಗೂ ಮನದಲ್ಲಿ ಉಳಿದಿತ್ತು
ಒಂದೇ ಒಂದು ಪ್ರಶ್ನೆ "ಇದು ಹೀಗೇಕೆ??"


ನಾನು ಮತ್ತು ಗೆಳತಿ ರೇಖಾ ಒಮ್ಮೆ ಜಯನಗರದಲ್ಲಿ ಅಲೆಯುತ್ತಿರುವಾಗ ಸುಳಿವು ಕೊಡದೇ ಮಳೆ ಸುರಿಯಲಾರಂಭಿಸಿದಾಗ ಅಲ್ಲೇ ಎಲ್ಲೋ ನಿಂತಾಗ ಆಡುತ್ತಿರುವ ಮಗುವನ್ನು ಕಂಡು ಮನಸ್ಸಿನಲ್ಲಿ ಮೂಡಿ ಬಂದ ಮಾತುಗಳಿವು... ರೂಮಿಗೆ ಹೋದವಳೇ ಆ ಮಾತುಗಳನ್ನು ಅಕ್ಷರಕ್ಕೆ ಇಳಿಸಿ ಅವಳ ಮುಂದಿತ್ತಾಗ ಅವಳ ಮನದ ಮಾತುಗಳನ್ನೇ ಹೇಳಿರುವೆನೇನೋ ಎಂಬಂತೆ ನನ್ನನ್ನೇ ದಿಟ್ಟಿಸಿದಳು... ಇದಾಗಿ ವರ್ಷವೇ ಕಳೆದಿದ್ದರೂ ನಮ್ಮಿಬ್ಬರಿಗೂ ಆ ಘಟನೆ ಇನ್ನೂ ಮನದಲ್ಲಿ ಹಸಿರು.. ಇದು ಅವಳ favourite ಕವನ...

14 comments:

Sandeepa said...

"ಮಗುವಿನ ಬೊಗಸೆಯಲ್ಲಿ ತುಂಬಿದ್ದ
ಸಂತಸ ನಮಗ್ಯಾಕಿಲ್ಲ."
"ಸೂಸುವ ಆ ಮಗುವಿಗೆ ಇರುವ
ಸ್ವಾತಂತ್ರ್ಯ ನಮಗ್ಯಾಕಿಲ್ಲ?"
ನನಗನ್ನಿಸುತ್ತಿದೆ..

ಜೀವನಾನುಭವ ಹೆಚ್ಚಿದಂತೆಲ್ಲಾ 'ಸಂತಸ' 'ಸ್ವಾತಂತ್ರ್ಯ' ಮುಂತಾದ ಶಬ್ದಗಳಿಗೆ ನಾನು ಕೊಡುವ ವ್ಯಾಖ್ಯಾನ ಕೂಡ ಬದಲಾಗುತ್ತಾ ಸಾಗುತ್ತದೆ.

ಶಬ್ದಗಳೊಂದೇ ಅಲ್ಲ concept ಗಳೇ ಅರ್ಥ ಬದಲಿಸಿಬಿಟ್ಟಿರುತ್ತವೆ.

ಹಾಗಾಗಿ ಅಂದಿನ ಆನಂದವನ್ನಾಗಲೀ, ಪ್ರೀತಿಯನ್ನಾಗಲೀ ಸವಿಯುವುದಿರಲಿ, ಗುರುತಿಸುವ ಸಾಮರ್ಥ್ಯವನ್ನು ಕೂಡ ನಮ್ಮ ಮನಸ್ಸು, ಬುದ್ಧಿ, ಇಂದ್ರಿಯಗಳಿಂದು ಕಳೆದುಕೊಂಡಿವೆ.

Sushrutha Dodderi said...

ಶ್ಯಾಮಾ, ನಿಮ್ಮ ಭಾವವನ್ನು ನಾನೂ ಫೀಲ್ ಮಾಡಿಕೊಂಡೆ. ಸಂದೀಪ ಹೇಳಿದ್ದು ಸರಿ ಇರಬಹುದು. ನಂಗೂ ಒಮ್ಮೆ ಹಿಂಗೆಲ್ಲ ಅನ್ಸಿತ್ತು: ಮಗುವಿನಷ್ಟು ನಿರ್ಮಮವಾಗಿ, ನಿಷ್ಕಳಂಕವಾಗಿ ನಗಲಿಕ್ಕೆ ನಮಗ್ಯಾಕೆ ಸಾಧ್ಯವಾಗುವುದಿಲ್ಲ ಅಂತ. ಅದನ್ನೇ ಬರೆದಿದ್ದೆ ಇಲ್ಲಿ.

Sahana said...

nice one!!

ಶ್ಯಾಮಾ said...

@ sandeepa

ಇರಬಹುದು ಜೀವನಾನುಭವ ಹೆಚ್ಚಿದಂತೆ ಸಂತೋಷ ಸ್ವಾತಂತ್ರ್ಯಗಳಿಗೆ ನಾವು ಬೇರೆ ಬೇರೆ ವ್ಯಾಖ್ಯಾನ ಕೊಡಬಹುದು(ನಮ್ಮ ಶಕ್ತ್ಯಾನುಸಾರ!!) ಆದರೂ ಒಮ್ಮೊಮ್ಮೆ ಹಾಗೆ ಸುಮ್ಮನೇ ಕೂತು ಯೋಚಿಸಿದಾಗ ಮತ್ತದೇ ಪ್ರಶ್ನೆ ಕಾಡುವುದು ಯಾಕೆ ಹೀಗೆ ಅಂತ...

ಸುಶ್ರುತ ನಿಮ್ಮ blog ಓದಿದೆ ತುಂಬಾ ಚೆನ್ನಾಗಿದೆ.... ನಂಗೊಬ್ಬಳಿಗೆ ಅಲ್ಲ ಎಲ್ಲರಿಗೂ ಈ ಪ್ರಶ್ನೆ ಕಾಡುತ್ತದಾ ಅನ್ನಿಸ್ತು.. ಸಂದೀಪ ಹೇಳಿದ್ದು ಸರಿ "ಇರಬಹುದು" ಅಂತ ಬರ್ದಿದ್ದು ನೋಡಿದ್ರೆ ನಿಮಗೂ ಅಷ್ಟು ಸರಿಯಾದ ಉತ್ತರ ಸಿಕ್ಕಿಲ್ಲ ಅನ್ನಿಸ್ತು :)

ಶ್ಯಾಮಾ said...

thanks sahana

ಸುಪ್ತದೀಪ್ತಿ suptadeepti said...

ಮಗುವಿನ ಮನಸ್ಸು ನಮಗಿಲ್ಲ, ಅದಕ್ಕೇ ನಮಗೆ ಆ ಸಂತಸ, ಖುಷಿ, ಸ್ನಿಗ್ಧತೆ ಇರುವುದಿಲ್ಲ. ಈ ವಿಷಯದ ಬಗ್ಗೆಯೇ ಒಂದು ಕವನ ಬರೆದಿದ್ದೆ, ಸಧ್ಯದಲ್ಲೇ ಪೋಸ್ಟ್ ಮಾಡುತ್ತೇನೆ, ನನ್ನ ಬ್ಲಾಗಲ್ಲಿ. ನನಗನ್ನಿಸಿದಂತೆ ಅದಕ್ಕೆ ಮುಖ್ಯಕಾರಣ, ಜೀವನಾನುಭವಕ್ಕಿಂತಲೂ, ಜೀವನವನ್ನು ರೂಪಿಸಲೆತ್ನಿಸುವ "ಬೇಕು-ಬೇಡ"ಗಳು. "ಹಾಗೆ ಮಾಡು, ಹೀಗೆ ಮಾಡು, ಅದು ಬೇಡ, ಇದು ನೋಡು..." ಇತ್ಯಾದಿ ಇತ್ಯಾದಿ ನಮ್ಮನ್ನು ಕೆಲವಾರು ಸಣ್ಣ ಸಣ್ಣ ವಿವರಗಳಿಂದ ದೂರೀಕರಿಸುತ್ತವೆ.
ಒಂದು ಉದಾಹರಣೆ: ಅಂಬೆಗಾಲಿಕ್ಕಿ ಹರಿದಾಡುವ ಮಗು ನೆಲದಿಂದ ಅತಿ ಸಣ್ಣ ಕಸಗಳನ್ನೂ ಹೆಕ್ಕಿ ಬಾಯಿಗೆ ಇಟ್ಟುಕೊಳ್ಳುತ್ತದೆ. ಹೆತ್ತವರಿಗೆ ತಲೆನೋವು, ಇದನ್ನು ತಪ್ಪಿಸುವುದು ಹೇಗೆಂದು. ಹುಡುಕಿದಾಗ ಏನೂ ಕಾಣುವುದಿಲ್ಲ, ಮಗುವಿನ ಕೈಗೆ ಏನೋ ಸಿಕ್ಕಿರುತ್ತದೆ. ಅದೇ ನಾವೂ ಮಗುವಿನಂತೆ ಮಂಡಿಯೂರಿ ತಲೆ ತಗ್ಗಿಸಿ "ಹರಿದಾಡಿದರೆ" ನಮ್ಮ ಕಣ್ಣಿಗೂ ಎಷ್ಟೊಂದು "ವಸ್ತು"ಗಳು ಕಾಣಿಸುತ್ತವೆ...! ತಮಾಷೆಯಲ್ಲ. Perspective.... ನೋಡುವ ದೃಷ್ಟಿಕೋನ ಬದಲಾಗುತ್ತದೆ. ಅದೇ ನಮ್ಮ ಬೆಳವಣಿಗೆಯಲ್ಲೂ ಆಗಿರುವುದು.

ಸುಪ್ತದೀಪ್ತಿ suptadeepti said...

ಶ್ಯಾಮಾ, ನಿಮ್ಮ ಬ್ಲಾಗ್ ಲಿಂಕ್ ನನ್ನ ಬ್ಲಾಗಲ್ಲಿ ಹಾಕಿಕೊಳ್ಳಲು ಅನುಮತಿ ಇದೆಯೇ?

Unknown said...

ಮನಸ್ಸೆಲ್ಲ ಭಾರಾವಾಗಿ ಕಣ್ಣಲ್ಲಿ
ನೀರು ಹರಿದಿತ್ತು
ತಕ್ಷಣ ತೂರಿಬಂದ ನೂರಾರು
ಪ್ರಶ್ನೆಗಳೊಂದಕ್ಕೂ ಉತ್ತರ
ನನ್ನಲ್ಲಿರಲಿಲ್ಲ.
hmmm... IDU HEEGEKE... cant substantiate alda??
mast iddu

Unknown said...

@ suptadeepti
nim reply nodi volumetric anstu..
@ shyama...
ivara blog access madakke permission kodsi plz

ಶ್ಯಾಮಾ said...

@ suptadeepti

ನೀವು ಹೇಳುತ್ತಿರುವುದು ಸರಿ ಅನ್ನಿಸ್ತಿದೆ... ಜೀವನವನ್ನು ರೂಪಿಸಲೆತ್ನಿಸುವ "ಬೇಕು ಬೇಡಗಳು ನಮ್ಮಲ್ಲಿ ಅದೆಷ್ಟೋ ಬದಲಾವಣೆ ತರುತ್ತಿವೆ... ಆದರೆ ಈ ನಿಟ್ಟಿನಲ್ಲಿ ಸಾಗುವಾಗ ನಾವು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚೇನೋ ಅಂತ ನನ್ನ ಭಾವನೆ.. ತುಂಬಾ ಚೆನ್ನಾಗಿ comments ಬರೆದಿದ್ದೀರಾ.. ಧನ್ಯವಾದಗಳು.. ನಿಮ್ಮ blog ನಲ್ಲಿ ನನ್ನ ಲಿಂಕ್ ಹಾಕಿಕೊಳ್ಳಿ..

ಶ್ಯಾಮಾ said...

@ sandeep

correct.. cant substantiate....
en heLthe?

Aditya Prasad said...
This comment has been removed by the author.
Aditya Prasad said...

"ಕಾರಣವಿಲ್ಲದೇ ಮಗುವು
ಅಳುತ್ತಿರುವಾಗ ಪ್ರೀತಿ
ತೋರಿಸಿ ಮುದ್ದುಗರೇವರಲ್ಲ
ಮಗುವಿಗೆ ಸಿಕ್ಕುವ ಆ ಪ್ರೀತಿ ನಮಗ್ಯಾಕಿಲ್ಲ?"
i feel..
v r so grown up that ನಮ್ಮ ಮೇಲೆ ಪ್ರೀತಿ ತೋರಿಸುವ ಕಾಲ ಮುಗಿದು ಹೋಗಿದೆ
ಈಗ ನಾವು ಬೇರೆಯವರನ್ನು ಪ್ರೀತಿಸಿ ಕುಶಿ ಪಡಬೇಕು....

ಶ್ಯಾಮಾ said...

wow ಏನ್ explaination ಕೊಟ್ಟಿದ್ಯೋ ತಮ್ಮಾ..... ಏನ್ ಹೇಳವ್ವೋ ಗೊತ್ತಾಗ್ತಾ ಇಲ್ಲೇ....