ಬಂಧ ಮುಕ್ತ
ಬಂಧಿಸಬೇಡಿ ನನ್ನನ್ನು
ನಿಮ್ಮ ನಿಲುವುಗಳಿಂದ
ಬದುಕಲು ಬಿಡಿ
ನನ್ನನ್ನೂ ನಿಮ್ಮಂತೆಯೇ
ಬಿಚ್ಚಿಬಿಡಿ ಕಣ್ಣಿಗೆ ಕಟ್ಟಿದ
ಈ ಕಪ್ಪು ಬಟ್ಟೆಯ
ನೋಡಬೇಕಿದೆ ನಾನು ಈ
ಸುಂದರ ಜಗತ್ತನ್ನು ನನ್ನ ಕಣ್ಣುಗಳಿಂದ
ತೆಗೆದುಬಿಡಿ ಮುಖದ
ಈ ಮುಸುಕನ್ನು
ಆಹ್ಲಾದಿಸಬೇಕಿದೆ ನಾನು
ಬೀಸುತಿರುವ ಗಾಳಿಯನ್ನು
ಬಿಚ್ಚಿಬಿಡಿ ಕಟ್ಟಿದ ಈ ಕೈಗಳನ್ನು
ಚಾಚಬೇಕಿದೆ ನಾನು
ನಿರಾಳವಾಗಿ ಮುಗಿಲೆತ್ತರಕ್ಕೆ
ನನ್ನ ಬಾಹುಗಳೆರಡನ್ನು
ತೆರೆದುಬಿಡಿ ಪಂಜರದ
ಈ ಬಾಗಿಲನ್ನು
ಸ್ವಛ್ಛಂದವಾಗಿ ಹಾರಾಡಬೇಕಿದೆ
ಬಾನಂಗಳದಲ್ಲಿ ನಾನು
No comments:
Post a Comment