Monday, March 19, 2007

ಮೊದಲ ಮಳೆ

May ತಿಂಗಳ ಒಂದು ದಿನ. ಗಿಡದ ಎಲೆಗಳು ಏಕೆ ಹೊರಗೆ ನಿಂತರೆ ನಾನೇ ಸುಟ್ಟು ಕರಕಲಾಗುವೇನೇನೋ ಎಂಬಂಥ ಸುಡು ಬಿಸಿಲು. ಹೊತ್ತೇರಿದಂತೆ ಏರುತ್ತಿರುವ ಆ ಸೆಖೆ. ಮನಸ್ಸಿಗೇನೋ ಮುದವಿಲ್ಲ. ಏನು ಕೆಲಸ ಮಾಡಲೂ ಗೆಲುವಿಲ್ಲ. ಇವನದೋ ಅವತ್ತಿನಿಂದ ಒಂದೇ ಪ್ರಶ್ನೆ "ನಿನಗೇನು ಇಷ್ಟ??" ನಾನೂ ಏನೂ ಉತ್ತರ ಕೊಡದೇ ಕಣ್ಣಲ್ಲೇ ನಕ್ಕು ಸುಮ್ಮನಾಗುತ್ತಿದ್ದೆ.

ಸಂಜೆಯಾಗುತ್ತಲಿತ್ತು. ಬಿಸಿಲಿನ ತಾಪವೇನೋ ಕಡಿಮೆಯಾಗಿತ್ತು. ಸೆಖೆಯೇನೂ ಒಂಚೂರು ಕಡಿಮೆಯಾಗಿಲ್ಲ. ನನಗಂತೂ ನಿಂತಲ್ಲಿ ನಿಲ್ಲಲಾಗುತ್ತಿಲ್ಲ. ಒಳ ಹೊರಗೂ ಅದೆಷ್ಟು ಸಲ ಓಡಾಡಿದೆನೋ? ಯಾರದೋ ಬರುವನ್ನು ನಿರೀಕ್ಷಿಸುತ್ತಿರುವಂತಿತ್ತು ನನ್ನ ವರ್ತನೆ.

ಮತ್ತೆ ಹೊರ ಹೋಗಿ ಮೇಲೆ ನೋಡಿದೆ ಆಕಾಶದಲ್ಲೆಲ್ಲ ಮೋಡ ಕಟ್ಟಿತ್ತು. ಅದಕ್ಕೆ ಇರಬೇಕು ಈ ರೀತಿ ವಿಪರೀತ ಸೆಖೆ. ಮನಸ್ಸಿಗೆಲ್ಲ ಕಿರಿಕಿರಿ. ಇಂಥ ಹೊತ್ತಿನಲ್ಲಿ ಇವನು ಬೇರೆ ವಿರಾಮವಿಲ್ಲದೇ ಕೇಳುತ್ತಿದ್ದಾನೆ ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ . ನಿನಗೇನು ಇಷ್ಟ?" ಎಂದು. ಏನನ್ನಲಿ ನಾನು ಇವನಿಗೆ? ನಿಲ್ಲಲಾರದೇ ನಾ ಒಳಗೆ ಹೋದರೆ ಬೆಕ್ಕಿನಂತೆ ಹಿಂದೆಯೇ ಬಂದು ಮತ್ತೆ ಪ್ರಶ್ನೆ ಇಟ್ಟ " ಹೇಳು please ನಿಂ ಗೇನು ಇಷ್ಟ?" ಅಷ್ಟರಲ್ಲಿ ಹೊರಗೆ ಏನೋ ಸದ್ದಾಯಿತು. ಕಿಟಕಿಯಲ್ಲಿ ಇಣುಕಿ ನೋಡಿದ್ದೆ ಗೊತ್ತಾಯ್ತು ಅದು ಮಳೆ ಹನಿಗಳ ಸ ದ್ದೆಂದು. ಮೈ ಮೇಲೆ ಹು ಳ ಬಿಟ್ಟವಳಂತೆ ಕುಣಿಯುತ್ತಾ ಹೊರಗೆ ಓಡಿದೆ ನಾನು. ಅದೆಷ್ಟೋ ದಿನಗಳ ಬಿಸಿಲಿಗೆ ಕಾದ ಇಳೆ ಇಂದು ಮಳೆ ಹನಿಗಳಲ್ಲಿ ಮಿಂದು ತಂಪಾಗಿದ್ದಳು. ಆ ಕಾದ ಮಣ್ಣ ಕಣಗಳ ಮೇಲೆ ನೀರ ಹನಿ ಸಿಂಚನವಾಗಿ ಅದೇನೋ ಆಹ್ಲಾದಕರ ಪರಿಮಳ ವಾತಾವರಣವೆಲ್ಲ ತುಂಬಿತ್ತು. ಮಳೆ ಹನಿಗಳ ಕಂಡು ತಂಪಾದ ಇಳೆಯಂತೆ ನನ್ನ ಮನವೂ ಕೂಡ ತಂಪಾಗಿತ್ತು. ಆ ಮಣ್ಣಿನ ಕಂಪನ್ನು ಆಹ್ಲಾದಿಸುತ್ತಾ ಅದೆಷ್ಟೋ ಹೊತ್ತು ಅಲ್ಲೇ ನಿಂತಿದ್ದೆ.

ಅದಾಗಲೇ ನನ್ನ ಪಕ್ಕ ಬಂದು ನಿಂತಿದ್ದ ಅವನು ಕೇಳಿದ "ಈಗಲಾದರೂ ಹೇಳು ನಿಂಗೇನಿಷ್ಟ?" ಸುರಿಯುತ್ತಿರುವ ಹನಿಗಳನ್ನು ಬೊಗಸೆಯಲ್ಲಿ ತುಂಬಿಕೊಳ್ಳುತ್ತಾ ನಾನು ಹೇಳಿದೆ " ನಂಗೆ ಮೊದಲ ಮಳೆ ಇಷ್ಟ. ಮೊದಲ ಮಳೆ ಬಿದ್ದಾಗ ಮಣ್ಣು ಸೂಸುವ ಆ ಕಂಪು ಇನ್ನೂ ಇಷ್ಟ". ಅವನತ್ತ ತಿರುಗಿ ನಾನು ನಕ್ಕೆ. ಅವನೂ ನಕ್ಕ.
(ನಿಂಗೆ ನಾನು ಇಷ್ಟವಾ ಅಂತ ಅವನೂ ಕೇಳಲಿಲ್ಲ ನಾನೂ ಹೇಳಲಿಲ್ಲ).......

15 comments:

Sushrutha Dodderi said...

ಹ್ಮ್.. ಲಹರಿ ಚೆನ್ನಾಗಿದೆ.. ಓದಿಸಿಕೊಂಡು ಹೋಯಿತು.. ಆದ್ರೆ ತುಂಬಾನೇ ಸ್ಪೆಲಿಂಗ್ ಮಿಸ್ಟೇಕ್ಸ್ ಮಾಡಿದೀರ.. ಮಾರ್ಕ್ಸ್ ಕಟ್ ಮಾಡ್ಬೇಕಾಗುತ್ತೆ ಹೀಗ್ಮಾಡಿದ್ರೆ.. :)

ಶ್ಯಾಮಾ said...

ಥ್ಯಾಂಕ್ಸ್ ಸುಶ್ರುತ... ನಂಗೂ ಗೊತ್ತು ತುಂಬಾ ಸ್ಪೆಲ್ಲಿಂಗ್ mistakes ಮಾಡಿದ್ದೀನಿ ಅಂತ ಸ್ವಲ್ಪ ಸೋಮಾರಿತನ ಎಲ್ಲ ಸರಿ ಮಾಡಕ್ಕೆ.. ನೆಕ್ಷ್ಟ್ ಟೈಮ್ ಎಲ್ಲ ಸರಿ ಮಾಡ್ತೀನಿ ನೋ ಮಾರ್ಕ್ಸ್ ಕಟ್ ಪ್ಲೀಸ್... ;-)

ಸ್ಮಿತಾ said...

Shyama ...Its nice...aa naguvalle neen ishta antha helidde ansutte adre avnige artha agle illa....

ಶ್ಯಾಮಾ said...

he he correct smitha.. en madodu jagattalli elru nam thara janaralla alwa ;-)

Unknown said...

""ಒಳ ಹೊರಗೂ ಅದೆಷ್ಟು ಸಲ ಓಡಾಡಿದೆನೋ? ಯಾರದೋ ಬರುವನ್ನು ನಿರೀಕ್ಷಿಸುತ್ತಿರುವಂತಿತ್ತು ನನ್ನ ವರ್ತನೆ"" this line is outstanding...its just just fantastic....
tumba sari voddi e line..

ಶ್ಯಾಮಾ said...

Thanks sandeep... adke adra title kottiddu sundara kalpane antha...

ಸುಪ್ತದೀಪ್ತಿ suptadeepti said...

ಚೆನ್ನಾಗಿದೆ ಕಥನ. ಸುಲಲಿತವಾಗಿ ಓದಿಸಿಕೊಂಡು ಹೋಗತ್ತೆ. ಇನ್ನೂ ಬರೆಯುತ್ತಿರಿ.

ಶ್ಯಾಮಾ said...

@ suptadeepti

ಧನ್ಯವಾದ... ನೀವೂ ಆಗಾಗ ಭೇಟಿಕೊಡುತ್ತೀರಿ ಹೀಗೆ ನನ್ನ ನೆನಪಿನಂಗಳಕ್ಕೆ

Aditya Prasad said...

this is too much....!
u shud have told him.. :)
u troubled him a lot....

ಶ್ಯಾಮಾ said...

that is not me who troubled him.. he is the one who troubled me... when he knows that i like him why he should he behave as if he does not know anything... :) ;)

Aditya Prasad said...

i think u like to be troubled by him again for the same reason.. so u did not tell.... :)
any it is wonderfull i liked it very much...:)

ಶ್ಯಾಮಾ said...

May be that is true.. ;)
May be he also knows that so he did not ask ;)

Thanx anyways..

Unknown said...

OHO HEEGIDE VISHYA HANGADRE.. GOTTAGOYTU KANRI NANGE.. NIM MANSALLI ENIDE ANTA NANU VODBITTE NANU:):)

ಶ್ಯಾಮಾ said...

@ sandeep

ALDDA TAMMA NAN MANSALLI ALLA AVLA MANSALLI :)

deepa said...

NIce Poem Shyama!!