Tuesday, April 24, 2007

ಸುಮ್ನೇ ಒಂದಿಷ್ಟು

ಅಷ್ಟಿಷ್ಟು ಹೊತ್ತು ಅಲೆಗಳ ಅಬ್ಬರವಿಲ್ಲದ ಶಾಂತ ಸಾಗರ...
ಮತ್ತೆ ಅದೆಷ್ಟೋ ಹೊತ್ತು ಬರೀ ಅಲೆಗಳ ಅಬ್ಬರ,
ದಂಡೆಗೆ ಪಿಸುಮಾತ ಹೇಳಿ ಓಡಿ ಹೋಗುವ ಲೆಕ್ಕವಿಲ್ಲದಷ್ಟು ಅಲೆಗಳು..
ಅಂಥ ಅದೆಷ್ಟೋ ಅಲೆಗಳು ಬಂದು ಹೋದರೂ
ಅಳಿಸಿಹೋಗದ ಅದೆಷ್ಟೋ ಹೆಜ್ಜೆ ಗುರುತುಗಳು...
ಇದೆಂಥ ಸಾಗರ ತೀರಾ?
ಅಲ್ಲ ಅದು ಸಾಗರ ತೀರವಲ್ಲ!! ಅದು ನನ್ನ ಮನಸ್ಸು!!
_________ ***___________

ನನ್ನದು ಕಲ್ಲು ಹೃದಯವೆಂದು ನೀ ಹೇಳಿದೆಯಲ್ಲ
ಅದು ಹಾಗಲ್ಲವೋ ಹುಡುಗಾ..
ಪ್ರೀತಿಯೆಂಬುದು ನನ್ನ ಮನಸ್ಸಿನಲ್ಲಿ ಇನ್ನೂ ಮೊಗ್ಗಾಗಿದ್ದಾಗ
ಅದೆಲ್ಲಿ ನಲುಗಿ ಹೋಗುವುದೋ ಎಂದು ನಾ ರಕ್ಷಿಸುತ್ತಿದ್ದ ಪರಿ ಅದು
ಅಷ್ಟೂ ಅರಿಯದ ನೀನು ನನ್ನ
ಪ್ರೀತಿಯ ಮೊಗ್ಗು ಅರಳಿ ಹೂವಾಗುವ ಮುನ್ನವೇ
ಚಿವುಟಿಹಾಕಿದೆಯಲ್ಲೋ ಹುಡುಗಾ....

_________ ***___________

ಅಲ್ಲಿ ಅವಳು ಇರಲಿಲ್ಲ
ಅಲ್ಲಿ ಅವನೂ ಇರಲಿಲ್ಲ....
ಆದರೆ ಅಲ್ಲಿ ಅವಳ ಕಣ್ಣಿಂದ
ಜಾರಿ ಬಿದ್ದ ಹನಿ ಯೊಂದಿತ್ತು....
ಅವನು ಬಿಟ್ಟು ಹೋದ ಅದೆಷ್ಟೋ ನೆನಪುಗಳ ಪರಿಮಳವಿತ್ತು.....

6 comments:

Anonymous said...

ಹಾಯ್ ಶ್ಯಾಮಾ,

ಅದೆಷ್ಟೋ ಅಲೆಗಳು ಬಂದು ಹೋದರು ಅಳಿಸದ ಹೆಜ್ಜೆ ಗುರುತುಗಳು:- ಈ ಒಂದೇ ಸಾಲು ಸಾಕು. ತುಂಬಾ ಚನ್ನಾಗಿ ಇದ್ದು. ಒಮ್ಮೆ ಜೀವನದಲ್ಲಿ ಬಂದು ಹೋದವರನ್ನು ಯಾವತ್ತಿಗೂ ಮರೆಯಕೆ ಆಗಲ್ಲಾ ಅನ್ನೋ ಈ ಸಾಲುಗಳು ಹೃದಯ ತಾಕಿದವು.

ಮೊಗ್ಗು ಅರಳಿ ಹೂವಾಗುವ ಮುನ್ನವೇ ಚಿವುಟಿ ಹಾಕಿದೆಯಲ್ಲ ಹುಡುಗ:- no comments. ಪ್ರೀತಿಯ ಹುಡುಗಿ ಮೋಸದ ಹುಡುಗ.

ಅವನು ಬಿಟ್ಟು ಹೋದ ಅದೇಷ್ಟೋ ನೆನಪುಗಳ ಪರಿಮಳ:- ಸೂಪರ್ ಆಗಿ ಬರದ್ದೆ. ಕೀಪ್ ಇಟ್ ಅಪ್.

ಶ್ಯಾಮಾ said...

thanks ರಂಜು,

ಜೀವನಲ್ಲಿ ಕೆಲವು ನೆನಪುಗಳು ಮರೆಯಬೇಕೆಂದುಕೊಂಡಷ್ಟೂ ಮತ್ತಷ್ಟು ಗಟ್ಟಿಯಾಗಿ ಮನದಲ್ಲಿ ಬೇರೂರುತ್ತವೆ... ಅಂಥ ನೆನಪುಗಳನ್ನು ಅಳಿಸಲು ಸಾಧ್ಯವೇ??

Sahana said...

ಪ್ರೀತಿಯ ಮೊಗ್ಗು ಅರಳಿ ಹೂವಾಗುವ ಮುನ್ನವೇ
ಚಿವುಟಿಹಾಕಿದೆಯಲ್ಲೋ ಹುಡುಗಾ....
this line "superb"
Very nice da.....

Aditya Prasad said...

no comments... only compliments.... all are very nice..:)

ಶ್ಯಾಮಾ said...

@sahana
thanks...
@ adithya

thanks for no comments and "compliments" .... :)

bhadra said...

ಮನದಲಿ ಅಡಗಿದ, ನಾಲಗೆಯ ಮೇಲೆ ನಲಿದಾಡದ ಮಾತುಗಳನ್ನು ಪದಪುಂಜಗಳಾಗಿ ಬಹಳ ಸುಂದರವಾಗಿ ನಿರೂಪಿಸಿದ್ದೀರಿ.

ಅಷ್ಟಿಷ್ಟು ಹೊತ್ತು ಅಲೆಗಳ ಅಬ್ಬರವಿಲ್ಲದ ಶಾಂತ ಸಾಗರ...

ಇದೆಂಥ ಸಾಗರ ತೀರಾ?


ಸಮುದ್ರವಿರದ ಸಾಗರದ ತೀರ - ಶಿವಮೊಗ್ಗೆ ಜಿಲ್ಲೆಯ ಸಾಗರದ ತೀರ :P