ಮಾತು-ಕ-ವಿ-ತೆ
ಮಲಗುವಾ ಮುನ್ನ ಕಣ್ಣ
ಕಾಡಿಗೆ ತೆಗೆಯಲು ಹೋದರೆ
ಕಣ್ಣಲ್ಲಿ
ಕಾಡಿಗೆಯೇ ಇಲ್ಲ
ಬಹುಶಃ ನಿನ್ನ ಕಣ್ಣೋಟಕ್ಕೆ
ನನ್ನ ಕಣ್ಣ ಕಾಡಿಗೆಯೂ
ನಾಚಿ ಕರಗಿ ಹೋಯಿತೇನೋ!!
******
ಕಣ್ಣುಗಳೂ ಮಾತಾಡುತ್ತವಂತೆ ಮಾತಾಡುತ್ತವಂತೆ
ಹೌದಾ ?ನಾನು ಕೇಳಿದ್ದೆ ನಿನ್ನ,
ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ನೋಡಿದಾಗ ಗೊತ್ತಾಯ್ತು
ಕಣ್ಣುಗಳು ಕವಿತೆಯನ್ನೂ
ಹೇಳುತ್ತವೆ.
******
ಮಾತು ಬೆಳ್ಳಿ ಮೌನ ಬಂಗಾರ
ಅಂದುಕೊಂಡೆವೇನೋ ನಾವು, ಒಂದು
ಮಾತೂ ಹೊರಬರಲಿಲ್ಲ ಮನಸ್ಸಿನಾಳದಿಂದ
ತುಟಿಯಂಚಿಗೆ,
ಆದರೂ ನಮ್ಮಿಬ್ಬರ ನಡುವೆ
ಮೌನದಲ್ಲೇ
ಮಾತು-ಕ-ವಿ-ತೆ ಯಾಗಿತ್ತು..
10 comments:
chennagide kane :-)
Shamy supper agide kane... waiting for ur next postings
Hey i did not get the hang of it.
who are the two you are talking about
ಚೆನ್ನಾಗಿದೆ. ವಿಷಾದ ಕವಿತೆಯಿಂದ ಸೀದಾ ಪ್ರೇಮ ಕವಿತೆಗೆ. ನಿನ್ನ ಸಂದೇಶ ಅಷ್ಟು ಬೇಗ ಮುಟ್ಟಿತಾ ಅವನಿಗೆ? ಕಂಗ್ರಾಟ್ಸ್:-))
ಕೂಸೆ ಶ್ಯಾಮಕ್ಕ,
ನೀ ಕಾಗದದ್ ದೋಣಿಯಲ್ಲಿ ಸಂದೇಶ ಕಳಿಸಿದಾಗಲೇ ಅನ್ಕಂಡೆ something is going on ಅಂಥ. ಆಹಾ ಈ ಮಾತು-ಕ-ವಿ-ತೆ ಎಲ್ಲಾ ಕ್ಲಿಯರ್ ಮಾಡಿತು. ಅಂಥು ಕಾಗದದ ದೋಣಿಯಲ್ಲಿ ಸಂದೇಶ ಬಂದಿದೆ ಅಂಥ ಕಾಣಿಸುತ್ತೆ. ಲವ್ ಯೂ ಅಂಥಾನು ಬಂದಿರಬೇಕು. ಹ್ಮ್ ನೆಡಿಲಿ ನೆಡಿಲಿ ಪ್ರೇಮೊತ್ಸವ.
@ Sahana , Smitha
Thanks,
@ Aru
"who are the two you are talking about"
Even I dont know!!!
It is just my imagination of a girl who is in LOVE.
:)
@ Jagali Bhagavata
"ಕಂಗ್ರಾಟ್ಸ್:-))" ಯಾಕೋ ಏನೋ?
ಸಂದೇಶ ಬಂದಿಲ್ಲ ಅಂತಾನೆ ಈ ಥರ ಬರೆದಿರಬಹುದು ಅಂಥ ಯಾಕೆ ಯಾರು ಯೋಚನೆ ಮಾಡ್ತಿಲ್ಲ? :) ;-)
@ ranju
" Some thing is going on " :) ಏನು ಅಂಥ ಗೊತ್ತಾಗ್ಲೇ :)
En kathe shyama?:)
En kathe antha gottille.. ellaru eno kathe kattatha idda ansta iddu :)
Post a Comment