Wednesday, February 13, 2008

ಹಠವೇಕೆ ನಿನಗೆ?

ಆಗಸದೆ ಚಂದ್ರನ ನನಗೆ
ತೋರಿಸುವ ಹಠವಾದರೂ ಏಕೆ ನಿನಗೆ?
ನಿನ್ನ ಕಣ್ಣಲ್ಲೇ ಇಣುಕಿ
ಚಂದ್ರನ ಬಿಂಬವನ್ನು ನೋಡುವ ಆಸೆಯೆನಗೆ.

ಮಾತಾಡದೆ ಮೌನದಲ್ಲೇ ಎಲ್ಲ ಹೇಳುತ್ತಿದ್ದವ ನೀನು
ಮಾತಾಡಿ ಮನವೊಲಿಸುವ ಹಠವಾದರೂ ಏಕೆ ನಿನಗೆ ?
ನಿನ್ನ ಮೌನದ ಆಳದಲ್ಲಿಳಿದು ನಿನ್ನ ಮನವನರಿಯಲು ಹೋಗಿ
ಮಾತುಗಳೇ ಮರೆತು ಹೋಗಿವೆಯೆನಗೆ.

ಕಣ್ಮನಗಳಲಿ ಕನಸುಗಳ ಬೀಜ ಬಿತ್ತಿದವ ನೀನು
ಮುಚ್ಚಿದ ನನ್ನ ಕಣ್ಣುಗಳನು ತೆರೆಸುವ ಹಠವಾದರೂ ಏಕೆ ನಿನಗೆ ?
ಬೆಳಗಿರಲಿ ಇರುಳಿರಲಿ ನಿನ್ನ ಕೈ ಬಿಡೆ ಹಿಡಿದು
ಕನಸಿನೂರಲ್ಲಿ ಕಳೆದು ಹೋಗುವ ಆಸೆಯೆನಗೆ.

9 comments:

ಸುಪ್ತದೀಪ್ತಿ suptadeepti said...

Simply blissful

Sandeepa said...

ಎಂತಾ ಹಠಮಾರಿ ಆದ್ರು ಇದ್ನೋದಿ ತಣ್ಣಗಾಗ್ತ.
simply ಸಕ್ಕತ್! :)

ಶ್ಯಾಮಾ said...

@ suptadeepi

Thanks a lot :)

@ Alpazna

ಹಂಗ್ ಹೇಳ್ತ್ಯ? ;)

Thanks anyways :)

Jagali bhaagavata said...

ಸೂಪರಾಗಿದೆ. ಹಠಮಾರಿ ತಣ್ಣಗಾದ್ನ? :-)

ಶ್ಯಾಮಾ said...

@ ಜಗಲಿ ಭಾಗವತ

ಥ್ಯಾಂಕ್ಸು.:)
ಹೊಗೆ ಬರ್ತಾ ಇಲ್ದೇ ಇರೋದ್ ನೋಡಿದ್ರೆ ತಣ್ಣಗಾಗಿರ್ಬೋದು ಅಲ್ವಾ :D :-)

ಸ್ಮಿತಾ said...

Super agide,,, :)

ಶ್ಯಾಮಾ said...

thanks smitha

Yogesh Bhat said...

tumba chanagide

ಶ್ಯಾಮಾ said...

ಧನ್ಯವಾದಗಳು ಯೋಗೇಶ್