ಮಣ್ಣ ಹಣತೆಯ ಎಣ್ಣೆ ಬತ್ತಿಯ
ಪುಟ್ಟ ದೀಪಕ್ಕೆ
ಮುಸ್ಸಂಜೆಯ ನೆನಪು
ಬಾ ಎಂದು ಕರೆಯುತಲಿತ್ತು ಮುಸ್ಸಂಜೆಯನು
ಬಾನಲ್ಲಿ ರವಿ ಜಾರುವ ಮುನ್ನವೇ.
ಮುಸ್ಸಂಜೆಯ ಮಬ್ಬುಗತ್ತಲಿಗೋ
ದೀಪವೆಂದರೆ ಒಲವು
ತನ್ನನಾವರಿಸಿ ಬೆಳಗು ನೀಡುವುದು ದೀಪ ತಾನೆ?
ಕಾಯುವಿಕೆಯು ಕೊನೆಗೊಂಡು
ಹೊತ್ತು ಕಂತು ಮಬ್ಬು ಕವಿದಾ ವೇಳೆ
ದೀಪ ನಂದಿತು ಏಕೆ?
ದೀಪಕ್ಕೆ ಮುಸ್ಸಂಜೆಯ ನೆನಪು
ಬರಿಯ ನೆಪವಷ್ಟೆಯೇನು?
[ಅವತ್ತು ಯಾವತ್ತೋ ಒಂದು ದಿನ ಮನಸಲ್ಲಿ ಮೂಡಿದ ಸಾಲುಗಳು. ಇವಿಷ್ಟೇ ಬರ್ದಿದ್ದು ಅಥವಾ ಮುಂದೆ ಬರಿಯಬೇಕು ಅನ್ನಿಸಲಿಲ್ಲ . ಅಪೂರ್ಣವಾದ ಕವಿತೆ?!! ]
2 comments:
ಸಂಜೆಯಿಂದಲ್ಲವೆ ದೀಪದ ಬೆಳಕಿಗೊಂದು ಅರ್ಥ?
ಹಾಗಿರುವಾಗ ದೀಪಕ್ಕೆ ಅದು ನೆಪವಾಗಿರಲು ಸಾಧ್ಯವೇ?
"ಕಾಯುವಿಕೆಯು ಕೊನೆಗೊಂಡು
ಹೊತ್ತು ಕಂತು ಮಬ್ಬು ಕವಿದಾ ವೇಳೆ
ದೀಪ ನಂದಿದ್ದಾದರೂ ಯಾಕೆ " ಅಂದುಕೊಂಡಾಗ ದೀಪಕ್ಕೆ ಮುಸ್ಸಂಜೆಯ ನೆನಪು ಬರಿಯ ನೆಪವಷ್ಟೆ ಅಂತಲೇ ನಂಗೆ ಅನ್ನಿಸಿದ್ದು
Post a Comment