
ಕಾರಿರುಳ ಬಾನಿನಲಿ ಚಂದಿರನ ಹುಡುಕಿದಳು
ನದಿಯಲ್ಲದವಳು ಎಲೆಯಮೇಲೆ ಬಿದ್ದ ಮಳೆಹನಿಯಂಥವಳು
ಕಡಲ ಸೇರಲು ಹೊರಟಳು.
ದನಿಯಿಲ್ಲದವಳು ಮೌನಿ ಶಿಲೆಯಂಥವಳು
ಎದೆರಾಗವಾಗಲವಣಿಸಿದಳು.
ಬಾನಲ್ಲಿ ರವಿ ಜಾರಿದಾಗ ಕವಿದ ಮುಸ್ಸಂಜೆಯಂಥವಳು
ಎಣ್ಣೆಯಾರಿದ ಹಣತೆಯನು ಕಣ್ಬೆಳಕಿನಲಿ ಬೆಳಗುವವನಿಗಾಗಿ ಕಾದಳು.
ಚದುರಿದ ಕನಸುಗಳ ಹೆಕ್ಕಿತರಲು ಹೊರಟವಳು
ಹೊಳೆವ ಕಂಗಳಲಿ ನಕ್ಕವಳು
ಅಂಗಳದ ಗಿಡದಲ್ಲಿ ಬಿರಿದ ಮಲ್ಲಿಗೆಯಂಥವಳು
ವೈಶಾಖದ ಸುಡುಹಗಲಿನಲಿ
ಒದ್ದೆ ಪಾದಗಳ ಜಾಡಿನಲ್ಲಿ ನಡೆಯಹೊರಟಳು
ನಿನ್ನೆಯಾಗಸದಲಿ ಕಂಡಿದ್ದ ಚುಕ್ಕಿಯಂತೆ ಕಳೆದುಹೋದಳು.
7 comments:
nice.. :-)
ಎಣ್ಣೆಯಾರಿದ ಹಣತೆಯನು ಕಣ್ಬೆಳಕಿನಲಿ "ಬೆಳಗುವವನಿಗಾಗಿ " ಕಾದಳು.....
ಹ್ಮ್...ಹ್ಮ್....ಬೇಗ ಸಿಗ್ಲಪ್ಪ :-)
ಸುಂದರವಾದ ಕವನ.
ಅಧ್ಬುತ !!!!!
gud one..
Post a Comment