"ಅಲ್ನೋಡು   ಚಂದ್ರ!!"
"ಎಲ್ಲಿ??"
"ಹೇ  ಕಿಟಕಿಯಿಂದ  ಹೊರಗೆ ನೋಡು, ಕಾಣುತ್ತಾ  ಇದೆ ಎಷ್ಟು ಚೆನ್ನಾಗಿ"
"ನಾನೂ  ಕಿಟಕಿ  ಹೊರಗೇ ನೋಡ್ತಾ  ಇರೋದು, ಆದ್ರೆ ನಂಗೆ  ಕಾಣುತ್ತಾ ಇಲ್ಲಾ ಚಂದ್ರ"
"ಸರಿಯಾಗಿ  ನೋಡೇ "
"ಎಲ್ಲಿ? ನಂಗೆಲ್ಲೂ  ಕಾಣ್ತಾ  ಇಲ್ಲ"
"ಈ  ಕಡೆ ಬಾ , ಬಗ್ಗಿ  ನೋಡು ಅಲ್ಲಿ"
"ಸುಳ್  ಹೇಳ್ತಾ  ಇದಿಯೇನೋ , ನಂಗಂತೂ  ಈಗಲೂ ಏನೂ ಕಾಣ್ತಾ ಇಲ್ಲಾ "
"ನೀನೇ  ಸುಳ್ ಹೇಳ್ತಾ  ಇದೀಯ  ಕಾಣ್ತಾ ಇಲ್ಲ ಕಾಣ್ತಾ ಇಲ್ಲ ಅಂತ, ನಂಗೆ ಎಷ್ಟು ಸರಿಯಾಗಿ ಕಾಣ್ತಾ ಇದೆ"
"ಹೌದೌದು  ನಾನ್ಯಾಕೆ  ಸುಳ್ಳು ಹೇಳಲಿ . ಕಾಣ್ತಾ ಇಲ್ಲ  ಅದ್ಕೇ  ಕಾಣ್ತಾ ಇಲ್ಲ ಅಂದಿದ್ದು  ಅಷ್ಟೆ"
"ಹ್ಮ್ಮ್  ಹೋಗ್ಲಿ  ಬಿಡು, ನಿನಗೆ  ಕಾಣಿಸದೆ ಇದ್ರೆ ನಾನೇನು  ಮಾಡೋಕಾಗುತ್ತೆ , ಅಥವಾ ನಿನಗೆ ನೋಡಕ್ಕೆ  ಬರದೇ  ಇದ್ರೆ ನಾನು ಏನ್  ಮಾಡೋಕೆ ಆಗುತ್ತೆ "
******************************************
"ಹೇ ಬೇಗ ಬಾರೆ  ಇಲ್ಲಿ"
"ಯಾಕೇ ಕೂಗ್ತಿದಿಯ ಏನಾಯ್ತೆ ?"
"ಅಲ್ನೋಡು ಹೊರಗೆ, ಚಂದ್ರ ಎಷ್ಟು ಚಂದ ಕಾಣ್ತಿದೆ "
"ಚಂದ್ರನಾ? ಎಲ್ಲೇ ನಂಗೆ ಕಾಣುತ್ತಿಲ್ಲ."
"ಸರಿಯಾಗಿ  ನೋಡೇ ಹುಡುಗಿ ಕಾಣಿಸ್ತಿದೆ ಎಷ್ಟು ಚಂದಾಗಿ "
"ಹ್ಮ್ಮ್ ಇರಮ್ಮ  ಸರಿಯಾಗೇ  ನೋಡ್ತೀನಿ "
"ಹೇ ಯಾಕೆ ನನ್ನೆದ್ರಿಗೆ  ಬಂದು ನಿಂತೆ? ಚಂದ್ರ ಏನು ನನ್ನ ಮುಖದ ಮೇಲೆ ಇದ್ದಾನಾ? ಆಕಾಶದಲ್ಲಿ  ಇರೋದು ಚಂದ್ರ"
"ಹ್ಮ್ಮ್ ಗೊತ್ತು ಗೊತ್ತು, ನಂಗೆ ಕಾಣಲಿಲ್ಲ ಚಂದ್ರ  ಆಕಾಶದಲ್ಲಿ ಆದರೆ  ನಿನಗೆ ಕಾಣಿಸ್ತಿದಾನಲ್ವಾ, ಈಗ ನಿನ್ನ ಕಣ್ಣೊಳಗೆ ನೋಡಿದ್ರೆ  ನಂಗೆ ಚಂದ್ರ ಕಂಡೇ ಕಾಣಬೇಕು
ಅಲ್ವೇನೆ?"
".........................................."
"ಏಯ್ !!  ಏನು  ಯೋಚನೆ  ಮಾಡ್ತಿದೀಯಾ ? ಎಲ್ಲಿ ಕಳೆದು ಹೋದೆ?"
"ಏನಿಲ್ಲ  ನೀನು  ಹೇಳಿದ್ಯಲ್ಲ  ಅದರ  ಬಗ್ಗೆ ಯೋಚನೆ ಮಾಡ್ತಿದ್ದೆ . ನೀನು ಹೇಳಿದ್ದು ಸರಿ  ಇದೆ. ನೀನು ತುಂಬಾ ಜಾಣೆ , ಚಂದ್ರನ್ನ ನೋಡೋದು ಹೇಗೆ ಅಂತ ಎಷ್ಟು ಚೆನ್ನಾಗಿ ಗೊತ್ತು ಮಾಡ್ಕೊಂಡಿದೀಯ. ನನಗೂ ಗೊತ್ತಿದ್ದಿದ್ರೆ ,ಮನಸ್ಸಿನ ಕಣ್ಣಿಂದ ಒಂಚೂರು ನೋಡೋ ಪ್ರಯತ್ನ ಮಾಡಿದ್ರೆ  ಅವತ್ತು ಚಂದ್ರ ಕಂಡಿರುತ್ತಿದ್ದ ನಂಗೆ ."
7 comments:
ಸಂಭಾಷಣೆಗಳಲ್ಲೆ ಕತೆ ಹೆಣೆಯುವ ನಿಮ್ಮ ಕೌಶಲ್ಯ ಮೆಚ್ಚಿಗೆಯಾಗುತ್ತಿದೆ
ಸರಳವಾಗಿಯೂ ಸುಂದರವಾಗಿಯೂ ಇದೆ, ಇಷ್ಟವಾಯಿತು :)
ಚೆನ್ನಾಗಿದ್ದು :-)
ಸರಳ ಆಡು ಭಾಷೆಯಲ್ಲಿ ಬರೆದಿರುವುದು ಇಷ್ಟವಾಯಿತು.
ಶ್ಯಾಮಾ,
ಏನೋ ಒಂದು ಅಪೂರ್ವತೆಯನ್ನು ಕೊಡುವ ಸಂಭಾಷಣೆ. ರಾಶಿ ಇಷ್ಟ ಆತು. :) ಅಂದಹಾಗೆ ಇದು by experienceaa ?:-P :)
sweet conversation !
sarala.. sundara
Post a Comment