ಸಂಜೆಗೆಂಪಿನ ಪರದೆ ತೆರೆದುಕೊಳುವಾ ವೇಳೆ
ಅರೆಬಿರಿದ ಹೂ ಮೊಗ್ಗು ಚೆಲ್ವ ಬೀರಿ ನಗಲು
ಮೌನದೊಳು ಮರೆತಿದ್ದ ಹಾಡು
ಮನದೊಳಗೆ ಸಾಲು ಸಾಲಾಗಿ ಬರಲು
ನನ್ನೊಳಗೆ ನಾ ಹಾಡಿಕೊಳ್ಳುವ ಬಯಕೆ
ದನಿಯಿಲ್ಲದಾ ಹಾಡಿಗೆ ರಾಗ ತಾಳಗಳು ಬೇಕೇ?
ಭಾವವೊಂದಿರೆ ಸಾಕೆ?
ಸಂಜೆ ನಸುಗಪ್ಪು ಕವಿಯುವ ಹೊತ್ತು
ಬೀಸಿ ಬೀಸಿ ಬರುತಿಹ ತಂಪಿನ ಗಾಳಿಯಲಿ
ನೆನಪು ಕನಸುಗಳ ತರಗೆಲೆಗಳ ಹಾಸಿ ಕೂತಿರುವಾಗ
ಹಾರಿ ಹೋಗುತಿರುವ ಒಂದೊಂದು ಎಲೆಯನ್ನು
ಒಬ್ಬಳೇ ನಾನು ಹಿಡಿದು ತರಲೇನು ಇಲ್ಲ ಹಾರ ಬಿಡಲೇನು?
ಕವಿದ ಕಡುಗಪ್ಪಿನಲಿ ಚಿಟ ಪಟನೆ ಬೀಳುವ ಹನಿಗಳು
ಕಂಡೂ ಕಾಣದೆ ಕಳೆದುಹೋಗುತಿರುವಾಗ
ಸಾಲು ಸಾಲು ಹಾಡು ಮನದಲ್ಲೇ ಮತ್ತೆ ಮರೆತ್ಹೋಗುವ ಮುನ್ನ
ನೀ ಬಂದು ದನಿಯಾಗು ಹಾಡು ಹಾಡಲೇ ಬೇಕಿದೆ ನಾನು .
ನೆನಪು ಕನಸಿನ ತರಗೆಲೆಗಳು ಹಾರಿ ಚೆದುರಿ
ಅಂಗಳದ ಒದ್ದೆಯಲಿ ಕರಗಿಹೋಗುವ ಮುನ್ನ
ನೀ ಬಂದು ಜೊತೆಯಾಗು ಎಲ್ಲವನೂ ಒಟ್ಟುಗೂಡಿಸಬೇಕಿದೆ ನಾನು.
8 comments:
ತುಂಬಾ ಸುಂದರ ಕವನ. ಕಲ್ಪನೆಗೆಳೆಸುವಂತಿದೆ.
ಭಾವಪೂರ್ಣ ಕವನ. ಮೆಚ್ಚುಗೆಯಾಯಿತು.
ಶ್ಯಾಮಾ...
ಚಂದ ಇದ್ದು. ಇಷ್ಟಾತು :-)
ishtvaaytu :) nice ...
ಶ್ಯಾಮಾ,
ತುಂಬ ಇಷ್ಟ ಆತು.
ಎಷ್ಟ್ ಚೆನಾಗಿ ಬರದ್ದೆ ಗೊತ್ತಾ.
Please dont discontinue. ಬರೀತಾ ಇರು.
ಪ್ರೀತಿಯಿಂದ
ಸಿಂಧು.
ಬಹಳ ಸುಂದರ ಕವನ.....
ಇಷ್ಟೊಂದು ದಿನಗಳ ಬಳಿಕ ಬರೆದರೂ ಪ್ರೀತಿಯಿಂದ ಬಂದು ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
Goooood Times..:-)
Post a Comment