Wednesday, March 14, 2007

ಚಂದ್ರನು ಬಾವಿಗೆ ಬಿದ್ದನು....

ಚಂದ ಮಾನಿಗೂ ನನಗೂ ಮೊದಲಿನಿಂದ ಏನೋ ಒಂದು ಭಾವನಾತ್ಮಕ ಸಂಬಂಧ. ದಿನಾಲೂ ರಾತ್ರಿಯಾಗಾಸದಲ್ಲಿ ಚಂದ್ರನನ್ನು ಕಣ್ತುಂಬಿಕೊಳ್ಳುತ್ತಾ ನಕ್ಷತ್ರಗಳನ್ನು ಎಣಿಸುವುದೆಂದರೆ ನಂಗಿಷ್ಟ. ಚಂದ್ರನನ್ನು ನೋಡಿದಾಗಲೆಲ್ಲಾ ನನಗೆ ರೀತಿ ರಾತ್ರಿಯಾಗಾಸದಲ್ಲಿ ಮೋಹ ಬೆಳೆಯಲು ಕಾರಣವಾದ ಬಾಲ್ಯದ ದಿನಗಳು ನೆನಪಾಗುವವು.

ನಾನಾಗ 4-5 ವರ್ಷದವಳಿರಬಹುದು. ದಿನಾಲೂ ರಾತ್ರಿ ಊಟವಾದ ಮೇಲೆ ಅಮ್ಮ ಕೆಲಸದಲ್ಲಿ ಮುಳುಗಿರುವಾಗ ಅಪ್ಪಯ್ಯ ನನ್ನನ್ನು ಮತ್ತು ಅಕ್ಕನನ್ನು ಹೊರಗಡೆ ಅಂಗಳಕ್ಕೆ ಕರೆದೊಯುತ್ತಿದ್ದರು. ಊಟವಾದ ಮೇಲೆ ಮಲಗುವ ಮುನ್ನ ನೂರು ಹೆಜ್ಜೆ ನಡೆಯಲೇ ಬೇಕೆಂಬ ಕಾನೂನು ಬೇರೆ!! ಅಷ್ಟರಲ್ಲಿ ಅಮ್ಮ ನಮ್ಮ ಕಾಟವಿಲ್ಲದೇ ತನ್ನ ಕೆಲಸ ಮುಗಿಸಿಕೊಳ್ಳಲಿ ಎಂಬುದು ಉದ್ದೇಶವಿರಬೇಕು.
ಅಪ್ಪಯ್ಯಎರಡೂ ಕೈಯೊಳಗೆ ನಮ್ಮ ಪುಟ್ಟ ಪುಟ್ಟ ಬೆರಳುಗಳು ಬೆಸೆದಿರುತ್ತಿದ್ದವು. "ಉಂಡು ನೂರಡಿ ನಡೆದು" ಎನ್ನುತ್ತಾ ಶುರುವಾಗುತ್ತಿತ್ತು ನಮ್ಮ ಡಿ ಗೆ ಹೇಗಾದರೂ ಮಾಡಿ ಬೇಗ ಬೇಗ ನೂರು ನಡೆಯನ್ನು ಮುಗಿಸಬೇಕೆಂಬುದೇ ದಿನಾ ನನ್ನ ಆಲೋಚನೆ ಆಗಿರುತ್ತಿತ್ತು. ಒಂದೊಂದು ಹೆಜ್ಜೆಯನ್ನೂ ಲೆಕ್ಕ ಹಾಕಿ ನೂರಾದ ತಕ್ಷಣ "ಅಪ್ಪಯ್ಯ ನೂರು ಆಯ್ತು ನೂರು ಆಯ್ತು" ಎನ್ನುತ್ತಿದ್ದೆ. (ಆಗಲೇ ಲೆಕ್ಕದಲ್ಲಿ ಜಾಣ ! :-) ) "ಇಲ್ಲ ಇನ್ನೂ ಆಗಿಲ್ಲ " ಎಂಡುಬಿಡುತ್ತಿದ್ದರು. ಎಷ್ಟು ಬೇಜಾರಾಗ್ತಿತ್ತು.. ಸಾಕು ಸಾಕೂ ಎಂದು ಹಟ ಮಾಡುತ್ತಿದ್ದೆ.
ಕೊನೆಗೆ ಸರಿ ಹೋಗಲಿ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಕೂರೋಣವೆಂದು ಹೋದರೆ ನಾನು ಕಥೆ ಹೇಳು ಕಥೆ ಹೇಳೆಂದು ಪೀಡಿಸುತ್ತಿದ್ದೆ. ಅಪ್ಪಯ್ಯನಿಗೆ ಯಾವತ್ತೂ ಕಥೆ ಹೇಳಲು ಬರುವುದಿಲ್ಲ.. ಅದಕ್ಕೆ ಪದ್ಯ ಹೇಳ್ಕೊ ಡ್ತೀ ನಿ ಅಂತ ಶುರು ಮಾಡ್ತಿದ್ರು. ಅಪ್ಪಯ್ಯಹತ್ರ ಪದ್ಯಗಳ ಬುಟ್ಟಿನೆ ಇರ್ತಿತ್ತು ... ಅವೆಲ್ಲ ಪದ್ಯಗಳಲ್ಲಿ ನಂಗೆ ತುಂಬಾ ಇಷ್ಟವಾಗ್ತಿದ್ದಿದ್ದು, ಚಂದ್ರನೊಂದಿಗೆ ಸ್ನೇಹ ಬೆಳೆಯಲು ಕಾರಣವಾಗಿದ್ದು... ಲೇಖನ ಬರೆಯಲು ಪ್ರೇರೇಪಿಸಿದ್ದು.. ಇಂದಿಗೂ ನಾನು ಇಷ್ಟಪಟ್ಟು ಗುನುಗುವುದು ಎಂದರೆ...
ತಿಂಗಳ ಬೆಳಕಿನ ಇರುಳಿಳೊಂದು
ಅಮ್ಮನು ಕೆಲಸದಿ ಇರುತಿರೆ ಕಂಡು
ಗೋಪಿಯೂ ಪುಟ್ಟು ಹೊರಗಡೆ ಬಂದು
ಬಾವಿಯ ಇಣುಕಿದರು
ಬಾವಲಿ ಚಂದ್ರನ ಬಿಂಬವ ಕಂಡು
ಚಂದ್ರನು ಬಾವಿಗೆ ಬಿದ್ದನು ಎಂದು
ಅಯ್ಯೋ ಪಾಪವೇ ಎನ್ನುತಲೊಂದು ಕೊಕ್ಕೆಯ ಹುಡುಕಿದರು

ಹಗ್ಗದ ತುದಿಯಲಿ ಕೊಕ್ಕೆಯ ಕಟ್ಟಿ
ಚಂದ್ರನ ಮೇಲಕೆ ಎತ್ತಲೂ ಎಂದು
ಗೋಪಿಯೂ ಪುಟ್ಟು ಹಗ್ಗದ ಕೊಕ್ಕೆಯ ಬಾವಿಗೆ ಇಳಿಸಿದರು
ಹಗ್ಗದ ಕೊಕ್ಕೆಯೂ ಕಲ್ಲಿಗೆ ಸಿಕ್ಕಿ
ಪುಟ್ಟು ಚಂದ್ರನು ಸಿಕ್ಕೇ ಸಿಕ್ಕ ಎನ್ನುತಾ
ತುಂಬಾ ದಿಂಳೆಯೇ ಹಗ್ಗವು ತುಂಡಾಯ್ತು

ಎಳೆತದ ರಭಸಕೆ ಪುಟ್ಟು ಬಿದ್ದಾ,
ಮೆಲ್ಲನೇ ಮನೆ ಕಡೆ ನೋಡುತಲೆದ್ದ
ಗೋಪಿಗೆ ಆಗಸ ತೋರುತಲೆಂದ
ಗೋಪಿ ನೋಡಲ್ಲಿ
ಚಂದ್ರನ ಮೇಲಕೆ ಏರಿಸಿಬಿಟ್ಟೆ
ಮ್ಮದೇವರ ಬದುಕಿಸಿಬಿಟ್ಟೆ
ಅಮ್ಮಗೆ ಗೊತ್ತಾದರೆ ನಾ ಕೆಟ್ಟೇ
ಎಂದೋಡಿ ಪುಟ್ಟು.....

ಎಷ್ಟು ಚೆನ್ನಾಗಿರೋ ಪದ್ಯ... ದಿನಾಲೂ ಇದೆ ಪದ್ಯ ಹೇಳಿಕೊಡೆಂದು ಹಟ ಹಿಡಿಯುತ್ತಿದ್ದೆವು. ದಿನಾಲೂ ಮುಂದೆ ಏನಾಗುವುದೋ ಕಥೆಯಲ್ಲಿ ಎನ್ನುವ ಕುತೂಹಲ ಇದ್ದೇ ಇರುತ್ತಿತ್ತು... ಎಂಥ ಮುಗ್ಧತೆ!!!! ಆದರೆ ಒಂದೇ ಒಂದು ಬೇಜಾರಿತ್ತು ನಂಗೆ ಪದ್ಯ ಕೇಳುವಾಗ.. ಏನೆಂದರೆ ಮನೆಯಲ್ಲಿ ಅಕ್ಕನನ್ನು ಪುಟ್ಟು ಎಂದೆ ಕರೆಯುವುದು. ಪದ್ಯದಲ್ಲಿ ಅವಳು ಇರುವಾಗ ನಾನು ಏಕಿಲ್ಲ ಎಂದು ದಿನಾ ರಾಗ ಎಳೆಯುತ್ತಿದ್ದೆ. ಒಂದು ದಿನ ಸಾಕಾಗಿ ಅಪ್ಪಯ್ಯ ಪದ್ಯವನ್ನು ನನ್ನಿಷ್ಟದಂತೆ ಬದಲಿಸಿ,
"ಶ್ಯಾಮುವು ಪುಟ್ಟುವು ಹೊರಗಡೆ ಬಂದು ಬಾವಿಯ ಇಣುಕಿದರು"
ಎಂದು ತಿರುಚಿ ನನ್ನನ್ನು ಸಮಾಧಾನಗೊಳಿಸಿದರು. ಆಮೇಲೆಲ್ಲ ಪದ್ಯ ಕೇಳುವಾಗ ನಾವೇ ಅದರಲ್ಲಿರುವ ಮಕ್ಕಳೇನೋ ಎಂದು ಅನಿಸುತ್ತಿತ್ತು. ನಾವೇ ಬಾವಿ ಇಣುಕಿದಂತೆ, ಅಮ್ಮ ಬಂದರೆ ಏನಾಗುವುದೆಂಬ ಭಯ ಎಲ್ಲ ಕಣ್ಮುಂದೆ ಚಿತ್ರಿಸಿದಂತಿರುತಿತ್ತು ....ಎಷ್ಟೋ ಸಾರಿ ಹಾಗೆಯೇ ನಿದ್ದೆ ಹೋಗಿರುತ್ತಿದ್ದೆವು ನಮಗೆ ಅರಿವಿಲ್ಲದೆಯೇ.... ಎಷ್ಟು ಜೀವಕಳೆ ತುಂಬಿರುತ್ತಿತ್ತು ಸಂಜೆಗಳಲ್ಲಿ... ನೆನಪಿಸಿಕೊಂಡಾಗಲೆಲ್ಲ ಮತ್ತೆ ಪುಟ್ಟ ಹುಡುಗಿಯಾಗುತ್ತೇನೆ... ಮತ್ತೆ ಮರಳಿ ಬಾರದ ಕ್ಷಣಗಳಿಗಾಗಿ ಕಣ್ತುಂಬಿಕೊಳ್ಳುತ್ತದೆ... ಹಾಗೆ ಯೋಚಿಸುತ್ತಾ ನೆನಪಿನ ಸುಳಿಯಲ್ಲೆಲ್ಲೋ ಕಳೆದು ಹೋಗುತ್ತೇನೆ. ಇಂದಿಗೂ ತ್ತಲಾದೊಡನೆ ಒಬ್ಬಳೇ ಹೊರಗಡೆ ಆಕಾಶವನ್ನೇ ದಿಟ್ಟಿಸುತ್ತಾ ಗಂಟೆಗಟ್ಟಲೇ ನಿಂತು ಬಿಟ್ಟಿರುತ್ತೇನೆ.. ಕಿವಿಯಲ್ಲೆಲ್ಲ ಪುಟ್ಟ ಶ್ಯಾಮುವಿನ ಧ್ವನಿ ಗುಂಜಿಸುತ್ತಿರುತ್ತದೆ "ಚಂದ್ರನು ಬಾವಿಗೆ ಬಿದ್ದನು ಎಂದು...."

13 comments:

ಸ್ಮಿತಾ said...

Shyama ...Its too good...So sweet memory...

ಶ್ಯಾಮಾ said...

thanks smitha...

Aditya Prasad said...

nice one...nange esta aathu....

Sahana said...

hey... shyama, its too good really..

ಶ್ಯಾಮಾ said...

thanks a lot

Sushrutha Dodderi said...

ನೆನಪಿನಲೆಗಳ ಮೇಲೆ ಸುಮಧುರ ಪಯಣ... ತುಂಬಾ ಚೆನ್ನಾಗಿ ಬರ್ದಿದೀರ... ಈ ಚಂದ್ರ ಅಂದ್ರೆ ನಂಗೂ ಭಾಳಾ ಇಷ್ಟ. ಚಂದ್ರನ ಮೋಹಕ್ಕೆ ಬಿದ್ದವರೆಲ್ಲ 'ಚಂದ್ರಮತಿ'ಯರು ಅಂತ ಎಲ್ಲೋ ಓದಿದ್ದೆ! ನಾನೂ ಹಿಂದೊಮ್ಮೆ ಬರೆದಿದ್ದೆ ಚಂದ್ರನ ಬಗ್ಗೆ ನನ್ನ ಬ್ಲಾಗಲ್ಲಿ.

ಹಾಡು ನೆನಪಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...

ಶ್ಯಾಮಾ said...
This comment has been removed by the author.
ಶ್ಯಾಮಾ said...

ತುಂಬಾ ಥ್ಯಾಂಕ್ಸ್ ಸುಶ್ರುತ...... ಅಂದ ಹಾಗೆ ನಾನೂ ಚಂದ್ರಮಠಿ ಎಂದಾಯಿತು :-) ಚಂದ್ರನ ಬಗ್ಗೆ ಇನ್ನೂ ಸಾಕಷ್ಟು ಬರೆಯುವುದಿದೆ... Hope u will read....

ಇನ್ನೊಮ್ಮೆ ಥ್ಯಾಂಕ್ಸ್...

ಶ್ಯಾಮಾ said...
This comment has been removed by the author.
Sandeepa said...

ಇದ್ನೋದಿ ನಂಗೆ, ಸಣ್ಣಕಿದ್ದಾಗ ಮುಸ್ಸಂಜೆ ಹೊತ್ತಿಗೆ ದೇವ್ರ್ ಮುಂದೆ ಕೂರ್ಶ್ಗ್ಯಂಡು ಅಮ್ಮ ಹೇಳ್ಕೊಡ್ತಿದ್ದ ಭಜನೆ ಎಲ್ಲಾ ನೆನ್ಪಾಗ್ತ ಇದ್ದು.
ಅಷ್ಟೇ ಅಲ್ಲ, 'ಚಂದ್ರ' ಅನ್ನೋ ಶಬ್ದನೇ ಎಷ್ಟೊ ನೆನೆಪುಗಳನ್ನ ಬಡಿದು ಎಬ್ಬಿಸ್ತಾ ಇದ್ದು..
"ಬೆಳದಿಂಗಳಿರುಳಲ್ಲಿ ಬಯಲಾಟವಿದ್ದು..."
"ಉಡುರಾಜಂ ಕಳೆಗುಂದಿ ಪೆರ್ಚದಿಹನೆ..."

ಮತ್ತು ಸುಶ್ರುತನ ಸಾಲುಗಳು..
"ಚಂದಿರ ಎಂದರೆ ಬೆಳದಿಂಗಳು. ಬೆಳದಿಂಗಳು ಎಂದರೆ ಪ್ರೀತಿ. ಪ್ರೀತಿ ಎಂದರೆ ಅವಳು. ಅವಳು ಎಂದರೆ ಪ್ರೀತಿ.

ಹೀಗೆ ಬರಿತಾ ಇರಿ! :)

ಶ್ಯಾಮಾ said...

ಚಂದ್ರನೊಂದಿಗೆ ಬೆಸೆದಿರುವ ನೆನಪುಗಳನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ... ನನ್ನ ನೆನಪುಗಳನ್ನು ಓದಿದ್ದಕ್ಕೆ ಥ್ಯಾಂಕ್ಸ್.. ನಿಮಗೂ ನಿಮ್ಮ ಬಾಲ್ಯದ ನೆನಪುಗಳು ರೀಫ್ರೇಶ್ ಆಗಿದ್ದಕ್ಕೆ ಸಂತೋಷ..

ಶ್ರೀನಿಧಿ.ಡಿ.ಎಸ್ said...

ಶ್ಯಾಮಾ,
ಮತ್ತೊಂದು ಸರಿ ಬಾಲ್ಯಕ್ಕೆ ಹೋಗಿ ಬಂದೆ. ಇದೇ ಪದ್ಯನಾ, ನನ್ನಪ್ಪ ನಾನು ೩-೪ನೇ ಕ್ಲಾಸಲ್ಲಿ ಇರೋವಾಗ ಹೇಳಿದ್ದರು, ಮತ್ತು ರಾತ್ರೆ ಬಾವಿ ಇಣುಕಿದಾಗೆಲ್ಲ ಈ ಪದ್ಯ ನನಗೆ ಇವತ್ತಿಗೂ ನೆನಪಾಗುತ್ತದೆ. ತಾವು ಇಡಿಯ ಪದ್ಯ ನೆನಪಿಟ್ಟುಕೊಂಡಿದ್ದೀರಿ!
ಚೊಲೋ ಬರದ್ರಿ:)!

ಶ್ಯಾಮಾ said...

ಥ್ಯಾಂಕ್ಸ್ ಶ್ರೀನಿಧಿ...