Sunday, April 29, 2007

ಕನಸಿನ ಗೋಪುರ..

ಕಟ್ಟಬೇಡ ನೀ ಎಂದೂ ನಿನ್ನ
ಕನಸಿನ ಗೋಪುರವ
ಸಾಗರದ ತೀರದಲ್ಲಿ
ಏಕೆಂದರೆ ಸಾಗರದ ಅಲೆಗಳಿಗೆ ಇನ್ನಿಲ್ಲ
ಇಷ್ಟು ಸಹ ಕರುಣೆ
ನೀ ಕಟ್ಟಿ ಶೃಂರಿಸಿದ ಗೋಪುರವ
ತನ್ನ ಓಡಲೊ ಗೆ ಒಂದಾಗಿಸುವುದು
ಕ್ಷಣ ಮಾತ್ರದಲ್ಲೆಲ್ಲ

ಬೇಡ ಬಾ ನೀನು
ಸಾಗರ ತೀರದ ಆಸೆಯ ಬಿಟ್ಟು
ಮರಳ ಗೋಪುರ ನಿಲ್ಲುವುದಿಲ್ಲ
ಬಂದುಬಿಡು ನೀನು
ಟ್ಟೋ ನಾವು ನಮ್ಮೂರ
ಚಂದದ ಕೆರೆಯಂಚಿನಲ್ಲಿ
ಮಣ್ಣಿನಾ ಗೋಪುರವ
ಶೃಂರಿಸೋಣ ಕನಸುಗಳ
ಬಣ್ಣ ಬಣ್ಣದ ಚಿತ್ತಾರಗಳಿಂದ
ಏಕೆಂದರೆ ಯಾವ ಅಲೆಗಳ
ಭಯವೂ ಇಲ್ಲಿಲ್ಲ....

10 comments:

Sandeepa said...

chennagiddu.

ಶ್ಯಾಮಾ said...

ಥ್ಯಾಂಕ್ಯೂ

bhadra said...

ಮನೆಯ ಅಂಗಳದಲಿ ಹರವಿ ಹಾಕಿರುವ ಹಳಸಿನ ಹಪ್ಪಳ, ಉದ್ದಿನ ಹಪ್ಪಳ, ಸಂಡಿಗೆ, ಬಹಳ ರುಚಿಯಾಗಿವೆ. ಮನೆಯೊಳಗೆ ಉಪ್ಪಿನಕಾಯಿ, ಬಾಳೆಹಣ್ಣಿನ ಸೀಕರಣೆ, ಮಾವಿನಹಣ್ಣಿನ ಸೀಕರಣೆ, ಶ್ರೀಖಂಡ, ಮತ್ತಿತರೇ ತಿನಿಸುಗಳು ಇನ್ನೆಷ್ಟು ರುಚಿಕರವಾಗಿವೆಯೋ, ಬೇಗ ಬೇಗ ಎಲ್ಲವನ್ನೂ ರುಚಿ ತೋರಿಸಿ.

ಅಂದ ಚಂದದ ಸುಂದರ ಬ್ಲಾಗೊಂದು ಕಣ್ಣಿಗೆ ಕಂಡು ಮನದಾನಂದವಾಗಿದೆ.

ಒಳ್ಳೆಯದಾಗಲಿ

ಗುರುದೇವ ದಯಾ ಕರೋ ದೀನ ಜನೆ

ಶ್ಯಾಮಾ said...

ಧನ್ಯವಾದಗಳು...... ಎಲ್ಲ ತಿನಿಸುಗಳನ್ನೂ ಕೈಲಾದಷ್ಟು ರುಚಿಯಾಗಿ ಸಿದ್ಧಪಡಿಸಿ ಬಡಿಸಲು ಪ್ರಯತ್ನಿಸುತ್ತೇನೆ.. ಸವಿಯಲು ಆಗಾಗ ನನ್ನ ಬ್ಲಾಗಿನ ಅಂಗಳಕ್ಕೆ ಭೇಟಿ ಕೊಡುತ್ತಾ ಇರಿ

Anonymous said...

once again good wordings syama.

ಜಯಂತ ಬಾಬು said...

'ಊಟಕ್ಕೆ ಬಂದೇವು ನಾವು ..ನಿಮ್ಮ ಆಟ ಪಾಠ ಬಿಟ್ಟು ಊಟ ಬಡಿಸಮ್ಮ'..ನಿಮ್ಮ ಕವನಗಳು ಸೂಪರ್ ಹೀಗೆ ಆರ್ಕುಟ್ ನಲ್ಲಿ ವಿಹರಿಸುತ್ತ ನಿಮ್ಮ ಬ್ಲಾಗ್ ಗೆ ಬಂದೆ ..ಕುಶಿ ಆಯ್ತು ..ಹೀಗೆ ಬರಿತ ಇರಿ..

ಶ್ಯಾಮಾ said...

thanks ranju...
@ಜಯಂತ್
ನೆನಪಿನಂಗಳಕ್ಕೆ ಸ್ವಾಗತ...
ಹೀಗೆ ಭೇಟಿ ಕೊಡ್ತಾ ಇರಿ.....

Unknown said...

tumba ruchiyagiddu :)

GHCUTE said...

chennagi baritha idde...innu hechchige barta iru..olleyadaagali

ಕವನ said...

saagarada naavikanige barediddo ??