ನೂರು ಮಾತಿನ ಮೂರು ಹನಿಗಳು
ನನ್ನೊಳಗೆ ಆಡಲು
ಮಾತು ನೂರಿತ್ತು
ಏನು ಮಾತನಾಡುವುದೆಂದು
ತೋಚದೆ ನಾ ಮೌನಿಯಾಗಿದ್ದೆ.
ಬಹುಷಃ ನಿನ್ನಲ್ಲಿ
ಮಾತುಗಳೆಲ್ಲವೂ ಮುಗಿದಿತ್ತು
ಅದಕ್ಕೆ ನೀ
ಮೌನಿಯಾಗಿದ್ದೆ.
*************
ನೂರು ಕನಸುಗಳು ಚೂರಾಗಿ
ಮುನ್ನೂರು ಕನಸುಗಳಾಗಿವೆ
ಚೂರುಗಳನ್ನೇ ಆಯ್ದು ಆಯ್ದು
ಜೋಡಿಸುತ್ತಾ ಬಣ್ಣ
ಹಚ್ಚುತ್ತಿರುವೆ.
ಕೈ ಜೋಡಿಸಲು ನನ್ನೊಂದಿಗೆ
ನೀನಿಲ್ಲ ಅಷ್ಟೇ.
*************
ಕದ್ದ ಯಾವ ವಸ್ತುವೂ ನಮಗೆ
ದಕ್ಕಲಾರದೆಂದು ಯಾರೋ ಹೇಳಿದ್ದು
ಸರಿಯೇ ಇರಬೇಕು..
ಒಮ್ಮೆ ನಾನು ನಿನಗೆ
ಗೊತ್ತಾಗದಂತೆ ನಿನ್ನ
ಮನಸ್ಸನ್ನು ಕದ್ದುಬಿಟ್ಟಿದ್ದೆ!!.
1 comment:
ಶ್ಯಾಮಾ,
ಕವನ ಅರ್ಥ ಪೂರ್ಣವಾಗಿದೆ. ತುಂಬಾ ಚನ್ನಾಗಿ ಬರದ್ದೆ.
"ನೂರು ಕನಸುಗಳು ಚೂರಾಗಿ
ಮುನ್ನೂರು ಕನಸುಗಳಾಗಿವೆ
ಚೂರುಗಳನ್ನೇ ಆಯ್ದು ಆಯ್ದು
ಜೋಡಿಸುತ್ತಾ ಬಣ್ಣ
ಹಚ್ಚುತ್ತಿರುವೆ.
ಕೈ ಜೋಡಿಸಲು ನನ್ನೊಂದಿಗೆ
ನೀನಿಲ್ಲ ಅಷ್ಟೇ."
ಈ ಸಾಲುಗಳು ಹೃದಯ ತಟ್ಟಿತು. ಅವನಿಲ್ಲದ ಬದುಕು ಬದುಕಲ್ಲ. ಕಷ್ಟವಾಗಲಿ ಸುಖವಾಗಲಿ ಅವನ ಜೊತೆ ಇದ್ದರೆ ಬಾಳು ಬಂಗಾರ.
ಅವನು ಕನಸನ್ನಾ ಚೂರು ಮಾಡಿದ್ದಕ್ಕೆ ನಂಗೆ ವ್ಯಥೆಯಾಗುತ್ತಿದೆ.
ಮತ್ತೆ ನೋವಿನ ಅಲೆಗಳನ್ನಾ ಕವನವಾಗಿಸಿದ್ದಿಯಾ. ಆದರೆ ಈ ಸಾರಿ ಯಾಕೋ ಓದಲು ಹಿತವೆನಿಸುತ್ತಿದೆ.
Post a Comment