"ಹುಡ್ಗ ಹೆಂಗಿರ್ಬೇಕೆ ? ಏನೇನ್ ಕಂಡೀಶನ್ ನಿಂದು ?" ಚಿಕ್ಕಪ್ಪ ಕೇಳಿದ್ದಕ್ಕೆ
"ಹುಡ್ಗಂಗೆ ಕೊಳಲು ನುಡಿಸುವುದಕ್ಕೆ ಬರಬೇಕು " ಅಂದೆ.
"ಆಹಾಹಾ ಇವಳನ್ನು ಮದ್ವೆಯಾಗೋದಕ್ಕೆ ಬಂದ್ಬಿಡ್ತಾನೆ ಶ್ರೀಕೃಷ್ಣ ಪರಮಾತ್ಮ ಕೊಳಲೂದಿಕೊಂಡು" ಅಲ್ಲೇ ಕುಳಿತಿದ್ದ ತಮ್ಮ ದೊಡ್ಡದೊಂದು ನಗೆ ನಕ್ಕು ಹೇಳಿದ.
"ಹಾಗಲ್ವೆ ಹುಡ್ಗಿ ನಾನು ಸಿರೀಯಸ್ ಆಗಿ ಕೇಳ್ತಿದೀನಿ. ಹೇಳು" ಚಿಕ್ಕಪ್ಪ ಮತ್ತೆ ಹೇಳಿದರು .
"ನಾನೂ ಹಾಗೇ ಹೇಳಿದ್ದು. ಹುಡ್ಗಂಗೆ ಕೊಳಲೂದುವುದಕ್ಕೆ ಬಂದ್ರೆ ನಂಗಿಷ್ಟ . ಚೆನ್ನಾಗಿರ್ತದೆ ಅಂತ" ನಾನಂದೆ.
"ಆ ಹುಡ್ಗಿ ಏನೋ ಹೇಳ್ತಾಳೆ ನೀನು ಅದನ್ನು ಕೇಳ್ತಿಯ. ಸುಮ್ನಿರೋ ನೀನು. ಯಾವಾಗ ಬರೋದಕ್ಕೆ ಹೇಳ್ತೀಯ ಆ ಹುಡ್ಗನ ಕಡೆಯವರಿಗೆ?" ಅಮ್ಮ ಮಧ್ಯ ಬಾಯಿ ಹಾಕಿ ನನ್ನ ಬಾಯ್ಮುಚ್ಚಿಸಿದಳು.
* * * * * * *
ಒಂದ್ಸಲ ನಾನು 4-5 ವರ್ಷದವಳಿದ್ದಾಗ ನಮ್ಮೂರಿನ ದೇವಸ್ಥಾನದ ವಾರ್ಷಿಕೊತ್ಸವಕ್ಕೆ ಸಂಜೆ ಹೊತ್ತಲ್ಲಿ ಮನೆಯವರೆಲ್ಲರ ಜೊತೆ ಹೋಗಿದ್ದೆ .ತುಂಬ ಜನ ಜಂಗುಳಿ ನಡುವೆ ಹಿಡಿದುಕೊಂಡಿದ್ದ ಅಮ್ಮನ ಕೈ ಬಿಟ್ಟು ಹೋಗಿ ಕಳೆದು ಹೋಗಿದ್ದೆ. ಏನು ಮಾಡುವುದಕ್ಕೂ ಗೊತ್ತಾಗದೇ ಜನರ ನಡುವಲ್ಲೆಲ್ಲ ಓಡಾಡ್ತಾ ಓಡಾಡ್ತಾ ಅಮ್ಮನನ್ನು ಹುಡುಕ್ತಾ ಇದ್ದೆ. ಇನ್ನೇನು ಅಳು ಬರ್ತಾ ಇತ್ತು ಅಷ್ಟೊತ್ತಿಗೆ ಅದ್ಯಾವ್ದೋ ಧ್ವನಿ ನನ್ನನ್ನು ಸೆಳೆದುಬಿಡ್ತು. ದೇವಸ್ಥಾನದ ಪಕ್ಕದ ರಂಗಮಂಟಪದ ಹತ್ತಿರ ನಾನು ನಿಂತಿದ್ದೆ. ತಿರುಗಿ ನೋಡಿದೆ. ಯಾರೋ ಒಬ್ಬನು ಕೊಳಲು ನುಡಿಸ್ತಾ ಇದ್ದ. ರಂಗಮಂಟಪದ ಸುತ್ತಲೂ ಕೊಳಲುವಾದನ ಕೇಳಲು ಜನ ತುಂಬಿಬಿಟ್ಟಿದ್ದರು.ಅದೇ ಮೊದಲು ನಾನು ಕೊಳಲು ನುಡಿಸುವುದನ್ನು ನೋಡಿದ್ದು. ಆ ಕೊಳಲಿನ ದನಿಗೆ ನಾನು ಅದೇ ಆ ಕ್ಷಣದಲ್ಲೇ ಮಾರು ಹೋಗಿದ್ದೆ, ಎಷ್ಟೆಂದರೆ ನಾನು ಕಳೆದುಹೋಗಿದ್ದೇನೆ ಎನ್ನುವುದೇ ಮರೆತುಹೋಗುವಷ್ಟು. ಕೊಳಲಿನ ದನಿಯ ಮಾಧುರ್ಯಕ್ಕೆ ಸೋತು ಇನ್ಯಾವುದೋ ಲೋಕದಲ್ಲಿ ಕಳೆದುಹೋಗಿದ್ದೆ ಮತ್ತೊಮ್ಮೆ ನನಗರಿವಿಲ್ಲದೆ. ಬಹುಶಃ ಅವತ್ತು ನಾದದಲೆಯ ಲೋಕದಲ್ಲಿ ಕಳೆದು ಹೋದವಳು ಇನ್ನೂ ಸಿಕ್ಕಿಲ್ಲ ನನಗೆ ನಾನು!
ಆ ಕಡೆ ಮನೆಯವರೆಲ್ಲ ಕಳೆದುಹೋಗಿದ್ದ ನನ್ನನ್ನು ಹುಡುಕುತ್ತ ಸುಮಾರು 20 ನಿಮಿಷವೋ ಅರ್ಧಗಂಟೆಯೋ ಕಳೆದಮೇಲೆ ನಾನಿರುವಲ್ಲಿಗೆ ಬಂದು "ಇಲ್ಲಿದ್ದೀಯಾ ನೀನು ?" ಅಂದಾಗಲೇ ನಾನು ಅರಿವಿನಾಚೆಯ ಲೋಕದಿಂದ ಈಚೆಗೆ ಬಂದಿದ್ದು.
ಅವತ್ತಿನಿಂದ ನನಗೆ ಕೊಳಲುಗಾನವೆಂದರೆ ಅದೇನೋ ಮೋಹ. ಅದೆಷ್ಟೆಂದರೆ ಮಾತಿಲ್ಲದೆ ಮೌನವಾಗಿ ಸ್ವಲ್ಪ ಹೊತ್ತು ಕುಳಿತುಬಿಟ್ಟೆನೆಂದರೆ ಕಿವಿಯತುಂಬೆಲ್ಲ ತುಂಬಿಕೊಳ್ಳುತ್ತದೆ ಕೊಳಲಿನ ದನಿ. ಅದೆಲ್ಲಿಂದ ಬರುತ್ತದೆಯೋ ಗೊತ್ತಿಲ್ಲ. ರಾತ್ರಿ ನಿದ್ದೆಹೋದಮೇಲೂ ಒಮ್ಮೊಮ್ಮೆ ಎಚ್ಚರವಾಗುತ್ತದೆ ಕಿವಿಯಲ್ಲಿ ಕೊಳಲಿನ ಅದೇ ಆ ನಿನಾದ ಕೇಳಿದಂತಾಗಿ. ಆಗೆಲ್ಲ ಅಮ್ಮ "ಏನಾಯ್ತೆ ಯಾಕೆ ಎಚ್ರಾಯ್ತು ?" ಅಂತ ಕೇಳಿದರೆ
"ಯಾರೋ ಕೊಳಲೂದುವ ಸದ್ದು. ಆಹಾ ಎಂಥ ಅದ್ಭುತ ಕೊಳಲಿನ ಗಾನ. ಅದ್ಕೇಎಚ್ಚರವಾಗಿದ್ದು" ನಾನು ಅಂದರೆ
"ನಿನಗೆಂತ ಮರುಳು. ದಿನಾ ಇದೇ ರಾಗವಾಯ್ತು ನಿಂದು. ಯಾರು ಕೊಳಲೂದುತ್ತಾರೆ ಇಲ್ಲಿ? ಸುಮ್ನೆ ಮಲಕ್ಕೋ" ಎನ್ನುತ್ತಾಳೆ ಅಮ್ಮ.
ನಾನು ಹಾಗಾದರೆ ನಂಗೆ ಕೇಳಿದ್ದೇ ಸುಳ್ಳಾ ಅದು ಅಂತೆಲ್ಲ ಯೋಚನೆ ಮಾಡುತ್ತಾ ಮಲಗುತ್ತೇನೆ.
ನನ್ನ ತಮ್ಮನನ್ನು ಯಾವಾಗಲೂ ಪೀಡಿಸುತ್ತಿದ್ದೆ ಕೊಳಲೂದುವುದನ್ನು ಕಲ್ತುಕೊಳ್ಳೋ ಅಂತ. "ಸುಮ್ನೆ ಇರೆ. ನಂಗೆ ಇಂಟ್ರೆಸ್ಟ್ ಇಲ್ಲ್ಲ ಬರೀ ಬರೀ ಯಾಕೆ ನೀನು ಒತ್ತಾಯಿಸ್ತೀಯ?" ಅಂತ ಅವನು.
ಟಿವಿಯಲ್ಲಿ ಕೊಳಲುವಾದನ ಬರ್ತಾ ಇದ್ರಂತೂ ಆ ಚಾನೆಲ್ ಬದಲಾಯಿಸಕ್ಕೆ ನಾನ್ಯಾವತ್ತೂ ಬಿಡ್ತಾ ಇರ್ಲಿಲ್ಲ. ಇನ್ನು ನನ್ನ ಸಿ.ಡಿ. ರ್ರ್ಯಾಕ್ ತುಂಬ ಕೊಳಲುವಾದನದ ಸಿ.ಡಿ.ಗಳೇ. ಕೊನೆ ಕೊನೆಗೆ ಬ್ಯಾಗ್ರೌಂಡಲ್ಲಿ ಮೆಲುವಾಗಿ ಕೊಳಲಿನ ದನಿ ಕೇಳ್ತಾ ಇಲ್ದಿದ್ರೆ ನಂಗೆ ಓದಿದ್ದು ತಲೆಗೆ ಹತ್ತತಾ ಇರ್ಲಿಲ್ಲ. ಎಕ್ಸಾಮ್ ಟೈಮಲ್ಲಿ ಓದುವಾಗೆಲ್ಲ ನಾನು ತಮ್ಮ ಇದೇ ವಿಷಯಕ್ಕೆ ಜಗಳವಾಡ್ತಿದ್ವಿ.
ನನ್ನ ಈ ಥರದ ಹುಚ್ಚಿಗೆ ಅಮ್ಮ ಸಾಕಷ್ಟು ಹೇಳಿದ್ದೂ ಆಗಿತ್ತು . ಆದರೆ ಈಗ ಹುಡ್ಗನ ವಿಷಯ ಬಂದಾಗ ನಾನು ಹೇಳಿದ್ದು ಕೇಳಿ ಅಮ್ಮಂಗೆ ನಿಜವಾಗ್ಲೂ ಜಾಸ್ತಿನೇ ಸಿಟ್ಟು ಬಂದಿತ್ತು.
* * * * * * *
ಅಲ್ಲ ನಾನು ಕೇಳಿದ್ದಾದರೂ ಏನು? "ನಿಮ್ಗೆ ಕೊಳಲೂದುವುದಕ್ಕೆ ಬರುತ್ತಾ ?" ಅಂತ.
ಆತ ನಾನ್ಯಾವ್ದೋ ಜೋಕ್ ಹೇಳಿದ್ನೇನೋ ಅನ್ನೋ ಹಾಗೆ ನಕ್ಕಿದ್ದ. ಅವ್ನು ಮಾತಾಡುವಾಗ , ಏನೆಲ್ಲ ಹೇಳುವಾಗ ನಾನೂ ಹಾಗೇ ನಕ್ಕಿದ್ನಾ? ಇಲ್ವಲ್ಲ.
ಅವ್ನಿಗೆ ಸಿಟಿ ಲೈಫ್ ಹಿಡ್ಸಲ್ವಂತೆ. ಕೆಲ್ಸ ಮಾಡ್ಕೊಂಡು ಬದುಕ್ತಾ ಇರೋದು ಸಿಟಿಲಾದ್ರೂ ಹಳ್ಳಿ ಜೀವ್ನಾನೇ ಇಷ್ಟವಂತೆ. ಅಲ್ಲ ಅಂದವ್ರ್ಯಾರು. ನಾನು ಸಿಟಿಯಲ್ಲಿ ಹುಟ್ಟಿ ಬೆಳೆದವಳಾದರೇನು ನಂಗೆ ಈ ಹೈ ಹೀಲ್ದು ಮತ್ತೊಂದು ಮಗದೊಂದುಗಳನ್ನೆಲ್ಲ ಮೂಲೆಗ್ಹಾಕಿ ಬರಿಗಾಲಲ್ಲಿ ಅಂಗಳದ ಹಸಿ ಮಣ್ಣಮೇಲೆ ಓಡಾಡುತ್ತ ಹೂವು ಕೀಳೋದು ಇಷ್ಟ, ಗದ್ದೆ ಕೆಸರಲ್ಲಿ ಕಾಲು ಹುಗಿಸಿಕೊಂಡು ಓಡಾಡೋದು ಅಂದ್ರೆ ಇಷ್ಟ ಅಂತ ಮನಸ್ಸಲ್ಲಿ ಅನ್ನಿಸಿದರೂ ಹೇಳಬೇಕೆನಿಸಲಿಲ್ಲ ಯಾಕೋ ಅವನೆದುರಿಗೆ.
ಹೊರಗಡೆ ಸಿಗುವ ಜಂಕ್ ಫುಡ್ ಇಷ್ಟವೇ ಆಗೋಲ್ಲವಂತೆ ಆತನಿಗೆ. ಅವನಿಗೇನು ನಾನೂ ಬಿಸಿ ಬಿಸಿ ಅನ್ನಕ್ಕೆ ಬಿಸಿ ಬಿಸಿ ಹಾಲು ಹಾಕಿ ಕಲೆಸಿ ಮೇಲಿಂದ ಒಂದು ಮಾವಿನಮಿಡಿ ಜೊತೆಗೆ ಒಂದಿಷ್ಟು ಉಪ್ಪಿನ್ನಕಾಯಿ ರಸ ಹಾಕ್ಬಿಟ್ರೆ ಯಾವ ಪಿಜ್ಜಾ ತಂದಿಟ್ರೂ ಮೂಸಿಯೂ ನೋಡಲ್ಲ ಅಂತ ಹೇಳಬೇಕೆನಿಸಿತು. ಆದರೆ ಅವನೇನು ನನ್ನ ಅಭಿಪ್ರಾಯ ಕೇಳಲಿಲ್ಲವಲ್ಲ ಅದ್ಕೇ ಸುಮ್ನಾದೆ ಏನೂ ಹೇಳದೆ.
ಕಾರು,ಬೈಕು,ದುಡ್ಡು ,ಕಾಸು ಎಲ್ಲ ಇದ್ರೂ ಅದ್ನೇ ನೆಚ್ಕೊಂಡು ಇರೋದು ಇಷ್ಟವೇ ಇಲ್ವಂತೆ, ಬಹಳ ಸಿಂಪಲ್ಲಾಗಿ ಇರೋಕೆ ಇಷ್ಟವಂತೆ. ಕಾರು, ಬೈಕು,ಆಟೋ,ಬಸ್ಸು ಎಲ್ಲವೂ ಬೋರಾಗಿ ಎಷ್ಟೋ ಸಲ ಗೆಳತಿಯರ ಜೊತೆ ಕಥೆ ಹೇಳ್ತಾ ಗಂಟೆಗಟ್ಲೆ ನಡ್ಕೊಂಡು ಹೋಗೋ ಖುಷಿ ಇನ್ನೆಲ್ಲೂ ಸಿಕ್ಕಿಲ್ಲ ಅಂತ ಹೇಳೋ ಮನ್ಸಾದ್ರೂ ಅವನೇನೋ ಬೇರೆ ಹೇಳ್ತಿದ್ದರಿಂದ ಸುಮ್ನಾಗ್ಬೇಕಾಯ್ತು.
ಇಷ್ಟೆಲ್ಲಾ ಕಥೆ ಅವನು ಹೇಳಿದ ಮೇಲೆ ನನ್ನ ಬಗ್ಗೆ ನನ್ನ ಇಷ್ಟ ಕಷ್ಟಗಳ ಬಗ್ಗೆ ಒಂದು ಮಾತೂ ಕೇಳದೇ ಇದ್ರೂ ನಾನು "ನಿಮ್ಗೆ ಕೊಳಲೂದುವುದಕ್ಕೆ ಬರುತ್ತಾ?" ಅಂತ ಒಂದು ಮಾತು ಕೇಳಿದ್ರಲ್ಲಿ ತಪ್ಪೇನಿತ್ತು ಅಂತ ನಂಗೆ ಈಗ್ಲ್ಲೂ ಗೊತ್ತಾಗ್ತಿಲ್ಲ .
* * * * * * *
ಹರಿಯುತ್ತಿರುವ ಹೊಳೆಯ ಪಕ್ಕದಲ್ಲಿ ನೀರಲ್ಲಿ ಕಾಲಿಳಿಬಿಟ್ಟು ಕೊಳಲೂದುತ್ತಿರೋ ಅವನ ಪಕ್ಕದಲ್ಲಿ ಕೂತು, ಹುಲ್ಲು ಹಾಸಿನ ಮೇಲೆ ಹಾರಾಡ್ತಿರೋ ಪುಟಾಣಿ ಬಣ್ಣದ ಚಿಟ್ಟೆಗಳನ್ನ ಕಣ್ತುಂಬಿಕೊಳ್ಳುತ್ತ ಕೊಳಲಿನ ನಾದದ ಅಲೆಯಲ್ಲಿ ತೇಲುತ್ತಾ ಯಾವುದೋ ಲೋಕದಲ್ಲಿ ಕಳೆದುಹೋಗುತ್ತೇನೆ ಅಂತೆಲ್ಲ ಅಂದುಕೊಳ್ಳುವುದು ಕೇವಲ ಒಂದು ಕಾವ್ಯಾತ್ಮಕ ಕಲ್ಪನೆ. ಅದೇ ಬದುಕಲ್ಲ ಅಂತ ಗೊತ್ತು ನನಗೆ. ಅಂಥ ಹುಚ್ಚು ಆಸೆಯೇನೂ ನನಗಿಲ್ಲ. ಅಥವಾ ಅಂಥ ಕನಸೂ ಸಹ ನಂಗೆ ಒಮ್ಮೆಯೂ ಬಿದ್ದಿಲ್ಲ. ಆದರೂ ಅವನಿಗೆ ಕೊಳಲೂದುವುದಕ್ಕೆ ಬಂದರೆ ತಪ್ಪೇನು ಅಂತ.
ನಾಳೆ ಬರ್ತಿದ್ದಾನಲ್ಲ ಅವನಿಗೆ ಕೊಳಲೂದುವುದಕ್ಕೆ ಬರುತ್ತದೆಯೋ ಏನೋ? ಅಂತ ಯೋಚಿಸುತ್ತಲೇ ತುಟಿಯ ಮೇಲೊಂದು ಕಿರುನಗೆ. ಯೋಚಿಸುತ್ತಿರುವಾಗಲೇ ಕಣ್ಣನ್ನಾವರಿಸುತ್ತಿರುವ ನಿದ್ದೆಯೊಡನೆ, ಸುತ್ತ ಕವಿದ ಕತ್ತಲೆಯೊಳಗೆ ಎಲ್ಲಿಂದಲೋ ತೇಲಿ ಬಂದ ಮೋಹನ ಮುರಳಿ ಗಾನದ ಅಲೆಯಲ್ಲಿ ಕಳೆದುಹೋಗುತ್ತೇನೆ.
25 comments:
ಹ್ಮ್ಮ್.. ಚೆನ್ನಾಗ್ ಬರದ್ದೆ..
ಕೊಳಲೂದುವವನೆ,, ಅಲ್ಲ ಅಲ್ಲ, ಕೊಳಲು ನುಡಿಸುವವನೆ ಸಿಗ್ತ ಸುಮ್ನಿರು.
ನಾಳೆ ಅಲ್ದೋರ್ ನಾಡಿದ್ ಬರ್ತ..
btw, ಇದ್ನೋತ್ತಿದ್ದಾಗ ನನ್ನ 6th criteria ನೆನ್ಪಾಗಿ ಮುಗುಳ್ನಗು..
ಕೊಳಲೂದುವವ ನಾಳೆ ಬಂದ್ರೆಂತು ನಾಡಿದ್ದು ಬಂದ್ರೆಂತು, ನನ್ನ ಎಷ್ಟನೇ criteria ದಲ್ಲೂ ಅದಿಲ್ಲೆ :)
ನಿನ್ನ 6th criteria ಯಾವ್ದಪ್ಪಾ? ಮುಗುಳ್ನಗು ಹೇಳಿ ಬೇರೆ ಹೇಳ್ತೆ ;-)
Ha,
Bareyuva shailiyoo chennagide...
Idee postannu kanmuchchuvudaralli odisikondu hoythu..
Expecting some more stories on questions :-)...just kidding...
ಯಾವ ಮೋಹನ ಮುರಲಿ ಕರೆಯಿತೋ ಹಾಡು ನೆನಪಾಯ್ತು.
"ಸದ್ಡಿರದ ಪಸರುಡೆಯ ಮಲೆನಾಡ ಬನಗಳಲಿ.....ಅಲ್ಲಿ ಬಳಿ ಪಸಲೆಯಲಿ ದನಗಳೆಂಬಾ ಎಂಬ ದನಿಯು ದನಕಾಯುವವನ ಕೊಳಲೊಡನೆ ತೇಲಿಬರಲಿ" ಎಂದು ಕುವೆಂಪು ಅವರೇ ಹಾಡಿದ್ದಾರಲ್ಲ! ಕೊಳಲಲ್ಲಿ ಅದೇನೋ ಮಾಂತ್ರಿಕತೆ ಇರಬೇಕು.
ಇಲ್ಲೊಂದು ಹಾಡು ಹಾಕಿದ್ದೇನೆ ನೋಡಿ.ನಿಮಗಿಷ್ಟವಾಗಬಹುದು.
http://madhu-vana.blogspot.com/2008/03/blog-post_20.html
Cool!
ಕೊಳಲಿಗಿರುವ ಮೋಡಿ ಅದ್ಯಾವುದೋ ನನಗಂತೂ ಗೊತ್ತಿಲ್ಲ. ನನಗೂ ಅದರ ಮಾಯೆಯಿಂದ ಹೊರಬರಲಾಗಿಲ್ಲ, ಬೇಸರವಿಲ್ಲ.
ನಿಮ್ಮ ಕನಸಿನ ಕೊಳಲೂದುಗನೇ ನಿಮಗೆ ಸಿಗಲಿ.
ಏನ್ ಹುಡ್ಗಿರೋ
ಇದ್ಯಾಕೀನ್ಗಾಡ್ತಿರೋ
ಕೊಳಲು ಕೊಳಲು ಕೊಳಲು ಅಂಥ ಬಾಯಿ ಬಾಯಿ ಬಿಡ್ತ್ಹಿರೋ :)
criteria ಯಾಕೋ ತಿರುಮುರ್ವಾತ ಅಂತ ಸಂಶಯ. ಹುಡುಗುರು ಊದೋಕ್ಕೆ (ಕೊಳಲನ್ನ) ಬರುವಂಥ ಹುಡ್ಗಿರನ್ನ, ಹುಡ್ಗಿರು ಬಾರಿಸೋಕೆ (ತಬ್ಲಾವನ್ನ) ಬರುವನ್ಥ ಹುಡುಗುರನ್ನ ಇಷ್ಟ ಪಡ್ತಾರೆ ಅಂಥ ಕೇಳಿದ್ದುನ್ಟು. ಯಾಕೋ ಹುಡ್ಗ್ರಾಗಿ ಬಾರಿಸಲು (ಚಂಡೆಯನ್ನು) ಕಲಿತದ್ದು ವ್ಯರ್ಥವಾಯಿತ ಅಂಥ......
Vishwanatha Krishnamurthy Melinmane
Thanks,
"Expecting some more stories on questions" ಅನ್ನೋದು "just kidding" ಆದ್ರೂ ನಂಗೆ ಅರ್ಥ ಆಗ್ಲಿಲ್ಲ ಬಿಡಿ :)
ಮಧು,
"ಸದ್ಡಿರದ ಪಸರುಡೆಯ..." ತುಂಬ ಸುಂದರ ಹಾಡೊಂದನ್ನು ನೆನಪಿಸಿದ್ದೀರಿ.
ಕೊಳಲಿನ ಮಾಂತ್ರಿಕ ದನಿಗೆ ಮರುಳಾಗದೇ ಇರಲು ಸಾಧ್ಯವಿಲ್ಲ.
ನೀವು ಹಾಕಿದ ಹಾಡು ತುಂಬ ಚೆನ್ನಾಗಿದೆ,
ಧನ್ಯವಾದಗಳು.
BLOGKUT
Thanks
ಸುಪ್ತದೀಪ್ತಿ,
:)
ಈ ಕಥೆಯಲ್ಲಿ ಬರೆದಷ್ಟಿಲ್ಲದಿದ್ದರೂ ಒಂದು ಮಟ್ಟಿಗಿನ ಮೋಹ ಇದೆ ನಂಗೆ ಕೊಳಲಿನ ದನಿಯ ಬಗ್ಗೆ. ಅದರ ಮಾಂತ್ರಿಕ ಮೋಡಿಯೇ ಅಂಥದ್ದು.
ಕೊಳಲೂದುಗನೇ ಬೇಕೆಂಬ ಕನಸಿಲ್ಲ. ಆದರೆ ಕೊಳಲೂದುಗನಾಗಿದ್ದರೆ ಖುಷಿಯೇ :)
ಧನ್ಯವಾದಗಳು ನಿಮ್ಮ ಹಾರೈಕೆಗೆ.
bhm,
ನೀವು ಜೋರಾಗಿ ಕೂಗ್ತಿರೋ ಹಾಡು ಇಲ್ಲಿವರೆಗೂ ಕೇಳ್ತು.
Criteria ತಿರುವುಮುರುವು ಯಾಕೇಂತ. ಒಬ್ಬೊಬ್ರುದ್ದು ಒಂದೊಂದು ಥರದ Criteria.ಹಾಗಾಗಿ ನೀವು ಕಲ್ತಿದ್ದು ವ್ಯರ್ಥ ಆಗ್ಲಿಕ್ಕಿಲ್ಲ ಬಿಡಿ.
ಧನ್ಯವಾದಗಳು ಪ್ರತಿಕ್ರಿಯೆಗೆ
ಹ್ಮ ಕೂಸೆ ಚನ್ನಗಿ ಬರದ್ದೆ.
ಕೊಳಲನ್ನಾ ಊದುವವ ಸಿಗದೆ ಹ್ದ್ರು, ಸಿಕ್ಕವನಿಗೆ ಕ್ಲಾಸಿಗೆ ಕಳಸಿ ಕೊಳಲನ್ನ ಊದಕೆ ಕಲಸ್ಲಕ್ಕು ಎನಂಬೆ?
ನಾಳೆ ಬರವಂಗೆ ಕೊಳಲನ್ನು ಊದಕೆ ಬರ್ಲಿ ಅಂತ ಆಶಿಸ್ತಿ.
ಥಾಂಕ್ಸೆ ಕೂಸೆ.
ಹ್ಮ್ ನೀ ಹೇಳಿದ್ದು ಸರಿ ಇದ್ದು, ಬರ್ದೇ ಇದ್ರೆ ಕಲ್ಸಿರಾತು. :) ಅಡಿಗೆ ವಿಶ್ಯದಲ್ಲಿ ಅವ್ನೂ ಹಂಗೇ ಅನ್ಕಂಡ್ರೆ ಒಳ್ಳೆದಾಗಿತ್ತು ;-)
ನನ್ನಮ್ಮ ಇದನ್ನ ಓದಿರೆ ತಲೆಲ್ಲಿ ಹುಳ ಬಿಟ್ಗಂಡು, ನಾ ಬರ್ದಿದ್ದೆಲ್ಲ ನಿಜ ಅನ್ಕಂಡು ಇನ್ನೂ ತಲೆ ಕೆಡ್ಸ್ಗ್ಯಂಡು ಯೋಚನೆ ಮಾಡಕ್ಕೆ ಶುರು ಮಾಡ್ತನಾ ಅಂತ. :)
ಸಿಕ್ಕಿದ್ನಾ ಕೊಳಲೂದುವವನು?
ನನ್ನ ಫ್ರೆಂಡ್ ಒಬ್ಬಂಗೆ ಕೊಳಲೂದಲೆ ಬತ್ತು. ಹೇಳ್ಲಾ ಅವಂಗೆ?
ಚೆನ್ನಾಗಿದೆ... ಖುಷಿಯಾಯ್ತಿ...
ಹರೀಶ್ ಕೆ. ಆದೂರು.
ತುಂಬ ಚೆನ್ನಾಗಿದೆ ಶ್ಯಾಮಾ
ಶ್ಯಾಮಾ,
ಚೆನಾಗಿ ಬರದ್ದೆ. ಇಷ್ಟ ಆತು.
ನಾಳೆ ಬರುವವನು ಕೊಳಲು ಕಲಿತಿದ್ದರೂ ಕಲಿಯದೇ ಇದ್ದರೂ,ಕೊಳಲಿನ ದನಿ ಬನಿ ಎರಡೂ, ಅವನ ಮನದಲ್ಲಿರಲಿ. ನಿನ್ನ ಮನಕ್ಕೆ ಹಾಡಿನ ಸೇತುವೆಯ ನೇಯಲಿ.
ಶ್ಯಾಮಾ ಅನ್ನ ಬದಲು ಗೋಪೀ ಅಂತ ಕರೀಲಾ..
ತುಂಬ ಇಷ್ಟ ಆತು.
ಪ್ರೀತಿಯಿಂದ
ಸಿಂಧು.
ಭಾಗವತ ,
ಇನ್ನೂ ಇಲ್ಲಪ್ಪ :-)
ಸ್ಮಿತಾ,
Thankuu :)
ಸಾಹಿತ್ಯ ಸಂಜೆ,
ಧನ್ಯವಾದಗಳು ಮೆಚ್ಚಿಕೊಂಡಿದ್ದಕ್ಕೆ.
ಸಿಂಧು ಅಕ್ಕ,
ಇಷ್ಟ ಆಗಿದ್ದಕ್ಕೆ ಖುಷಿ ಆತು. :)
ಚಂದದ ಹಾರೈಕೆಗೆ ಧನ್ಯವಾದಗಳು.
ಹಂಗೆ ಕರದ್ರೆ ಖುಷಿನೆಯಾ :)
ಶ್ಯಾಮಾ,
ತುಂಬ ಇಷ್ಟವಾಯ್ತು. ಬರವಣಿಗೆಯಲ್ಲಿ ಲವಲವಿಕೆಯಿದೆ. ಇನ್ನೂ ಅದನ್ನೇ ದೊಡ್ಡದಾಗಿಸಿ ಬ್ಲಾಗಿನಾಚೆ ಕತೆ ಕಾದಂಬರಿ ಬರೆಯಿರಿ. ಕನ್ನಡಕ್ಕೆ ನಿಮ್ಮಂಥ ಕತೆಗಾರರ ಅವಶ್ಯಕತೆ ತುಂಬ ಇದೆ.
ಕೇಶವ (www.kannada-nudi.blogspot.com)
ಕೇಶವರವರೇ,
ಪುಟ್ಟ ಪುಟ್ಟ ಹೆಜ್ಜೆಯೊಡನೆ ಬರವಣಿಗೆಯ ಪ್ರಯತ್ನ ಸಾಗುತ್ತಲೇ ಇರುತ್ತದೆ, ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
ತುಂಬ ಧನ್ಯವಾದಗಳು.
ಶ್ಯಾಮಾ, ಕೊಳಲೂದಂವ ಬೇಗ ಸಿಗ್ಲಿ ನಿಮ್ಗೆ :)
ಹರೀಶ,
ಸ್ವಾಗತ ನಿಮ್ಗೆ ನನ್ನ ಬ್ಲಾಗಿಗೆ.
ಇದು ಬರೀ ಕಥೆ, ನನ್ನ ಕಥೆಯಲ್ಲ. :) ಆದರೂ ಅಂಥ ಹಾರೈಕೆ ಖುಷಿಯೇ.
ಧನ್ಯವಾದಗಳು :)
bereyawarige kolalu oodalu baruttadeyo illavo...annodakkinta nive yaake kolalu oodal kaliyabaaradu?
helloo shayama..
Idhu nimma nijavada story na..? illa ondu kaalpanika kathena?
kalpanikaddu aadre ok ne.. nimma presentation chennagide..gr8 work..
Idhu nimmade story andre.. then I woul like say something - "Holle knowledge idhe nimge antha ankotini.. adannu summane kolala kade alocahne madakke use maadi waste madkolla bedi.. Holle huduga sikkre maduve madkoli.. summane kolalu oodovonna kattkondu en madtira? Kolalina mele istu huchu irbardu.. Nija heyltidini change madkoli nimma attitude.. It's all abt yr mindset.. Nimminda maneli estu kasta padtaare -- enappa ee hudigi ee tara haadtaale antha -- dayamadi holle attitude belasi kolli.. Nimma parents ge yava vishaya samanadakara anistado aa tara maadi.. avaru namage janma kottidakku saartaka aagutadde.. don't mistake me.. "
Thanks,
Narayan
NannaKanda,
neevu heLid haage aagli.
Thanks
Narayan,
Thanks,
ನಿಜವಾಗ್ಲೂ ಇದು ನನ್ನ ಕಥೆ ಅಲ್ಲ, :) ನೀವು ತುಂಬಾ ಸೀರಿಯಸ್ ಆಗ್ಬಿಟ್ಟಿದೀರ ಅನ್ಸುತ್ತೆ, ನಿಮ್ಮ ಕಮೆಂಟ್ ಓದಿ ಭಯ ಆಗ್ಬಿಡ್ತು :)
ಇದು ಕೇವಲ ನನ್ನ ಕಲ್ಪನೆಯಲ್ಲಿ ಮೂಡಿದ ಒಂದು ಸರಳ ಕಥೆ ಅಷ್ಟೆ,
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು
your blog featured in kannada prabha website...
good article on Flute....
http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20080421094120&nDate=
Chevar,
Thank you
ಬರಹ ಚೆನ್ನಾಗಿದೆ....
Post a Comment