Tuesday, April 29, 2008

ನವ ಭಾವ

ಹಳೆಯ ಹಾಡು ಹಳೆಯ ರಾಗ
ಆದರೇಕೋ ಭಾವವಿಂದು ಹೊಸತಿದೆ
ಮರೆತುಹೋದ ಸಾಲದೊಂದು ಇಂದೇಕೋ ನೆನಪಾಗಿ
ತುಟಿಯ ಮೇಲೆ ಮತ್ತೆ ಮತ್ತೆ ನಲಿದಿದೆ.

ಕೆನ್ನೆಮೇಲೆ ಸಂಜೆಗೆಂಪು ರಂಗದೆಕೋ ಏರಿದೆ
ಕಿವಿಯ ಓಲೆ ಹರಳಿನಲ್ಲಿ ಹೊಸತೇನೋ ಮಿಂಚಿದೆ
ಮುಡಿಯಲಿಲ್ಲ ಸುಮದ ಇರುಹು, ಆದರಿಲ್ಲಿ
ನಿನ್ನೆ ಮುಡಿದ ಮಲ್ಲೆ ಮಾಲೆ ಇಂದೂ ಕಂಪ ಸೂಸುತಿದೆ.

ಕಣ್ಣ ತುಂಬ ಕನಸಿಗೆಲ್ಲ ಹೊಸತದೊಂದು ಚಿತ್ರಣ
ಕನಸ ಚಿತ್ರಕೆಲ್ಲ ಇಂದು ಹೊಸ ಹೊಸತೇ ಬಣ್ಣವು
ಮನಸದಾಗಿರೆ ಏಕೋ ಅರಳಿನಿಂತ ಕುಸುಮವು
ತುಟಿಯ ಮೇಲೆ ಎಳೆಯ ಚಿಗುರಿನಂತ ಮೆಲುನಗೆ.

ಇಳಿಸಂಜೆಯ ತಂಪುಗಾಳಿ , ಕೋಗಿಲೆಯ ಕುಹೂ ಕುಹೂ
ಮತ್ತೆಲ್ಲಿಂದಲೋ ತೇಲಿಬಂದ ಸಂಧ್ಯಾರಾಗದ ಜೊತೆಯಾಗೆ
ಮುದಗೊಂಡ ಮನವು ಉಲಿಯಿತು ಮೆಲ್ಲಗೆ
"ವಸಂತ ಬಂದನೇ ಬಾಳಿಗೆ ?"

6 comments:

ರಂಜನಾ ಹೆಗ್ಡೆ said...

ಕವನ ಚನ್ನಾಗಿ ಇದ್ದು.
ಕವನ ನೋಡಿದ್ರೆ ವಸಂತ ಬೈಂದಾ ಕಾಣ್ತು ಕಣೆ.

ಶ್ಯಾಮಾ said...

ಥಾಂಕ್ಸ್ :)

ಎಂತು ಗೊತ್ತಿದ್ದನೆ, ಅವತ್ತು ಎಂತಕ್ಕೋ ಸಖತ್ ಬೇಜಾರಗಿತ್ತು ಮನಸಿಗೆ, ಅವಾಗಾ ಯಾವತ್ತೋ ಅರ್ಧ ಬರ್ದಿಟ್ಟಿದ್ದ ಈ ಕವನ ನೆನಪಾತು. ಸ್ವಲ್ಪ ಮೂಡ್ ಸರಿ ಮಾಡ್ಕ್ಯಳನ ಅಂತ ಪೂರ್ತಿ ಮಾಡಿದಿ ಈ ಥರ, ಆದರೆ ನಂಗೇಕೋ ಅಷ್ಟು ಸರಿ ಅನ್ಸಲ್ಲೆ. ಏನೋ ಮಿಸ್ಸಿಂಗ್ ಅನ್ಸ್ತಾ ಇದ್ದು

ಶರಶ್ಚಂದ್ರ ಕಲ್ಮನೆ said...

ಕವನ ಚನ್ನಾಗಿದ್ದು. ನನ್ನ ಬ್ಲಾಗ್ ನಲ್ಲಿ ನಿಮ್ಮ ಅಡ್ರಸ್ ನ ಲಿಂಕ್ ಮಾಡ್ಕ್ಯಳ್ಲ? ನಾನು ಇತ್ತೇಚೆಗಷ್ಟೆ ಶುರು ಮಾಡಿದ್ದಿ.

ತೇಜಸ್ವಿನಿ ಹೆಗಡೆ said...

ಶ್ಯಾಮಾ,

ಸುಂದರ ಕವನ.. ವಸಂತ ಬಂದ್ರೆ ನನ್ಗೂ ಕಾಣ್ಸು ಹಾಂ..?;-)

Yogesh Bhat said...

ಶುಭ್ರ ಬಾವ ಯಾವತ್ತೂ ಮನಸನ್ನು ಶೃಂಗಾರಗೊಳಿಸುತ್ತೆ.
"ನವ ಬಾವವೇ ವಸಂತ" - nice concept

ಶ್ಯಾಮಾ said...

ಶರಶ್ಚಂದ್ರ,

Welcome to my blog.
you can give link to my blog.
Thanku.

ತೇಜಸ್ವಿನಿ,
:) khandita

Thanks

Yogesh,
"ನವ ಬಾವವೇ ವಸಂತ" houdu alda :)
Thanku