Friday, August 1, 2008

ಮೌನದ ಗೆಳತಿ

ಈಗೀಗ ನನ್ನ ಹೆಜ್ಜೆಗಳಿಗೆ ಸದ್ದಿಲ್ಲ
ಘಲು ಘಲು ಎನ್ನುತ್ತಿದ್ದ
ಗೆಜ್ಜೆಗಳಿಗೂ ಯಾಕೋ ಮೌನದ ಮುಸುಕು.
ಕಿಂಕಿಣಿಸುತ್ತಿದ್ದ ಬಳೆಗಳದು
ಮಾತಿಲ್ಲವೀಗ,
ಕಂಗಳೊಳಗೆ ಕನಸುಗಳ ನಗೆಯ
ಕಿಲಕಿಲವಿಲ್ಲದೇ ಬರೀ ನಿಶ್ಶಬ್ದ.
ಮನದ ಕಡಲದು
ಪಿಸುಮಾತಿನ ಭಾವದಲೆಗಳ
ಭೋರ್ಗರೆತವಿಲ್ಲದೆ ಪ್ರಶಾಂತ.
ಮಾನಸದೊಳು ಭಾವವಾಗಿ
ಕಣ್ಣಂಚಿನ ಮಿಂಚಾಗಿ
ತುಟಿಯಂಚಿನಲಿ ನಗೆಯಾಗುತ್ತಿದ್ದ
ಕವಿತೆಗಳಿಗೀಗ ಧ್ಯಾನಸ್ಥ ಮೌನ.
ನಾನೀಗ ಮೌನದ ಗೆಳತಿ.

4 comments:

ಮಲ್ಲಿಕಾಜು೯ನ ತಿಪ್ಪಾರ said...

ತುಟಿಯಂಚಿನಲಿ ನಗೆಯಾಗುತ್ತಿದ್ದ
ಕವಿತೆಗಳಿಗೀಗ ಧ್ಯಾನಸ್ಥ ಮೌನ.
ನಾನೀಗ ಮೌನದ ಗೆಳತಿ.

Beautifull lines.. Good poem

Mallikarjun
www.nannahaadu.blogspot.com

Sree said...

ವ್ಹಾ! ವ್ಹಾ!! ಚೆನ್ನಾಗಿದೆ ಶ್ಯಾಮಾ...ಕವನದಿಂದ ಕವನಕ್ಕೆ ಪುಟ್ಟ ಹುಡುಗಿಯ ಸಾಲುಗಳು ದಟ್ಟವಾಗ್ತಿವೆ!
ಆದ್ರೆ ತುಟಿಯಂಚಲ್ಲಿ ನಗೆ ಮಿಂಚು ಮಾಯವಾಗೋ ಭಾರವಾದ ಕ್ಷಣಗಳಿಗೇ ಕವಿತೆಗಳ ಜೊತೆಯ ನಂಟು ಹೆಚ್ಚೇನೋ ಅಲ್ವಾ!:)

ಯಜ್ಞೇಶ್ (yajnesh) said...

ಶ್ಯಾಮ,

ಕವನ ತುಂಬಾ ಚೆನ್ನಾಗಿದ್ದು

ನವಿಲುಗರಿ ಹುಡುಗ said...

tumba muddagide...:) mouna yaaake antanu helidre innu bombataagirtittu alva?