ಮಿಂದು ತಂಪಾದ ಇಳೆಯ
ಸೊ
ಛ ಕ್ಕೆಂದು ಕಣ್ಮನ ಸೆಳೆದವಲ್ಲ ಆ
ಬೇಲಿ ಮೇಲಿನಾ ನೀಲಿ ಹೂಗಳು
ಹ
ಮುಂದೆ ಹೋಗಲಾರೆವೆಂದು
ನ
ಹರಿಸಲಾರೆವೆಂದವಲ್ಲ ಕಂಗಳು
ಅದೇನು ಸೆಳೆತವೋ ಆ
ಬೇಲಿ ಮೇಲಿನ ನೀಲಿ ಹೂಗಳದು
ಕುಂಡ ದ ಚೆಂಗುಲಾಬಿ
ಬಳ್ಳಿಗಂಟಿದಾ ಮೊಲ್ಲೆ ಮಲ್ಲಿಗೆ
ಹಿತ್ತಲ ಗಿಡದ ಸೇವಂತಿಗೆ
ಏಕೋ ಮುದ ನೀಡಲಿಲ್ಲ ಇಂದು
ಮತ್ತೆ ಮತ್ತೆ ಹುಡುಕಿದ್ದು ಆ
ಬೇಲಿ ಮೇಲಿನ ನೀಲಿ ಹೂಗಳನ್ನ
ದಿನವೆಲ್ಲಾ ಮನದಲ್ಲಿ
ನೀಲಿ ಹೂಗಳದ್ದೇ ಧ್ಯಾನ
ನಿಂತಲ್ಲಿ ನಿಲ್ಲುತ್ತಿಲ್ಲ ಮನಸ್ಸು
ಮತ್ತೆ ಮತ್ತೆ ಓಡುತ್ತಿದೆ ಅಲ್ಲಿ ಆ
ಬೇಲಿ ಮೇಲಿನಾ ನೀಲಿ ಹೂಗಳೆಡೆಗೆ
ಸಂಜೆಯಾಯ್ತಲ್ಲ ಇನ್ನೇನು
ಬಾಡಿ ಹೋಗಿರಬಹುದು ಆ
ಬೇಲಿ ಮೇಲಿನಾ ನೀಲಿ ಹೂಗಳು
ಎಂದಾಕ್ಷಣ ಮನವೂ ಕೂಡ ಆ
ಹೂಗಳಂತೇ ಮುದು
ಕಣ್ಣಿಂದ ನೀರ ಹನಿ ಜಾರಿ ಜಾರಿ
ನಿದ್ದೆಯಾಳಕ್ಕೆ ಜಾರಿದಾಗ ಒಂದು
ಸುಂದರ ಕನಸಾಯ್ತು
ಮಧ್ಯದಲ್ಲಿ ನಿಂ
ಸುತ್ತಲೂ ನೂರು ನೂರಾರು
ನೀಲಿ ಹೂಗಳು
ಅವೇ ಆ ಬೇಲಿ ಮೇಲಿನಾ
ನೀಲಿ ಹೂಗಳು.......
6 comments:
superb...my favourire
ಸಕ್ಕತ್ತಾಗಿದ್ದು!!
Thanku
Welcome to the world of bloggers....
Keep it Up !!!!
Thanku so much.....
idu aste pade oade vodsgyattu.. cholo barithe maga
Post a Comment