Friday, March 9, 2007

ನೀಲಿ ಹೂಗಳು.................

ಎಲ್ಲೆಲ್ಲೂ ಮುಸುಕಿದಾ ಇಬ್ಬನಿಯಲ್ಲಿ
ಮಿಂದು ತಂಪಾದ ಇಳೆಯ
ಸೊಗಿನ ನೋಟದಲ್ಲಿ ಮೈಮರೆತಿರುವಾಗ
ಕ್ಕೆಂದು ಕಣ್ಮನ ಸೆಳೆದವಲ್ಲ
ಬೇಲಿ ಮೇಲಿನಾ ನೀಲಿ ಹೂಗಳು

ಹೂಡಿದವಲ್ಲ ಕಾ ಲ್ಗಳು
ಮುಂದೆ ಹೋಗಲಾರೆವೆಂದು
ಟ್ಟ ನೋಟವ ಅತ್ತಿತ್ತ
ಹರಿಸಲಾರೆವೆಂವಲ್ಲ ಕಂಗಳು
ಅದೇನು ಸೆಳೆತವೋ
ಬೇಲಿ ಮೇಲಿನ ನೀಲಿ ಹೂಗದು

ಕುಂ ಚೆಂಗುಲಾಬಿ
ಬಳ್ಳಿಗಂಟಿದಾ ಮೊಲ್ಲೆ ಮಲ್ಲಿಗೆ
ಹಿತ್ತಲ ಗಿಡದ ಸೇವಂತಿಗೆ
ಏಕೋ ಮುದ ನೀಡಲಿಲ್ಲ ಇಂದು
ಮತ್ತೆ ಮತ್ತೆ ಹುಡುಕಿದ್ದು
ಬೇಲಿ ಮೇಲಿನ ನೀಲಿ ಹೂಗಳನ್ನ

ದಿನವೆಲ್ಲಾ ಮನದಲ್ಲಿ
ನೀಲಿ ಹೂಗಳದ್ದೇ ಧ್ಯಾನ
ನಿಂತಲ್ಲಿ ನಿಲ್ಲುತ್ತಿಲ್ಲ ಮನಸ್ಸು
ಮತ್ತೆ ಮತ್ತೆ ಡುತ್ತಿದೆ ಅಲ್ಲಿ
ಬೇಲಿ ಮೇಲಿನಾ ನೀಲಿ ಹೂಗಳೆಡೆಗೆ

ಸಂಜೆಯಾಯ್ತಲ್ಲ ಇನ್ನೇನು
ಬಾಡಿ ಹೋಗಿರಬಹುದು
ಬೇಲಿ ಮೇಲಿನಾ ನೀಲಿ ಹೂಗಳು
ಎಂದಾಕ್ಷಣ ಮನವೂ ಕೂಡ
ಹೂಗಳಂತೇ ಮುದುಡಿ ಹೋಯ್ತಲ್ಲ
ಕಣ್ಣಿಂದ ನೀರ ಹನಿ ಜಾರಿ ಜಾರಿ
ನಿದ್ದೆಯಾಳಕ್ಕೆ ಜಾರಿದಾಗ ಒಂದು
ಸುಂದರ ಕನಸಾಯ್ತು
ಮಧ್ಯದಲ್ಲಿ ನಿಂತಿರಲು ನಾನು
ಸುತ್ತಲೂ ನೂರು ನೂರಾರು
ನೀಲಿ ಹೂಗಳು
ಅವೇ ಬೇಲಿ ಮೇಲಿನಾ
ನೀಲಿ ಹೂಗಳು.......

6 comments:

Unknown said...

superb...my favourire

Sandeepa said...

ಸಕ್ಕತ್ತಾಗಿದ್ದು!!

ಶ್ಯಾಮಾ said...

Thanku

Unknown said...

Welcome to the world of bloggers....
Keep it Up !!!!

ಶ್ಯಾಮಾ said...

Thanku so much.....

Unknown said...

idu aste pade oade vodsgyattu.. cholo barithe maga