Monday, March 26, 2007

ಕನಸುಗಳು...

ಕಂಗಳ ತುಂಬಾ ಕನಸುಗಳಿದ್ದವು
ಕನಸುಗಳ ಪ್ರೀತಿಸಿದೆ
ಕನಸುಗಳನೆ
ಉಸಿರಾಗಿಸಿದೆ
ಕನಸುಗಳನ್ನು ಎದೆಯ
ಗೂಡಲ್ಲಿ ಬಚ್ಚಿಟ್ಟೆ
ಒಮ್ಮೆ ತಾರೆಗಳ ನೋಡಿ
ಮನಸೋತೆ ....
ತಾರೆಗಳ ಬಿಂಬ ನನ್ನ ಕಣ್ಣಲ್ಲಿ ಪ್ರತಿಬಿಂಬಿಸಿತು..
ತಾರೆಗಳ ಪ್ರೀತಿಸಿದೆ
ತಾರೆಗಳೊಡನೆ ನಲಿದೆ
ಎದೆಯ ಗೂಡಲ್ಲಿದ್ದ ಕನಸುಗಳೆಲ್ಲ
ನೊಂದುಕೊಂಡವೇನೋ ನನ್ನ
ಪ್ರೀತಿಯ ತಾರೆಗಳೊಡನೆ
ಹಂಚಿಕೊಳ್ಳಲಾಗದೆ,
ಕನಸುಗಳೆಲ್ಲ ತಾರೆಗಳಾಗಿ
ದೂರದಾಗಸ ಸೇರಿವು
ನನ್ನ ಕೈಗೆ ನಿಲುಕದ ಹಾಗೆ...
ದೂರದಲ್ಲಿ ನಿಂತು
ನೋಡಿ ನಲಿಯುವುದೊಂದೇ
ಈಗ ನನ್ನ ಪಾಲಿಗೆ.

3 comments:

Sandeepa said...

"ಎದೆಯ ಗೂಡಲ್ಲಿದ್ದ ಕನಸುಗಳೆಲ್ಲ
ನೊಂದುಕೊಂಡವೇನೋ..."
hmm.. ಒಳ್ಳೇ ಸಾಲುಗಳು..

btw,
the new layout, color scheme of the blog is good. A good change

ಶ್ಯಾಮಾ said...

ನೊಂದುಕೊಂಡ ಆ ಕನಸುಗಳಿನ್ನೆಲ್ಲಿ??!!! Thanks for the comment....

Unknown said...

ದೂರದಲ್ಲಿ ನಿಂತು
ನೋಡಿ ನಲಿಯುವುದೊಂದೇ
ಈಗ ನನ್ನ ಪಾಲಿಗೆ....
this is bare fact dear....

I FELT IT...