Monday, March 10, 2008

ಶುಭಾಶಯಗಳು

ನಂಗೆ ಮರೆವು ಸ್ವಲ್ಪ ಜಾಸ್ತಿನೇ ಜಾಸ್ತಿ. ಅದು ಅವಾಗಾವಾಗ prove ಆಗ್ತಾ ಇರುತ್ತೆ. ಅದೇನು ಹೊಸ ವಿಷಯ ಅಲ್ಲ ಬಿಡಿ. ಆದರೂ ಈ ವಿಷಯವನ್ನು ಈಗ ಇಲ್ಲಿ ಎಲ್ಲರಿರೆದುರಿಗೆ ಹೇಳೋ ಅಂತ ವಿಷಯನಾದ್ರೂ ಏನು ಅಂದ್ರೆ ...

ಸ್ವಲ್ಪ ದಿನಗಳ ಹಿಂದೆ ಯಾರದ್ದೋ ಬ್ಲಾಗ್ ಅಲ್ಲಿ "ನನ್ನ ಬ್ಲಾಗ್ ನ ಮೊದಲನೆ ಹುಟ್ಟು ಹಬ್ಬ " ಅಂತ ಓದಿದೆ. ಥಟ್ಟನೆ ನನ್ನ ಬ್ಲಾಗ್ ನ ಹುಟ್ಟಿದ ಹಬ್ಬ ಯಾವಾಗ? ಅಂತ ಪ್ರಶ್ನೆ ತಲೆಯಲ್ಲಿ ಬಂತು. ಬ್ಲಾಗ್ ಗೆ ಹೋಗಿ ನೋಡಿದೆ. ಮೊದಲ ಪೋಸ್ಟ್ ನ ಡೇಟ್ ೮-ಮಾರ್ಚ್-೨೦೦೭ ಅಂತ ಇತ್ತು. ಓಹೋ ಇನ್ನೂ ಸುಮಾರು ದಿನ ಇದೆ. ನಾನೂ ನನ್ನ ಬ್ಲಾಗ್ ನ ಹುಟ್ಟು ಹಬ್ಬವನ್ನು ಆಚರಿಸಬೇಕು ಅಂತ ಮನಸ್ಸಲ್ಲೇ ನಕ್ಕು ಸುಮ್ಮನಾಗಿದ್ದೆ.

ಸ್ವಲ್ಪ ದಿನಗಳ ಹಿಂದೆ ಎನ್ನುವ ಒಂದು ದಿನ ಮತ್ತು ಇವತ್ತಿನ ದಿನದ ಮಧ್ಯ ಎಷ್ಟೋ ದಿನಗಳು ಬಂದು ಬಿಟ್ಟಿದ್ದರಿಂದ ನಂಗೆ ನನ್ನ ಬ್ಲಾಗ್ ನ ಹುಟ್ಟುಹಬ್ಬ, ಅದನ್ನ ನಾನು ಸಂಭ್ರಮಿಸಬೇಕು ಅಂತ ಅಂದುಕೊಂಡಿದ್ದು ಎಲ್ಲ ಮರೆತು ಹೋಗಿತ್ತು.

ಇವತ್ತು ಅದೇಕೋ ನನ್ನ ಬ್ಲಾಗ್ ಅಲ್ಲಿ ಏನನ್ನೋ ಹುಡುಕುತ್ತಿದ್ದವಳಿಗೆ ಮೊದಲ ಪೋಸ್ಟ್ ನ ಡೇಟ್ ಕಾಣಿಸಿತು . ಬ್ಲಾಗ್ ನ ಹುಟ್ಟು ಹಬ್ಬದ ದಿನ ಕಳೆದು ಮತ್ತೆರಡು ದಿನ ಕಳೆದಿತ್ತು. ಅವಾಗಲೇ ಮೇಲ್ಕಂಡ ವಿಷಯಗಳೆಲ್ಲ ತಲೆಯಲ್ಲಿ ಹಾದು ಹೋಗಿ ಮನಸ್ಸು ವಿಚಿತ್ರ ಭಾವನೆಗಳಿಂದ ತುಂಬಿ ಹೋಯಿತು. ತಮ್ಮ ಸ್ನೇಹಿತರ ಹುಟ್ಟು ಹಬ್ಬದ ಪಾರ್ಟಿಗಳಿಗೆ ಹೋಗಿ ಬಂದು ತಮ್ಮ ಹುಟ್ಟು ಹಬ್ಬವನ್ನೂ ಹೀಗೆಯೇ ಆಚರಿಸುತ್ತಾರ ನಮ್ಮ ಮನೆಯಲ್ಲಿ? ಅಂತ ಕನಸು ಕಂಡು ಅಮೇಲೆಅದು ಹಾಗೆ ಆಗದಿದ್ದಲ್ಲಿ ಬೇಸರಿಸಿಕೊಂಡು ಮುನಿಸಿಕೊಂಡು ಕುಳಿತಿರುವ ಮುದ್ದು ಮಗುವಿನಂತೆ ನನ್ನ ಬ್ಲಾಗ್ ನಂಗೆ ಕಂಡಿತು.

ಒಂದು ವರ್ಷದ ಹಿಂದೆ ಬ್ಲಾಗ್ ನಲ್ಲಿ ಬರೆಯಲು ಆರಂಭಿಸಿದಾಗ ಇಂಥದ್ದೇ ಬರಹಗಳನ್ನು ಬರೆಯಬೇಕು ಹೀಗೆಯೇ ಬರೆಯಬೇಕು ಅಂತ ಏನು ನಿರ್ಧರಿಸಿರಲಿಲ್ಲ, ನಾನು ಬರೆದಿಟ್ಟಿದ್ದ ಒಂದಷ್ಟು ಬರಹಗಳನ್ನು ಬ್ಲಾಗ್ ನಲ್ಲಿ ಹರಿಯ ಬಿಡಬೇಕು ಎಂದಷ್ಟೇ ಅಂದುಕೊಂಡಿದ್ದು. ಬರೆಯುತ್ತ ಬರೆಯುತ್ತ ಬರೆವಣಿಗೆಯೆಡೆಗಿನ ನನ್ನ ಪ್ರೀತಿ ಮತ್ತೂ ಹೆಚ್ಚಾಗಿದ್ದಕ್ಕೆ ತುಂಬ ಖುಷಿ ಇದೆ.

ನಾನು ಪ್ರೀತಿಯಿಂದ ಬರೆದ ಬರಹಗಳನ್ನು ಪ್ರೀತಿಯಿಂದ ಓದಿ , ತಪ್ಪುಗಳಿದ್ದಲ್ಲಿ ಹೇಳಿ ತಿದ್ದಿಕೊಳ್ಳಲು ನೆರವಾಗಿ, ಮತ್ತಷ್ಟು ಬರೆಯಲು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ನನ್ನ ಧನ್ಯವಾದಗಳು.

ಹುಟ್ಟು ಹಬ್ಬ ಕಳೆದು ೨ ದಿನವಾದರೇನು? ೪ ದಿನವಾದರೇನು? ಬರಹ ಚಿರನೂತನ ಅದಕ್ಕೆ ದಿನ ದಿನ ದಿನವೂ ಹಬ್ಬ.
ಅದರೂ ....
ನನ್ನ ಪ್ರೀತಿಯ ಬರಹಗಳನ್ನು ಕಟ್ಟಿಡುವ ಪುಟ್ಟ ಬುಟ್ಟಿ "ನೆನಪಿನಗಳಿಂದ ಒಂದಿಷ್ಟು"ವಿಗೆ ಮೊದಲನೆಯ ಹುಟ್ಟುಹಬ್ಬದ ಶುಭಾಶಯಗಳು ಮನತುಂಬಿದ ಪ್ರೀತಿಯೊಂದಿಗೆ.
----ಶ್ಯಾಮಾ

17 comments:

ವಿ.ರಾ.ಹೆ. said...

ಶುಭಾಶಯಗಳು

ನೆನಪಿನಂಗಳದಿಂದ ಒಂದಿಷ್ಟು.. ಹೀಗೆ ಬರುತ್ತಿರಲಿ ಇಷ್ಟಿಷ್ಟು ;)

ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮಾ...
"ನೆನಪಿನಂಗಳದಿಂದ ಒಂದಿಷ್ಟು"ವಿಗೆ ಶುಭಾಶಯಗಳು.
ಬರೆಯುತ್ತಿರು. ಓದುತ್ತಿರುತ್ತೇವೆ.

ಸ್ಮಿತಾ said...

"ನೆನಪಿನಂಗಳದಿಂದ ಒಂದಿಷ್ಟು"ವಿಗೆ ಮೊದಲನೆಯ ಹುಟ್ಟು ಹಬ್ಬದ ಶುಭಾಶಯಗಳು.

ಶ್ಯಾಮಾ ಇನ್ನು ಈಗೆ ನಿನ್ನ ಬರಹ ಮುಂದುವರೆಯಲಿ ಅಂತ ಆಶಿಸುವ ನಿನ್ನ ಗೆಳತಿ ಸ್ಮಿತ

Jagali bhaagavata said...

ನಂಗೆ ನೀನು ೪ ಮಸಾಲೆ ದೋಸೆ ಕೊಡಿಸೋದಿದೆ. ಅದನ್ನ ಮಾತ್ರ ಮರೀಬೇಡ, ಪ್ಲೀಸ್ :-)

Jagali bhaagavata said...

ಅಂದಹಾಗೆ, ಶುಭಾಶಯಗಳು !!

Unknown said...

ಹಾರ್ದಿಕ ಶುಭಾಶಯಗಳು. ಹೀಗೇ ಇನ್ನೂ ಬರೆಯುತ್ತಿರಿ.

ಶ್ಯಾಮಾ said...

ವಿಕಾಸ್,ಶಾಂತಲಕ್ಕ,ಭಾಗವತರು,ಸ್ಮಿತಾ, ಮಧು

ಎಲ್ಲರಿಗೂ ಧನ್ಯವಾದಗಳು :)

ಇನ್ನು ಮಸಾಲೆ ದೋಸೆ ವಿಷಯ :) ನಂಗೆ ಮೊದಲೇ ಗೊತ್ತಿತ್ತು ನೀನು ಹಿಂಗೆ ಕೇಳ್ತೀಯಾ ಅಂತ ಅದಕ್ಕೆ ನಿನ್ನೆನೇ ಒಂದು ಹತ್ತು ಮಸಾಲೆ ದೋಸೆಗೆ ಆರ್ಡರ್ ಮಾಡಿ ಬಂದಿದ್ದೀನಿ. ;)

Sushrutha Dodderi said...

ಪುಟ್ಟ ಬುಟ್ಟಿಗೆ, ಬುಟ್ಟಿ ಹಿಡಿದ ಪುಟ್ಟಿಗೆ -ಇಬ್ರಿಗೂ ಶುಭಾಶಯ. :-) ಬರೀತಿರು.

Jagali bhaagavata said...

ನಿನ್ನೆನೇ ಆರ್ಡರ್ ಮಾಡಿದ್ಯಾ? ಅಯ್ಯೋ....ನಂಗೆ ಹಳಸಿದ ಮಸಾಲೆದೋಸೆನಾ? GRRRRRRRR :-((

ರಂಜನಾ ಹೆಗ್ಡೆ said...

ಹ್ಯಾಪಿ ಹ್ಯಾಪಿ ಬರ್ತ್ ಡೇ ಕಣೇ ಶ್ಯಾಮಾ. aa\ll the best ಹಿಂಗೆ ಬರಿತಾ ಇರು.

ಶ್ಯಾಮಾ said...

ಸುಶ್ರುತ

:-)ಧನ್ಯವಾದಗಳು

ಭಾಗವತ
ನೀನು ಹೇಳೋದಕ್ಕಿಂತ ಮುಂಚೆನೇ ನಾನು ಕೊಡ್ಸಿದ್ರೆ ನಿಂಗೆ ಸಖತ್ ಖುಷಿ ಆಗುತ್ತೆ ಅಂತ ಹಾಗೆ ಮಾಡಿದೆ ನೀನು ನೋಡಿದ್ರೆ ಬೈತಿದೀಯಾ ;-)

ಥ್ಯಾಂಕ್ಸ್ ಕಣೇ ರಂಜನಾ.

Jagali bhaagavata said...

ಓಹ್ಹೋ..ಮೊದ್ಲೆ ಹೇಳೋದಲ್ವಾ? ನಂಗೇನ್ ಗೊತ್ತಿತ್ತು ? :-)

ತೇಜಸ್ವಿನಿ ಹೆಗಡೆ said...

ಶ್ಯಾಮಾ,

ಹಾರ್ದಿಕ ಶುಭಾಶಯಗಳು.. ನಿನ್ನ ಬ್ಲಾಗ್ ನ ಹುಟ್ಟುಹಬ್ಬದ ದಿನಾನೇ ನನ್ನ ಪುಸ್ತಕಗಳ ಹುಟ್ಟಿದ ದಿನವಾಗಿದ್ದು ಮತ್ತೂ ಸಂತೋಷವಾಯಿತು. ಬರವಣಿಗೆ ನಿರಂತರ ಸಾಗಲಿ.

ಯಜ್ಞೇಶ್ (yajnesh) said...

ಶುಭಾಶಯಗಳು

-ಯಜ್ಞೇಶ್

ಶ್ಯಾಮಾ said...

ತೇಜಸ್ವಿನಿ ,ಯಜ್ಞೇಶ್

ಧನ್ಯವಾದಗಳು .

ನವಿಲುಗರಿ ಹುಡುಗ said...

heege baritiri...mattashtu huttuhabbagalu baruvantaagali[:)]

navilugari

ಬಾಲು said...

ಚೆನ್ನಾಗಿದೆ ಕಣ್ರೀ!!
ಕೊಳಲು ನುಡಿಸುವವನು ಲೇಖನ ಚೆನ್ನಾಗಿದೆ, ಇದೆ ರೀತಿಯ ಪ್ರಸಂಗ ನಮ್ಮ ಮನೆಯಲ್ಲೂ ನಡೆದಿತ್ತು, ಅಕ್ಕ ಸಂಗೀತ ಜ್ಞಾನ ಇರುವ ಹುಡುಗ ಬೇಕು ಅಂತ ಇದ್ದಳು.
ನಾನು ಇಂದೆ ನಿಮ್ಮ ಬ್ಲಾಗ್ ಗೆ ಭೇಟಿ ನೀಡುತ್ತಾ ಇರುವುದು, ಒಂದು ವರ್ಷವಾದರೂ ಗೊತ್ತೇ ಇರಲಿಲ್ಲ.
ನಿಮಗೆ ಕೊಳಲು ನುಡಿಸುವವನು ಸಿಗಲಿ, ಆ ಇಂಪಾದ ನಾದ ದಂತೆ ನಿಮ್ಮಿಂದ ಉತ್ತಮ ಲೇಖನ ಗಳು ಬರಲೆಂದು ಹಾರೈಸುವ...

ಬಾಲು.