Sunday, August 31, 2008

ಹನಿಗಳು

ನಿದ್ದೆ ಬಾರದ ರಾತ್ರಿ
ತೆರೆದ ಕಂಗಳು ಅಂದು
ಕಂಡಿದ್ದ ಕನಸುಗಳು
ಇಂದು ರಾತ್ರಿಯಾಗಸದಲ್ಲಿ
ಹೊಳೆಯುತ್ತಿವೆ ತಾರೆಗಳಾಗಿ.

******

ನಕ್ಷತ್ರಗಳನ್ನು ಎಣಿಸಿ ಎಣಿಸಿ
ಸೋತ ಕಣ್ಣುಗಳು
ನಿನ್ನ ಕಣ್ಣುಗಳನ್ನು ಸಂಧಿಸಿದಾಗ
ಹಕ್ಕಿ ಗರಿಯಷ್ಟು ಹಗುರವಾದ
ನಿನ್ನ ಪ್ರೀತಿಯ ನೋಟವೂ
ಭಾರವೆನಿಸಿ ಮುಚ್ಚಿಕೊಂಡಾಗ
ಉದುರಿದ ಹನಿಯು
ನಿನ್ನ ಬೊಗಸೆಯ ಸ್ಪರ್ಶದಲ್ಲಿ
ಮುತ್ತಾಯಿತು.

******

ಸಂಜೆ ಬಾನ ಸೆರಗಿನಂಚಿನಲಿ ಚುಕ್ಕಿಗಳ ಚಿತ್ತಾರ,
ಮುಂಗುರುಳ ನೇವರಿಸುವ ನೆಪದಿ ಬೀಸಿ ಬಂದ ತಿಳಿಗಾಳಿ,
ಹಾರಿ ಹೋದ ಬೆಳ್ಳಕ್ಕಿ ಹಿಂಡು,
ಬೇಲಿ ಸಾಲಿನ ಆ ನೀಲಿ ಹೂವು ನಕ್ಕ ಪರಿಯು
ನಿನ್ನ ನೆನಪ ತಾರದಿರಲು ಸಾಧ್ಯವೇ?

7 comments:

ಮಲ್ಲಿಕಾಜು೯ನ ತಿಪ್ಪಾರ said...

ನಕ್ಷತ್ರಗಳನ್ನು ಎಣಿಸಿ ಎಣಿಸಿ
ಸೋತ ಕಣ್ಣುಗಳು
ನಿನ್ನ ಕಣ್ಣುಗಳನ್ನು ಸಂಧಿಸಿದಾಗ
ಹಕ್ಕಿ ಗರಿಯಷ್ಟು ಹಗುರವಾದ
ನಿನ್ನ ಪ್ರೀತಿಯ ನೋಟವೂ
ಭಾರವೆನಿಸಿ ಮುಚ್ಚಿಕೊಂಡಾಗ
ಉದುರಿದ ಹನಿಯು
ನಿನ್ನ ಬೊಗಸೆಯ ಸ್ಪರ್ಶದಲ್ಲಿ
ಮುತ್ತಾಯಿತು.

These lines are too good...
And whole peom also...

Keep it up

www.nannahaadu.blogspot.com

ಬಾಲು said...

ನಕ್ಷತ್ರಗಳನ್ನು ಎಣಿಸಿ ಎಣಿಸಿ
ಸೋತ ಕಣ್ಣುಗಳು
ನಿನ್ನ ಕಣ್ಣುಗಳನ್ನು ಸಂಧಿಸಿದಾಗ
ಹಕ್ಕಿ ಗರಿಯಷ್ಟು ಹಗುರವಾದ
ನಿನ್ನ ಪ್ರೀತಿಯ ನೋಟವೂ
ಭಾರವೆನಿಸಿ ಮುಚ್ಚಿಕೊಂಡಾಗ
ಉದುರಿದ ಹನಿಯು
ನಿನ್ನ ಬೊಗಸೆಯ ಸ್ಪರ್ಶದಲ್ಲಿ
ಮುತ್ತಾಯಿತು....

preethiya notavu bhara aagutta? kanneru kooda muttagatta?...

shyaama nim kalpane chennagide.
nakkunali.blogspot.com

ಶ್ಯಾಮಾ said...

ಮಲ್ಲಿಕಾಜು೯ನರವರೇ,
ಧನ್ಯವಾದಗಳು.

Balu avare,

ಹ್ಮ್... ಒಮ್ಮೊಮ್ಮೆ ಪ್ರೀತಿಯ ನೋಟವೇ ಭಾರವೆನಿಸುವುದು.

ಕಣ್ಣೀರ ಹನಿ ಕೂಡ ಮುತ್ತಾಗಬಹುದು, ಅದು ಬೊಗಸೆ ಹಿಡಿದವರ ಪ್ರೀತಿಯ ಮೇಲೆ ಅವಲಂಬಿತ :-)
ಕಲ್ಪನೆಯಲ್ಲಿ ಇವೆಲ್ಲವೂ ಸಾಧ್ಯ.

ಧನ್ಯವಾದಗಳು ನನ್ನ ಕಲ್ಪನೆಯನ್ನು ಮೆಚ್ಚಿಕೊಂಡಿದ್ದಕ್ಕೆ.

sunaath said...

ತುಂಬ ಸುಂದರವಾದ ಕಲ್ಪನೆ.ಸುಂದರವಾದ ಕವನ.

ಶ್ಯಾಮಾ said...

ಧನ್ಯವಾದಗಳು ಸುನಾಥರವರೆ.

Unknown said...

Shyamu,,,
tumba chenagide idu nakshatra,,,,,,,

Hegde ramu said...

hi...ninu andu niddebaarada ratri kanda kanasugalu indu nijavaaguttiruvudu sullalla...iga kushi paduva saradi nammadu... :):)