Tuesday, May 15, 2007

ಶಿಳ್ಳೇ- ಖ್ಯಾತರು!!!

ಮೊನ್ನೆ ಒಂದಿನ ಮೊಬೈಲ್ನಲ್ಲಿ ಮುಳುಗಿ ಹೋಗಿ ಏನೋ ಜಾಲಾಡುತ್ತಿದ್ದಾಗ ಒಂದು ರಿಂಗ್ ಟೋನ್ ಕಾಣಿಸ್ತು. ಹೇಗಿದೆಯಪ್ಪ ಅಂತ ಕೇಳಿಸಿಕೊಂಡ್ರೆ ಶಿಳ್ಳೆ ಹೊಡೆಯೋ ರಿಂಗ್ ಟೋನ್. ಪಕ್ಕಾ ಪೋಲಿ ಹುಡುಗರು ಹುಡುಗಿರನ್ನು ನೋಡಿ ಹಾಕೋ ಶಿಳ್ಳೆ ಅಥವಾ ಬಸ್ ಕಂಡಕ್ಟರ್ ಹೊಡೆಯೋ ಶಿಳ್ಳೆ ತರಹವೇ ಇತ್ತು. ಅದನ್ನ ಕೇಳಿ ತುಂಬಾ ಮಜವಾಗಿದೆ ಅಂತ ಅನಿಸಿ ಅದೇ ರಿಂಗ್ ಟೋನ್ನ ಸೆಟ್ ಮಾಡಿದೆ. ಕೇಳಿಸಿಕೊಂಡ ನನ್ನ ಫ್ರೆಂಡ್ಸ್ ಎಲ್ಲ ರೋಡ್ ಅಲ್ಲಿ ಹೋಗಬೇಕಾದ್ರೆ ಯಾರ ಹತ್ರಾನಾದ್ರೂ ಹೊಡೆತ ಬೀಳುತ್ತೆ ಇದನ್ನ ಇಟ್ಟುಕೊಂಡ್ರೆ ಅಂತ ನಕ್ಕರು . ನಾನೂ ನಕ್ಕು ಸುಮ್ಮನಾದೆ.

ಮರುದಿನ ಎಲ್ಲೋ ಹೋಗುವ ಕೆಲಸವಿತ್ತು. ಬಸ್ ಹತ್ತಿ ಮುಂದಿನ ಸೀಟಿನಲ್ಲಿ ಕುಳಿತೆ. ಬಸ್ ಯಾವುದೋ ಸ್ಟಾಪ್ನಲ್ಲಿ ನಿಂತಾಗ ನಂಗೆ ಯಾರೋ ಫೋನ್ ಮಾಡಿದರು. ನನ್ನ ಫೋನ್ ಒಂದು ಶಿಳ್ಳೆ ಹೊಡೀತು. 2-3 ಸಲ ಇದೆ ರಿಪೀಟ್ ಆದಾಗ ಬಸ್ಸಿನ ಡ್ರೈವರ್ ಹಿಂತಿರುಗಿ 2-3 ಸಲ ನನ್ನೇ ನೋಡಿದ. ನಂಗೆ ಭಯ ಆಗ್‌ಬಿಡ್ತು.. ನಗುನೂ ಬಂತು ಎಲ್ಲಿ ಡ್ರೈವರ್, ಕಂಡಕ್ಟರ್ ಶಿಳ್ಳೇ ಹಾಕಿದ್ದು ಅಂತ ಬಸ್ ಹೋರಡಿಸಿಬಿಟ್ರೆ ಅಂತ... ಸುಮ್ನೇ ಫೋನ್ನ ಬ್ಯಾಗ್ ಒಳಗೆ ಇಟ್ಟು ಕುಳಿತುಕೊಂಡೆ. ನಾನು ಕುಳಿತದ್ದು ಕಿಡಕಿ ಪಕ್ಕ. ಕನಸು ಕಾಣಲು, ಹಳೆಯ ನೆನಪುಗಳೊಡನೆ ತೇಲಿ ಹೋಗಲು ಬಸ್ಸಿನ ಕಿಡಕಿ ಪಕ್ಕದ ಸೀಟಿಗಿಂತ ಒಳ್ಳೇ ಜಾಗ ಯಾವುದಿದೆ ಹೇಳಿ? ಹಾಗೇ ನಾನು ಯಾವ್ದೋ ಹಳೆ ನೆನಪಿನಲ್ಲಿ ಕಳೆದು ಹೋದೆ.

ನಂಗೆ ಮೊದಲಿನಿಂದಲೂ ಒಂದು ಆಸೆ ಇತ್ತು ಯಾರನ್ನಾದರೂ ನೋಡಿ ಜೋರಾಗಿ ಶಿಳ್ಳೆ ಹಾಕಬೇಕು ಅಂತ.. ಆದ್ರೆ ಧೈರ್ಯ ಇರ್ಲಿಲ್ವೋ ಸಂದರ್ಭ ಸಿಕ್ಕಿರ್ಲಿಲ್ವೋ ಯಾವ್ದೋ ಒಂದು.. ಒಟ್ಟಿನಲ್ಲಿ ಆ ಆಸೆ ಇನ್ನೂ ಆಸೆ ಆಗೇ ಇತ್ತು. ಬರೀ ಮನೆಯಲ್ಲಿ ಅಮ್ಮನ ಎದುರಿಗೆ ಶಿಳ್ಳೆ ಹೊಡೆದು ಬಯ್ಸಿಕೊಳ್ಳೋದಷ್ಟೇ ಆಗಿತ್ತು. ಆದರೂ ಒಳ್ಳೇ ಸಂದರ್ಭಕ್ಕಾಗಿ ಕಾಯುತ್ತಲೇ ಇದ್ದೆ.

ಅವು ನಾನು ಎಂಜಿನೀಯರಿಂಗ್ ಮೊದಲನೆ ಸೆಮಿಸ್ಟೆರ್ ನಲ್ಲಿ ಇದ್ದ ದಿನಗಳು. ನಾಲ್ಕನೇ ಮಹಡಿಯಲ್ಲಿದ್ದ ಗೆಳತಿಯ ರೂಮಿನಲ್ಲಿ 7-8 ಜನ ಹುಡುಗಿಯರು ಗಲಾಟೆ ಮಾಡ್ತಾ ಇದ್ವಿ. ಕಿಟಕಿ ಪಕ್ಕ ನಿಂತು ಹೊರಗೆ ನೋಡ್ತಾ ಇದ್ಡವಳು ಒಬ್ಬಳು ಬರ್ರೆ ಇಲ್ಲಿ ಅಂತ ಕರದ್ಲು. ಹೋಗಿ ಕಿಟಕಿಯಲ್ಲಿ ಇಣುಕಿ ನೋಡಿದ್ರೆ ಮುಂದುಗಡೆ ಮನೆ ಟೆರೇಸ್ ಮೇಲೆ 2 ಜನ ಹುಡುಗರು ನಿಂತಿದ್ರು. ಅದರಲ್ಲಿ ಒಬ್ಬ ನಮಗೆ ಗೊತ್ತಿರೋ ಹುಡುಗನ ತರಹವೇ ಕಾಣಿಸ್ತಾ ಇದ್ದ. ಎಲ್ಲರಿಗೂ ಸಂದೇಹ ಅವನೆ ಹೌದೋ ಅಲ್ಲವೋ ಅಂತ... ಸುಮಾರು ಹೊತ್ತಿನ ಮಾತುಕತೆಯ ನಂತರ ನಾವೆಲ್ಲ ಒಂದು ನಿರ್ಧಾರರಕ್ಕೆ ಬಂದ್ವಿ.. ಕಿಟಕಿ ಹತ್ರ ನಿಂತು ಜೋರಾಗಿ ಶಿಳ್ಳೆ ಹಾಕೋಣ ಅವನು ತಲೆ ಎತ್ತಿ ಮೇಲೆ ನೋಡಿದ್ರೆ ಮುಖ ಕಾಣಿಸುತ್ತೆ .. ಆವಾಗ ಯಾರು ಅನ್ನೋದು ಗೊತ್ತಾಗಿಬಿಡುತ್ತೆ ಅಂತ. ಅಬ್ಬಾ ಎಷ್ಟೋ ದಿನಗಳ ನಂತರ ನನ್ನ ಆಸೆ ನೆರವೇರುತ್ತಿದೆಯಲ್ಲ ಅಂತ ಸಮಾಧಾನ ಆಯ್ತು. ಎಲ್ಲ 7-8 ಹುಡುಗಿಯರೂ ಸೇರಿ ಕಿಟಕಿ ಹತ್ರ ನಿಂತು ಜೋರಾಗಿ ಶಿಳ್ಳೆ ಹಾಕಿ ಹೊ ಅಂತ ಕಿರುಚಾಡಿ ಅವನ ಮುಖ ನೋಡಿ ನಮಗೆ ಗೊತ್ತಿದ್ದೋನೆ ಅಂತ ಗೊತ್ತು ಮಾಡಿಕೊಂಡು ನಮ್ಮ ಮುಖ ಅವನಿಗೆ ಕಾಣಬಾರದು ಅಂತ ಪರದೆ ಮುಚ್ಚಿ ಅಲ್ಲಿಂದ ಓಡಿದ್ವಿ.. ಆಮೇಲೆ ಎಷ್ಟೋ ಹೊತ್ತು ನಡದಿದ್ದೆಲ್ಲ ನೆನಪಿಸಿಕೊಂಡು ನಕ್ಕಿದ್ದೆ ನಕ್ಕಿದ್ದು.

ಇಷ್ಟೆಲ್ಲಾ ಆಗಿ ಏನೂ ನಡದೇ ಇಲ್ಲ ಅನ್ನೋ ಹಾಗೆ ನಮ್ಮ ನಮ್ಮ ರೂಮಿಗೆ ಹೋದ್ವಿ . ಸಂಜೆ ಸೀನಿಯರ್ಸ್ ಇಂದ ಎಲ್ಲರಿಗೂ ಕರೆ ಬಂತು. ನಾವು ಎಷ್ಟು ಅಜ್ಞಾನಿಗಳಾಗಿದ್ವಿ ಅಂದ್ರೆ ಮೇಲುಗಡೆ ರೂಮಿನ ಕಿಟಕಿ ಹತ್ರ ಗಲಾಟೆ ಮಾಡಿದ್ರೆ ಅದೆಲ್ಲವೂ ಕೆಳಗಿನ ರೂಮಿನವರಿಗೆ ಸರಿಯಾಗಿ ಕೇಳಿಸುತ್ತದೆ ಅನ್ನೋದನ್ನ ಯೋಚನೆನೇ ಮಾ ಡಿ ರ್ಲಿಲ್ಲ. ಮಾಡಿರೋ ಕೆಲಸಕ್ಕೆ ಅವ್ರೆಲ್ಲ ನಮಗೆ ಚೆನ್ನಾಗಿ ಬಯ್ದು ಮಂಗಳಾರತಿ ಮಾಡಿದ್ರು. ಇನ್ನೂ ಮೊದಲನೆ ಸೆಮಿಸ್ಟೆರ್ನಲ್ಲೇ ಇಂಥ ಕೆಲ್ಸಾ ಮಾಡ್ತೀರ? ಹುಡುಗರಿಗೆ ಶಿಳ್ಳೆ ಹೊಡೀತಿರ? ಅಂತೆಲ್ಲ ಚೆನ್ನಾಗಿ ಬಯ್ಸಿಕೊಂಡ್ವಿ. ಎಕ್ಸಾಂ ಟೈಮ್ ಅಲ್ಲಿ ಓದಿಕೊಳ್ಳೋದು ಬಿಟ್ಟು ಇಂಥದ್ದನ್ನೆಲ್ಲ ಮಾಡ್ತಾ ಇದ್ರೆ ಫೇಲ್ ಆಗ್ತೀರಾ ಅಂತ ಬಯ್ದ್ರು.. ಮಧ್ಯಾನ ಮಾಡಿದ್ದ ಮಸ್ತಿ ಎಲ್ಲ ಮರೆತು ಹೋಗೋಷ್ಟು ಆಯ್ತು. ಅವತ್ತೇ ಮೊದಲು ಅವತ್ತೇ ಕೊನೇ ಮತ್ಯಾವಾಗೂ ಮತ್ಯಾರಿಗೂ ಶಿಳ್ಳೆ ಹಾಕಲಿಲ್ಲ ನಾನು :-)

ಇಷ್ಟೆಲ್ಲಾ ನೆನಪಾಗೊ ಹೊತ್ತಿಗೆ ನಾನು ಇಳಿಯೋ ಜಾಗ ಬಂದಿತ್ತು. ಬಸ್ಸಿಂದ ಇಳಿಯೋವಾಗ್ಲೂ ಡ್ರೈವರ್ ನನ್ನನ್ನೇ ನೋಡುತ್ತಿದ್ದಂತೆ ನಂಗೆ ಅನಿಸ್ತು (ನನ್ನ ಭ್ರಮೆ ಇರಬಹುದು). ಯಾಕೆ ಬೇಕು ಈ ಶಿಳ್ಳೆ ಸಹವಾಸ ಅಂತ ಬಸ್ಸಿಂದ ಇಳಿದವಳೇ ರಿಂಗ್ ಟೋನ್ನ ಬದಲಾಯಿಸಿ ಮುಂದೆ ಹೆಜ್ಜೆ ಇಟ್ಟೆ.

16 comments:

Chevar said...

ನಿಮ್ಮ ಸೊಗಸಾದ ಶಿಳ್ಳೆಗೆ ಬಸ್ ಚಾಲಕ ಮೋಡಿಗೊಳಗಾದ ಹಾಗೆ ರಸವತ್ತಾಗಿ ಬರೆದಿದ್ದೀರಿ. ಧನ್ಯವಾದಗಳು. ನಮ್ಮ ಬ್ಲಾಗ್ ಜಗತ್ತಿಗೂ ನಿಮಗಿದೋ ಆಮಂತ್ರಣ.

Jagali bhaagavata said...

ಹುಡುಗಿರನ್ಣಾ - ಹುಡುಗಿರನ್ನ
ಶಿಳ್ಲೇ - ಶಿಳ್ಳೆ

೨ನೇ ಪ್ಯಾರ
ಹೊದೀತು - ಹೋಡೀತು
ಆಗ್‌ಬಿಡ್ಥು.. ಆಗ್ಬಿಡ್ತು
ಹೋರಡಿಸಿಬಿತ್ರೆ - ಹೊರಡಿಸಿಬಿಟ್ರೆ
ಇತ್ತು - ಇಟ್ಟು
ಪಕ್ಕಾ - ಪಕ್ಕ

೩ನೇ ಪ್ಯಾರ
ಇದ್ದೇ - ಇದ್ದೆ

೪ನೇ ಪ್ಯಾರ
ಸೇಮಿಸ್ಟೆರ್ - ಸೆಮಿಸ್ಟರ್
ನಾಲ್ಕನೇ - ನಾಲ್ಕನೆ
ಪಕ್ಕಾ - ಪಕ್ಕ
ತೆ ರೇಸ್ - ಟೆರೇಸ್
ಕಿರುಚಾದಿ - ಕಿರುಚಾಡಿ
ಪರದೇ - ಪರದೆ
ಓದಿದ್ವಿ - ಓಡಿದ್ವಿ

೫ನೇ ಪ್ಯಾರ
ಹೋಡ್ವಿ - ಹೋದ್ವಿ
ಮಾದಿರ್ಲಿಲ್ಲ - ಮಾಡಿರ್ಲಿಲ್ಲ
ಸೇಮಿಸ್ಟೆರ್ - ಸೆಮಿಸ್ಟರ್

ಕೊನೆಯ ಪ್ಯಾರ
ಬಸ್ಸಿಂದಾ - ಬಸ್ಸಿಂದ

ತುಂಬ ಸುಧಾರಣೆಯಾಗಿದೆ ಈ ಬಾರಿ:-)) Caps Lock and Shift key ಉಪಯೋಗಿಸುವಾಗ ಸ್ವಲ್ಪ ಜಾಗ್ರತೆ ವಹಿಸಿದ್ರೆ ಎಲ್ಲ ಸರಿಹೋಗತ್ತೆ.

ನನ್ನ ಭಕ್ಷೀಸೆಲ್ಲಿ?:-))

ಶ್ಯಾಮಾ said...

@Mahesh Chevar

ಧನ್ಯವಾದಗಳು... ಹೀಗೇ ಭೇಟಿ ಕೊಡುತ್ತಾ ಇರಿ...

@Jagali Bhagavata

ಶಿಳ್ಲೇ - ಶಿಳ್ಳೆ ಎರಡೂ ಸರಿ ಅಂತ ನನ್ನ ಅಭಿಪ್ರಾಯ

ಉಳಿದವು ತಪ್ಪಾಗಿವೆ. ಮುಂದಿನ ಸಲ ಒಂದೂ ತಪ್ಪು ಇರೋದಿಲ್ಲ ನೋಡುತ್ತಾ ಇರಿ. ಅದಕ್ಕೆ ನಿಮ್ಮ ಭಕ್ಶೀಸು ಪಡೇಯೋದಕ್ಕೆ ಆದಶ್ಟು ಬೇಗ ಬರೋದು ಓಳ್ಳೇದು ;-) ;-)

Jagali bhaagavata said...

ಶಿಳ್ಲೇ - ಶಿಳ್ಳೆ
ಒತ್ತಕ್ಷರ ಗಮನಿಸಿದ್ರಾ?:-))

ಶ್ಯಾಮಾ said...

ಆದರೆ ನಾನು ಬರೆದಿದ್ದು ಶಿಳ್ಳೇ ಅಂತನೇ ಕಾಣುತ್ತಾ ಇದೆ. ನಿಮಗೇ ಹೇಗೆ ಶಿಳ್ಲೆ ಅನ್ಥ ಕಾಣ್ತಾ ಇದೆಯೋ ಗೊತ್ತಾಗ್ತಾ ಇಲ್ಲ :)

Jagali bhaagavata said...

ಅಥವಾ ಬಸ್ ಕಂಡಕ್ಟರ್ ಹೊಡೆಯೋ ಶಿಳ್ಲೇ ತರಹವೇ ಇತ್ತು.

:-))

ಶ್ರೀನಿಧಿ.ಡಿ.ಎಸ್ said...

ಶ್ಯಾಮಾ,
ಬರಹ ಸೊಗಸಾಗಿದೆ, ನಾನು ಶಿಳ್ಳೇ ಹೊಡೆಯೋದನ್ನ ಕಲಿಯೋಕೆ ಪಟ್ಟ ಪಾಡು ನೆನ್ಪಾಯಿತು! ಈಗ ನನ್ನ ಬ್ಲಾಗಲ್ಲಿ ಅದರ ಕತೆ ಬರೀಬೇಕಾಯ್ತು!

Anonymous said...

ಒಳ್ಳೆ ಸಕ್ಕತ್ತಾಗಿ ಇತ್ತು ನಿಮ್ಮ ಶಿಳ್ಳೆ ಕಥೆ. ನಿಂಗ 1st ಸೆಮಿಸ್ಟರ್ ನಲ್ಲೆ ಅಷ್ಟೋಂದು ಜೋರು ಇದ್ದಿದ್ರ ಪರ್ವಾಗಿಲ್ಲೆ. ಇನ್ನು ಫೈನಲ್ ಇಯರ್ ಕಥೆ ಎಂತು!?
ನನ್ನ ಮನಸ್ಸಲ್ಲು ಹಿಂಗೊಂದು ಆಸೆ ಇದ್ದು ಅದನ್ನ ನೆರವೇರಿಸಿಕೊಳ್ಳಕು.

ಶ್ಯಾಮಾ said...

@ shreenidhi

nimma blog alli shille kathe odakke kaaytha irhini :)

@ ranju

houdu 1 sem alli ashtu joriddavvu final sem alli innoo joragidya. baiyakkoo yaroo irle avaga :)

aase iddu anda mele try madu :)

Sushrutha Dodderi said...

ಈ ಥರ ಶಿಳ್ಳೆ ಪ್ರಾಕ್ಟೀಸ್ ಮಾಡೋ ಹುಡುಗೀರ ಬಗ್ಗೆ ಓದೀ ಓದೀ ನಾನೆಷ್ಟು 'ಪ್ರಭಾವಿತ'ನಾಗಿದ್ದೇನಂದರೆ 'ನಾನ್ಯಾಕೆ ಒಂದು ಶಿಳ್ಳೆ ಲರ್ನಿಂಗ್ ಸ್ಕೂಲ್ ತೆರೆಯಬಾರದು?' ಅಂತ ಬಹಳ ಸಲ ಅನ್ನಿಸಿದ್ದಿದೆ..! :)

ಚೆನ್ನಾಗಿ ಬರ್ದಿದೀರ..

ಶ್ಯಾಮಾ said...

ಸುಶ್ರುತ

ನೀವು ಶಿಳ್ಳೇಲರ್ನಿಂಗ ಸ್ಕೂಲ ತೆರೆದರೆ ನಾನು ಒಬ್ಬಳು ಸ್ಟುಡೆಂಟ್ :)

Thanks :)

Unknown said...

k

Unknown said...

ha..ha.. thumba layakkayidu baraddu..

satya helekkare yenage ninna shille kate nodi ascharya agta iddu.. nambule agtille.. :)

ಶ್ಯಾಮಾ said...

Thanks Shrirama.

nambakke aagtha ille aadre namble beku enthakke andre ade nija.. Shille hodediddu yarige antha gottadre innu nagu battu ninge.. beda antha avna hesru ille bardidnille :)

ಶ್ಯಾಮಾ said...
This comment has been removed by the author.
Unknown said...

heege jeevanadalli shille hodeyutta iri