Sunday, May 27, 2007

ಕಾನನ ಕುಸುಮ

ಮನೆ ಮುಂದಿನಾ ತೋಟದ
ಚೆಂದದ ಚೆಂಗುಲಾಬಿಯೇ
ನೀ ಬಲ್ಲೆಯಾ ಕಾನನ ಕುಸುಮದಾ ನೋವ?
ಅರಳುವಾ ಮುನ್ನ ಮೊಗ್ಗ ಮೈದಡವಿ
ಅರಳಿ ನಿಂತಾಗ ಮುತ್ತಿಕ್ಕಿ ಮುದ್ದಿಸಿ
ಮುಡಿಗೇರಿಸುವವರಿಲ್ಲ
ರಂಗು ರಂಗಿನಾ ಚೆಲುವ
ಕಣ್ತುಂಬಿಕೊಂಡು
ಹಾಡಿ ಹೊಗಳುವವರಿಲ್ಲ
ಬಾಡಿ ಹೋಗುವ ಮುನ್ನ ಕೇಳುವವರಾರಿಹರೆಂದು
ರೋಧಿಸುವ ಕಾನನ ಕುಸುಮದಾ
ನೋವ ಬಲ್ಲೆಯಾ ನೀನು

10 comments:

ಶ್ರೀನಿಧಿ.ಡಿ.ಎಸ್ said...
This comment has been removed by the author.
ಶ್ರೀನಿಧಿ.ಡಿ.ಎಸ್ said...

ಶ್ಯಾಮಾ,

ಪುಟ್ಟ ಕವನ,ಸೊಗಸಾಗಿದೆ.
ಆದರೆ ಮನೆ ಮಂದಿನ ಗುಲಾಬಿ ಏನ ಮಾಡೀತು ಹುಡುಗಿ?,ಅದು ಬಂಧನದೊಳಗಿದೆ. ಕಾಡ ಕುಸುಮಕೋ, ಸ್ವತಂತ್ರ ಪರಿಸರ, ಬಂಧವಿಲ್ಲದ ಬದುಕು, ಅದೂ ಸೊಗಸೇ ಅಲ್ಲವೆ

ಸುಪ್ತದೀಪ್ತಿ suptadeepti said...

ಕಾನನ ಕುಸುಮಕೆ ನೋವು ಯಾಕೆ?
ಅಂದದ ಪ್ರಶಾಂತ ಪರಿಸರ, ಶುದ್ಧ ಗಾಳಿ, ನೀರು, ಬೆಳಕು.
ಬಣ್ಣಕ್ಕೆ ಮರುಳಾಗಿ ಬರುವ ಮತ್ತ ಭ್ರಮರ-- ಸಾಲವೇ ಇವು ಹೂವಿನ ಸಾರ್ಥಕ್ಯಕ್ಕೆ?

ತೋಟದ ಬೇಲಿಯೊಳಗಿನ ಗುಲಾಬಿಗೆ ನನ್ನ ಮರುಕವಿದೆ, ಪೂರ್ಣ ಬಾಳು ಬಾಳಲಾಗದ ಅದರ ಕರ್ಮಕ್ಕೆ ನನ್ನ ಅನುಕಂಪವಿದೆ.

Anonymous said...

really nicely written

ಹೌದು ಕಾನನದ ಕುಸುಮವ ಕೇಳುವವರಿಲ್ಲ ನಿಜ. ಅದರೆ ಅರಳುವ ಮುನ್ನವೆ ಕೊಯ್ದು ಮುಡಿಗೆ ಏರುವ ನಾಡಿನ ಕುಸುಮಕ್ಕೆ ನೋವಿಲ್ಲ ಅಂಥಾನಾ?
ಚಂದ ಹೋಗಳುವ, ಅಂದ ನೋಡುವ ಬಾಯಿಯ, ಕಣ್ಣಿನ ಹಿಂದೆ ಯಾವ ಭಾವನೆ ಇರುವುದೋ ಬಲ್ಲವರಾರು.

Jagali bhaagavata said...

ಕವನ ಚೆನ್ನಾಗಿದೆ. ಬೇಲಿಯೊಳಗಿನ ಗುಲಾಬಿಯ ಕುರಿತು ಶ್ರೀನಿಧಿ, ಸುಪ್ತದೀಪ್ತಿ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ.

ಅದೇನೋ ಹುಡುಗ್ರಿಗೆ ಉಪಯೋಗ ಆಗೋ 'ಮಾರ್ಗದರ್ಶಿ ಲೇಖನ' ಬರೀತಿನಿ ಅಂದಿದ್ಯಲ್ಲ,ಎಲ್ಲಿ ಅದು?:-)

Sandeepa said...

waiting for your reply to others' comment :)

ಶ್ಯಾಮಾ said...

totally lost!!!!!!.. enu reply madavu antha gottagtha ille.. avrella heLiddu sari antha ansta iddu.. aadre ee kavana yavagalo bardiddu. adanna barayakkadre yako nange hange ansittu.. avaga ade sari ansittu.

ಶ್ಯಾಮಾ said...

ಆದರೂ ಕಾನನ ಕುಸುಮಕ್ಕೆ ನೋವೇ ಇಲ್ಲ ಅಂದರೆ ಮನಸು ಒಪ್ಪುತ್ತಲೇ ಇಲ್ಲ.... ಅದಕ್ಕೂ ಅದರದೇ ಆದ ನೋವಿದೆ ಅಂತ ನನ್ನ ಭಾವನೆ.. ಯಾರಿಗೂ ಕಾಣದ ಆ ನೋವು ನಂಗೆ ಮಾತ್ರ ಯಾಕೆ ಕಾಣುತ್ತಿದೆಯೋ ಬೇರೆ ಯಾರಿಗೂ ಯಾಕೆ ಕಾಣುತ್ತಿಲ್ಲ.. ಬೇಜಾರಾಗುತ್ತಿದೆ ನಂಗೆ

Jagali bhaagavata said...

ಬೇಜಾರು ಎಂತಕ್ಕೆ? ಕಾನನದ ಕುಸುಮಕ್ಕೂ ಬೇಜಾರು ಇರತ್ತೆ. ಯಾವತ್ತೂ ನಮ್ಮಲ್ಲಿ ಇಲ್ಲದುದರ ಕಡೆಗೆ ತುಡಿತ ಇರತ್ತೆ.

ಶ್ಯಾಮಾ said...

ಬೇಜಾರು ಯಾಕೆ ಅಂದರೆ ಕಾನನ ಕುಸುಮ ದ ನೋವಿನ ಬಗ್ಗೆ,ಅಂದದ ಪ್ರಶಾಂತ ಪರಿಸರ, ಶುದ್ಧ ಗಾಳಿ, ನೀರು, ಬೆಳಕು.
ಇವೆಲ್ಲ ಇರುವಾಗಲೂ ಏನೋ ಕಾಡುವ ಆ ನೋವು ಕಾನನ ಕುಸುಮಕ್ಕೆ ಇದೆ ಅಂತಲೆ ನನ್ನ ಭಾವನೆ....