Thursday, October 4, 2007

ನಾಳೆಗಳು ನಮಗಿಹವು

ಕನಸು ಕರಗಿತೆಂದು
ಕಣ್ಣೀರಿಡದಿರು ನೀ
ಮುಂದೆ ಎಂದಿಗಾದರೊಮ್ಮೆ
ನನಸಾಗುವವು ನಿನ್ನ ಕಂಗಳ ಕನಸು

ಬದುಕಿದು ಸಿಹಿ ಕಹಿಯ ಮಿಶ್ರಣ
ಇಂದು ಕಹಿಯನ್ನುಂಡರೂ
ನಾಳೆ ಮತ್ತಿನ್ನೆಂದೋ
ಸವಿಯುವೆವು ಸಿಹಿಬೆಲ್ಲದ ಹೂರಣ

ಸಿಕ್ಕಲಾರದ ಆಗಸಕ್ಕೆ
ಏಣಿ ಹಾಕಿದರೂ ಏನು ಬಂದೀತು?
ಮನೆಯಂಗಳದ ಚಪ್ಪರಕ್ಕೆ
ಕೈ ಚಾಚಿದರೆ ಸಾಕು ಏನೆಲ್ಲಾ ಸಿಕ್ಕೀತು.

ಇಂದು ಬಾಳಿನಲ್ಲಿ ಏನೂ
ಇಲ್ಲವೆಂದು ಚಿಂತಿಸಬೇಡ ಬಿಡು
"
ನಾಳೆಗಳು ನಮಗಿಹವು"
ನೀ ಕಾದು ನೋಡು.

5 comments:

ರಂಜನಾ ಹೆಗ್ಡೆ said...

ಎನೇ ಕೂಸೆ ಸಿಕ್ಕಾಪಟ್ಟೆ ಫಿಲಾಸಫಿ ಎಲ್ಲಾ ಬರೆದು ಬಿಟ್ಟಿದ್ದೆ.

ನಂಗೆ ಯಾಕೋ ಕತ್ತಲು ಕಳೆದ ಮೇಲೆ ಬೆಳಕು ಬತ್ತು ಅಂತಾ ಅನ್ನಿಸ್ತಿಲ್ಲೆ. ಬರೀ ಕಾರಿರುಳೇ ಕಾಣಿಸ್ತಾ ಇದ್ದು.
ಹ್ಮ್ ಯಾವಾಗ ಈ ಕತ್ತಲು ಮುಗಿಯುತ್ತೋ ? ಮಗಿಯದೇ ಇಲ್ಯೋ? !!!!!!!!!!!!!! ಕಾದು ನೋಡವು.

Jagali bhaagavata said...

ಸಿಕ್ಕಲಾರದ ಆಗಸಕ್ಕೆ
ಏಣಿ ಹಾಕಿದರೂ ಏನು ಬಂದೀತು?
ಮನೆಯಂಗಳದ ಚಪ್ಪರಕ್ಕೆ
ಕೈ ಚಾಚಿದರೆ ಸಾಕು ಏನೆಲ್ಲಾ ಸಿಕ್ಕೀತು.

ತುಂಬ ಇಷ್ಟವಾಯ್ತು.

ಶ್ಯಾಮಾ said...

@ Ranju
ಹ್ಮ್ .........
ಹಾಗೆ ಅನ್ನಿಸ್ತು ಒಮ್ಮೊಮ್ಮೆ... ಈ ಕತ್ತಲು ಮುಗಿಯುತ್ತೋ ? ಮಗಿಯದೇ ಇಲ್ಯೋ? ಅಂತ..
ಆದ್ರೆ ಇರುಳು ಬಂದಿದ್ದು ಸತ್ಯವೇ ಆದ್ರೆ ಆ ಇರುಳು ಕಳೆದು ಬೆಳಿಗ್ಗೆ ಆಗಲೇ ಬೇಕು ಅಲ್ದಾ? ಅದ್ಕೆ ಕಾದು ನೋಡಲೇ ಬೇಕು

@ Jagali Bhagavata

Thanku :)

GHCUTE said...

Hi...nimma ee kavana tumbaa ashaavada da bhaavanegallannu vyaktapadisuttide....chennagide.

GHCUTE

ಶ್ಯಾಮಾ said...

dhanyavadagaLu