Friday, May 4, 2007

ಮರಳಿ ಬಾರೆಯಾ??

ಅಂದೊಂದು ಮುಸ್ಸಂಜೆ
ಏಕಾಂತದಲಿ ಕುಳಿತಿರಲು
ನೆನಪಿನಾ ತಂಗಾಳಿ ಬೀಸಿ
ತಂಪಾಯಿತೆನ್ನ ಮನ

ಬಾಲ್ಯದ ದಿನಗಳವು
ಮನದಲ್ಲಿನ್ನೂ ಹಚ್ಚ ಹಸಿರು
ಎಷ್ಟೊಂದು ಸುಮಧುರ ದಿನಗಳವು
ನೆನಪಾಗಿ ಜಿನುಗಿತು ಒಂದು ಕಣ್ಣೀರು

ನೇೆನಿರಲಿಲ್ಲ ಬಾಲ್ಯದಲ್ಲಿ
ಪ್ರಪಂಚವೇ ನನ್ನದೆಂಬ ಊಹೆ
ಕಣ್ತುಂಬಾ ಬಣ್ಣ ಬಣ್ಣದ ಕನಸುಗಳು
ಮುಖದಲ್ಲಿ ಮಾತ್ರ ಅದೇ ಮುಗ್ಧ ನಗು

ಆಟ ಓಟವೇ ನನ್ನ ಲೋಕ
ಅಮ್ಮನ ಕೈಗೂಸು ನಾನು
ಆದರೂ ಗೊಂಬೆಗಳ ನಡುವಲ್ಲೆಲ್ಲ
ನಾನೇ ಅಮ್ಮ!!!

ದಿನವೂ ಒಂದೊಂದು
ಕಥೆಯನ್ನು ಕೇಳುತ್ತಾ
ಅಮ್ಮನ ಮಡಿಲಲ್ಲಿ
ನಿದ್ದೆ ಹೋಗುತ್ತಿದ್ದ ಸವಿ ನೆನಪು

ಜೀವನದ ಹಾದಿಯಲ್ಲಿ
ಸಾಗಿ ಬರುವಾಗ ನನ್ನೀ
ಸುಮಧುರ ಬಾಲ್ಯವನ್ನು
ನಾನೆಲ್ಲಿ ಕಳೆದುಕೊಂಡೆ ?

ಮರಳಿ ಬಾರೆಯಾ ಬಾಲ್ಯವೇ??
ಮುಗ್ಧತೆಯ ಗೂಡೊಳಗೆ
ಬೆಚ್ಚಾಗಿರುವಾ ಸುಖವ
ಮತ್ತೆ ತಾರೆಯಾ ನನಗೆ??

11 comments:

ರಾಜೇಶ್ ನಾಯ್ಕ said...

ಬಾಲ್ಯದ ನೆನಪುಗಳನ್ನು ಮರುಕಳಿಸಿದಿರಿ...ಧನ್ಯವಾದಗಳು

AruV said...

wow amazing poem.
Bravo keep it up

I believe that few words are spelt wrong, correct me if I'm wrong!

- Aru

Be Smiling..Ever..:) said...

...good one

ಶ್ಯಾಮಾ said...

ಧನ್ಯವಾದಗಳು ರಾಜೇಶ್,

Thanks Aru, I know some words are spelt wrong but It's a problem i am facing from the beginning, I try to the maximum not to spell anything wrong but sometimes it is difficult to get the excact word so i leave it like that only...

Thnaks one

Sushrutha Dodderi said...

"ಆದರೂ ಗೊಂಬೆ ಗಳ ನಡುವಲ್ಲೆಲ್ಲ
ನಾನೇ ಅಮ್ಮ!!! "
"ಮುಗ್ಧತೆಯ ಗೂಡೊಳಗೆ
ಬೆಚ್ಚಾಗಿರುವಾ ಸುಖವ
ಮತ್ತೆ ತಾರೆಯಾ"
-saalugaLu thumbaa iShTavaadavu. Nice a poem.

ಶ್ಯಾಮಾ said...

ಧನ್ಯವಾದಗಳು ಸುಶ್ರುತ,

ಮುಗ್ಧತೆಯ ಗೂಡೊಳಗೆ
ಬೆಚ್ಚಾಗಿರುವಾ ಸುಖವ
ಮತ್ತೆ ತಾರೆಯ

ನಂಗೂ ಕೂಡ ಬಹಳ ಇಷ್ಟವಾದ ಸಾಲುಗಳಿವು
infact ಈ ಕವನ ಬರೆಯುವಾಗ ಮೊದಲು ಮನಸ್ಸಿನಲ್ಲಿ ಮೂಡಿದ್ದೆ ಈ ಸಾಲುಗಳು
ಹಾಗೆ ಮೂಡಿದ 2 ಸಾಲುಗಳಿಗಾಗಿಯೇ ಇಡೀ ಕವನ ಬರೆದಿದ್ದು.. ನನ್ನ ಬಹಳಷ್ಟು ಕವನಗಳು
ಹುಟ್ಟುವುದೇ ಹಾಗೆ

ಬಾನಾಡಿ said...

ನಮ್ಮ ಜೀವನದ ಘಟ್ಟಗಳನ್ನು ನಾವು ನೆನೆಯುವುದರಿಂದ ನಮಗೆ ಬಹಳ ಮುದ ದೊರೆಯುತ್ತದೆ. ನೀವಂದಂತೆ ಆ ಸುಮಧುರ ಬಾಲ್ಯದ ಜತೆಗೆ ನಿಮ್ಮ ಮತ್ತಿನ ಬದುಕಿನ ಕ್ಷಣಗಳು ಮತ್ತೂ ಸುಮಧುರ ಹಾಗೂ ಅಮುಲ್ಯ. ನೆನಪಿನಂಗಳದಿಂದ ಇನ್ನೂ ಮುಂದೆ ನೋಡಿದರೆ ಅಲ್ಲೇ ಮಾಮರದಲ್ಲಿ ಕೋಗಿಲೆ ಕೂಗುವುದು ಕೇಳಿಸುತ್ತದೆಯಲ್ಲ. ಅಲ್ಲೇ ಹತ್ತಿರ ಮಲ್ಲಿಗೆ ಅರಳಿದೆ ನೋಡಿ. ಎಷ್ಟು ಸುಮಧುರ. ಆ ಕೆರೆಯ ನೀರು ಎಷ್ಟು ಶುಭ್ರ. ಅಲ್ಲಿ ಈಜಾಡಿ. ಕರೆಯೆರಿ ಬಾಲ್ಯದ ಗೆಳೆಯರನ್ನು ಮತ್ತೆ ಈಗಿನ ಸ್ನೇಹಿತರನ್ನು. ಬದುಕು ಹಸನಾಗಿರಲಿ.

ಶ್ಯಾಮಾ said...

@ banadi
ನೆನಪಿನಂಗಳಕ್ಕೆ ಸ್ವಾಗತ..
ನೀವು ಹೇಳಿರುವುದು ಸತ್ಯ.. ನೆನಪಿನಂಗಳಕ್ಕಿಂತ ಮುಂದೆ ನೋಡಿದರೆ ಬಾಲ್ಯದ ಆ ನೆನಪುಗಳ ಜೊತೆ ಇನ್ನೂ ಮಧುರ ಕ್ಷಣಗಳು ಕಾಣುವುದು.. ಆದರೂ "ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ ತುದಿವುದೇ ಜೀವನ... " ಎಂಬಂತೆ ಮತ್ತೆ ಸಿಕ್ಕದ ಆ ಕ್ಷಣಗಳಿಗಾಗಿ ಹಂಬಲಿಸುವುದು ಸಾಮಾನ್ಯ ಅಲ್ಲವೇ?

ಶ್ಯಾಮಾ said...

@ babadi

and thanks for your nice comments

Unknown said...

ಆಟ ಓಟವೇ ನನ್ನ ಲೋಕ
ಅಮ್ಮನ ಕೈಗೂಸು ನಾನು
ಆದರೂ ಗೊಂಬೆ ಗಳ ನಡುವಲ್ಲೆಲ್ಲ
ನಾನೇ ಅಮ್ಮ!!!
adbhuta..
tumba dinadinda mis madkyandiddu ivattu siktyu

ಶ್ಯಾಮಾ said...

ಥ್ಯಾಂಕ್ಸ್ ಸಂದೀಪ್