Tuesday, May 8, 2007

ಕನಸು ಕಟ್ಟುವವರು

ಬೇರೆಯವರ ಕನಸ
ಕಟ್ಟುವರು ಇವರು
ದಿನವೂ ನಾ ನಡೆದು ಬರುವ
ದಾರಿಯ ಪಕ್ಕದಲ್ಲಿ ಮನೆ
ಕಟ್ಟುವವರು ಇವರು,
ತಮ್ಮದಲ್ಲದ ಕನಸುಗಳಿಗೆ ಕೈ ಜೋಡಿಸುವರು
ಬಣ್ಣ ತುಂಬುವರು ಇವರು

ಇವರ ಕಣ್ಣಲ್ಲಿ ಅವರದ್ದೇ ಆದ
ಕನಸುಗಳಿಲ್ಲ ಬರೀ ಬೇರೆಯವರ
ಕನಸಿನ ಬಿಂಬವನ್ನಷ್ಟೇ ನಾ
ಕಂಡಿದ್ದೇನೆ ಅವರ ಕಣ್ಣುಗಳಲ್ಲಿ...
ನೋವುಗಳು ತುಂಬಿರಬಹುದು
ಕಣ್ಣುಗಳಲ್ಲಿ.. ದಣಿವಿನ
ಛಾಯೆಯಲ್ಲಿ ಅವು ಕಾಣುವುದೇ ಇಲ್ಲ..

ಅಲ್ಲೇ ಆಡಿಕೊಂಡಿರುವ ಅವರ
ಮಕ್ಕಳು...
ಅವರಿಗೆ ನಿನ್ನೆಯ ನೆನಪೇ ಇಲ್ಲ
ನಾಳೆಯೆಂದರೆ ಗೊತ್ತೇ ಇಲ್ಲ
ಬರೀ ಇವತ್ತೇ ಜಗತ್ತು ಅವರ ಕಣ್ಣಲ್ಲಿ .

ಸಂಜೆ ಮತ್ತ ದೇ ದಾರಿಯಲ್ಲಿ
ಹೋಗುವಾಗ ಅವರದಲ್ಲದ
ಮನೆಯ ಬೆಳಗುತ್ತಿರುವ
ಮಿಣಿ ಮಿಣಿ ಉರಿತ್ತಿರುವ ಚಿಣಿ
ದೀಪ.. ಅಲ್ಲೇ ಹೊಗೆಯೇಳಿಸುವ
ಕಟ್ಟಿಗೆ ಒಲೆಯಲ್ಲಿ ಬೇಯುತ್ತಿರುವ
ಗಂಜಿ... ಒಲೆಸುತ್ತಲೂ
ಕುಳಿತಿರುವ ಮಕ್ಕಳು ಮತ್ತೆ
ಅವರ ಅವ್ವ...

ದಿನಾ ಇಷ್ಟೇ ನನಗೆ ಕಾಣಿಸುವುದು
ಒಂದೊಂದು ಸಲ ಹಿಂತಿರುಗಿ
ನೋಡುತ್ತೇನೆ.. ಒಮ್ಮೆಲೇ ಎಲ್ಲವೂ
ಮಂಜು ಮಂಜಾಗಿ ಕಾಣುತ್ತದೆ
ಮತ್ತೆ ತಲೆ ತಗ್ಗಿಸಿ ಮನೆಯ
ದಾರಿ ಹಿಡಿಯುತ್ತೇನೆ.. ನನ್ನ
ಕಣ್ಣಂಚಿನಲ್ಲಿದ್ದ ಹನಿ
ಯಾರಿಗೂ ಕಾಣದೇ ಕಣ್ಣಲ್ಲೇ ಕರಗಿಹೋಗಿರುತ್ತದೆ...

10 comments:

Sushrutha Dodderi said...

hm.. nice..

Sushrutha Dodderi said...

ಕನಸನ್ನಷ್ಟೇ ಅಲ್ಲ; ಜಗವ ಕಟ್ಟುವವರು ಅವರು.. ಈ ಜಗದ ಚಿಂದಿ ಹೊಲಿಯುವವರು.. ಈ ಜಗದ ರಸ್ತೆ ಗುಡಿಸಿ ಚೊಕ್ಕ ಮಾಡುವವರು.. ಈ ಜಗದ ತ್ಯಾಜ್ಯ ತೊಳೆದು ಫಳಫಳ ಹೊಳೆಯುವಂತೆ ಮಾಡುವವರು.. ನಮ್ಮ ಕನಸ ದಾರಿಯ ಸುಗಮಗೊಳಿಸುವವರು, ನಮ್ಮ ನಿತ್ಯದ ಬೀದಿಯ ತೆರವು ಮಾಡಿಕೊಡುವವರು, ನಮ್ಮ ಊಟದ ತಟ್ಟೆಯ ತೊಳೆದು ಕೊಡುವವರು, ನಮ್ಮ ಬಟ್ಟೆಗೆ ಇಸ್ತ್ರಿ ಹಾಕಿ ಗರಿಗರಿ ಮಾಡಿಕೊಡುವವರು..

ಶ್ಯಾಮಾ said...

ಸರಿಯಾಗಿ ಹೇಳಿದ್ದೀರಾ.... ಒಂದೊಂದು ಸಲ ಯೋಚಿಸುತ್ತೇನೆ ಅಂಥವರಿಗೆ ಕನಸುಗಲೇ ಇಲ್ಲವೇ ಅಥವಾ ಅವರು ತಮ್ಮ ಕನಸಿನ ಗೋರಿಯಾ ಮೇಲೆ ನಮ್ಮ ಕನಸುಗಳನ್ನು ಕಟ್ಟುತ್ತಾರಾ ? ಅಂತ ಒಂದೆರಡು ಕನಸುಗಳು ಕೈಜಾರಿದ ನಾವೇ ಹೀಗಿರಬೇಕಾದರೆ ಅವರ ಮನಸ್ಥಿತಿ ಇನ್ನು ಹೇಗಿರಬೇಡ?? ಊಹಿಸಿದರೆ ಖೇದವಾಗುತ್ತದೆ

Thanks fot the comments

Unknown said...

ಇವರ ಕಣ್ಣಲ್ಲಿ ಅವರದ್ದೇ ಆದ
ಕನಸುಗಳಿಲ್ಲ ಬರೀ ಬೇರೆಯವರ
ಕನಸಿನ ಬಿಂಬವನ್ನಷ್ಟೇ ನಾ
ಕಂಡಿದ್ದೇನೆ ಅವರ ಕಣ್ಣುಗಳಲ್ಲಿ...
ನೋವುಗಳು ತುಂಬಿರಬಹುದು
ಕಣ್ಣುಗಳಲ್ಲಿ.. ಆ ದಣಿವಿನ
ಛಾಯೆಯಲ್ಲಿ ಅವು ಕಾಣುವುದೇ ಇಲ್ಲ..
cholo iddu.. swalpa kasta patti artha madkyalale..:) nale innenta artha kodtu nodavu:):)

ಸುಪ್ತದೀಪ್ತಿ suptadeepti said...

ಶ್ಯಾಮಾ, ಕನಸುಗಾರರೇ ಅವರೂ. ಅವರ ಕನಸುಗಳು ಬಹುಶಃ ಇಂದಿಗೆ ಮಾತ್ರ ಸೀಮಿತ, ಅಥವಾ ಈ ವಾರದ ಪಗಾರ ಬಂದರೆ ಏನೇನು ಕೊಳ್ಳಬೇಕು ಎಂಬಷ್ಟಕ್ಕೆ ಮುಕ್ತಾಯ. ವಾರಮೀರಿ ಯೋಚಿಸುವ ಆರ್ಥಿಕ ಹಕ್ಕು ಅವರಿಗಿಲ್ಲ ಅನಿಸುತ್ತೆ. ಅದಕ್ಕೂ ಮೀರಿದ ಕನಸುಗಳು ತುಂಬಿದ ಹೊಟ್ಟೆಯವರಿಗೇ ಮೀಸಲು.

ಶ್ಯಾಮಾ said...

@ ಸಂದೀಪ್
ಓದು ಇನ್ನೊಂದು ಸಲ ಎಂಥ ಅರ್ಥಾ ಆಗ್ತು ನೋಡು... anyways ಥ್ಯಾಂಕ್ಸ್..

@supthadeepti
ಇರಬಹುದು... ಕನಸುಗಳಿದ್ದರೂ ಅದರ ಬಗ್ಗೆ ಯೋಚಿಸಲೂ ಅವರು ಹಿಂಜರಿಯುತ್ತಾರೇನೋ? ವಾರ ಮೀರಿ ಯೋಚಿಸುವ ಆರ್ಥಿಕ ಹಕ್ಕು ಅವರಿಗಿಲ್ಲ ಎಂಬುದನ್ನು ಓದಿದಾಗ ಯಾವುದೋ ವಿಷಯಕ್ಕೆ ನನ್ನ ಗೆಳತಿಯೊಬ್ಬಳು ನಮಗೆ ಅಂತ ಕನಸು ಕನಸು ಕಾಣಲು ಹಕ್ಕಿಲ್ಲ ಕಣೇ ಅಂದಿದ್ದು ನೆನಪಾಯ್ತು.. ಎಷ್ಟೋ ವಿಷ್ಯಗಳಲ್ಲಿ ಅದು ಸತ್ಯ ಕೂಡ.

Jagali bhaagavata said...

ಶ್ಯಾಮಾ,
ನಿಮ್ಮೆಲ್ಲ ಬರಹಗಳಲ್ಲಿ ವಿಷಾದ ಭಾವ ಸ್ಥಾಯಿಯಾಗಿದೆ. ಏಕೆ ಹಾಗೆ?

ಕವನಗಳಲ್ಲಿ ವ್ಯಕ್ತವಾಗಿರುವ ನಿಮ್ಮ ಸ್ಪಂದನಶೀಲತೆ ಶ್ಲಾಘನೀಯ. ಅಧುನಿಕೀಕರಣದ ಸೋಗಿನಲ್ಲಿ ಮಾನವೀಯ ಸಂಬಂಧಗಳ ನವಿರು ಎಳೆ, ಸ್ಪಂದನ, ಸಂವೇದನೆಗಳೆಲ್ಲ ಅಪಮೌಲ್ಯವಾಗುತ್ತಿರುವಾಗ ನಿಮ್ಮ ಕಳಕಳಿ, ಅಂತಃಕರಣ ಮೆಚ್ಚಬೇಕಾದದ್ದು.

ನಿಮಗೆ 'ದೀರ್ಘ'ದ ಮೇಲೆ ತುಂಬ ಪ್ರೀತಿಯ? ಹಾಗಾಗಿ ಕಾಗುಣಿತದ ತಪ್ಪುಗಳಾಗುತ್ತವೆ ಅನ್ಸತ್ತೆ.

ಶ್ಯಾಮಾ said...

@ Jagali Bhagavata
ನೆನಪಿನಂಗಳಕ್ಕೆ ಸ್ವಾಗತ...

ಮೊದಲನೆಯದಾಗಿ ಕಾಗುಣಿತದ ತಪ್ಪುಗಳಾಗುವುದಕ್ಕೆ ದೀರ್ಘದ ಮೇಲಿನ ಪ್ರೀತಿ ಕಾರಣವಲ್ಲ.. ಕನ್ನಡದಲ್ಲಿ ಬರೆಯುವಾಗ ನಾನು ಎದುರಿಸುತ್ತಿರುವ ತೊಂದರೆ ಅದು ಎಲ್ಲ ಓದುಗರು ಅದನ್ನೇ ಹೇಳುತ್ತಿರುವುದನ್ನು ಕೇಳಿ ಬೇಜಾರಾಗ್ತಿದೆ ಆದ್ರೆ ಅದನ್ನು ಸರಿಪಡಿಸುವುದು ಹೇಗಂತ ಗೊತ್ತಿಲ್ಲ...
ಇನ್ನು ನನ್ನ ಬರಹದಲ್ಲಿ ವಿಷಾದ ಭಾವಗಳೇ ಹೆಚ್ಚು ತುಂಬಿರುವುದು ಏಕೋ ನಾನೂ ಒಮ್ಮೊಮ್ಮೆ ಯೋಚಿಸುತ್ತೇನೆ.. ಬಹುಶಃ ನಾನು ವಿಷಾದದ mood ಅಲ್ಲಿ ಇರುವಾಗಷ್ಟೇ ನನಗೆ ಬರೆಯಲು inspiration ಸಿಗೋದು ಅನ್ಸುತ್ತೆ.. ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು

Jagali bhaagavata said...

ಶ್ಯಾಮಾ,
ಬೇಜಾರ್ ಮಾಡ್ಕೊಳ್ಳೊ ಅಗತ್ಯ ಇಲ್ಲ. ನಾನು ನಿಮ್ಮ ಪ್ರೂಫ್ ರೀಡರ್ ಆಗ್ತೇನೆ. ಆದ್ರೆ ಒಂದು ಶರತ್ತು...ನೀವು ನಂಗೆ ಗಾಂಧಿ ಬಜಾರಿನ ವಿದ್ಯಾರ್ಥಿ ಭವನದಲ್ಲಿ ಗರಿಗರಿ ಮಸಾಲೆ ದೋಸೆ, ರವೆವಡೆ ಕೊಡಿಸ್ಚ್ಬೇಕು (ನಾನು ಬೆಂಗ್ಳೂರಿಗೆ ಚಿತ್ತೈಸಿದಾಗ:-)). ಆಯ್ತಾ?

ಶ್ಯಾಮಾ said...

@ Jagali Bhagavata

ಓಹೋ ಕೊಡಿಸೋಣ ಅದಕ್ಕೇನು? ನಾನಂತೂ ರೆಡಿ.. ;-)